ಬೆಂಗಳೂರಿನ ಆತ್ಮದಲ್ಲಿ ತತ್ವಜ್ಞಾನ, ಆ್ಯಕ್ಷನ್ನಲ್ಲಿ ಟೆಕ್ ಜ್ಞಾನ: ಹೊಗಳಿದ ಮೋದಿ
ಬೆಂಗಳೂರಿನ ಜನ ಆತ್ಮದಲ್ಲಿ ತತ್ವಜ್ಞಾನ, ಆ್ಯಕ್ಷನ್ನಲ್ಲಿ ಟೆಕ್ ಜ್ಞಾನವಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಇಂದು ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಯೆಲ್ಲೋ ಲೈನ್, ಮೂರನೇ ಹಂತದ ಮೆಟ್ರೋ ಯೋಜನೆ ಹಾಗೂ ವಂದೇ ಭಾರತ್ ರೈಲಿಗೆ ಚಾಲನೆ ನೀಡಿ ಮಾತನಾಡಿದರು. 21ನೇ ಶತಮಾನದಲ್ಲಿ ಅರ್ಬನ್ ಪ್ಲ್ಯಾನಿಂಗ್ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮುಖ್ಯವಾಗುತ್ತದೆ. ಬೆಂಗಳೂರನ್ನು ಭವಿಷ್ಯಕ್ಕೆ ಅನುಕೂಲವಾಗುವಂತೆ ತಯಾರಿ ನಡೆಸುವ ಅಗತ್ಯವಿದೆ ಎಂದರು.

ಬೆಂಗಳೂರು, ಆಗಸ್ಟ್10: ಬೆಂಗಳೂರಿನ ಜನರ ಆತ್ಮದಲ್ಲಿ ತತ್ವಜ್ಞಾನ, ಆ್ಯಕ್ಷನ್ನಲ್ಲಿ ಟೆಕ್ ಜ್ಞಾನವಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೊಗಳಿದ್ದಾರೆ. ಇಂದು ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಯೆಲ್ಲೋ ಲೈನ್, ಮೂರನೇ ಹಂತದ ಮೆಟ್ರೋ ಯೋಜನೆ ಹಾಗೂ ವಂದೇ ಭಾರತ್ ರೈಲಿಗೆ ಚಾಲನೆ ನೀಡಿ ಮಾತನಾಡಿದರು. 21ನೇ ಶತಮಾನದಲ್ಲಿ ಅರ್ಬನ್ ಪ್ಲ್ಯಾನಿಂಗ್ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮುಖ್ಯವಾಗುತ್ತದೆ. ಬೆಂಗಳೂರನ್ನು ಭವಿಷ್ಯಕ್ಕೆ ಅನುಕೂಲವಾಗುವಂತೆ ತಯಾರಿ ನಡೆಸುವ ಅಗತ್ಯವಿದೆ ಎಂದರು.
ಕರ್ನಾಟಕಕ್ಕೆ ಕಾಲಿಡುತ್ತಿದ್ದಂತೆ ನನ್ನದು ಎನ್ನುವ ಭಾವನೆ ಮೂಡುತ್ತದೆ. ಇಲ್ಲಿಯ ಸಂಸ್ಕೃತಿ, ಹಾಗೂ ಪ್ರೀತಿ ಹಾಗೂ ಕನ್ನಡ ಭಾಷೆಯ ಸಿಹಿ ಹೃದಯ ಸ್ಪರ್ಶಿಸುತ್ತದೆ ಎಂದರು.
ಬೆಂಗಳೂರು ನಗರದ ಆತ್ಮೀಯರೇ ನಿಮಗೆಲ್ಲಾ ನನ್ನ ನಮಸ್ಕಾರಗಳು ಎಂದು ಹೇಳುತ್ತಾ ಮೋದಿ ಭಾಷಣ ಆರಂಭಿಸಿದರು. ಆಪರೇಷನ್ ಸಿಂಧೂರ್ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದೇನೆ. ಆಪರೇಷನ್ ಸಿಂಧೂರ್ನಲ್ಲಿ ಭಾರತೀಯ ಸೇನೆಯ ಸಫಲತೆ ಹಾಗೂ ಗಡಿಯನ್ನು ದಾಟಿ ಪಾಕಿಸ್ತಾನಕ್ಕೆ ಹೋಗಿ ಉಗ್ರರ ನೆಲೆಗಳನ್ನು ನಾಶಪಡಿಸಿರುವುದು ಇಡೀ ದೇಶಕ್ಕೆ ಭಾರತದ ಹೊಸ ಸ್ವರೂಪದ ದರ್ಶನವನ್ನು ಮಾಡಿದಂತಾಗಿದೆ ಎಂದರು.
ಆಪರೇಷನ್ ಸಿಂಧೂರ್ ಸಫಲತೆ ಹಿಂದೆ ಟೆಕ್ನಾಲಜಿ ಇತ್ತು, ಡಿಫೆನ್ಸ್ನಲ್ಲಿ ಮೇಕ್ ಇನ್ ಇಂಡಿಯಾದ ತಾಕತ್ತಿತ್ತು, ಇದರಲ್ಲಿ ಬೆಂಗಳೂಎಉ, ಕರ್ನಾಟಕದ ಯುವಕರ ಕೊಡುಗೆಯೂ ಇದೆ ಎಂದರು. ಮುಂದುವರೆದ ಆರ್ಥಿಕತೆಯಲ್ಲಿ ಟಾಪ್ ಹತ್ತರಲ್ಲಿ ಐದನೇ ಸ್ಥಾನದಲ್ಲಿದ್ದೇವೆ, ಶೀಘ್ರ ಟಾಪ್ ಮೂರನೇ ಸ್ಥಾನದಲ್ಲಿ ಭಾರತ ಇರಲಿದೆ. 2014ಕ್ಕೂ ಮೊದಲು ಕೇವಲ ಐದು ನಗರಗಳಿಗೆ ಮೆಟ್ರೋ ಸೀಮಿತವಾಗಿತ್ತು.
ಮತ್ತಷ್ಟು ಓದಿ: 2014ರಿಂದ ಕರ್ನಾಟಕ ರೈಲ್ವೆ ಬಜೆಟ್ನಲ್ಲಿ 9 ಪಟ್ಟು ಹೆಚ್ಚಳ: ಅಶ್ವಿನಿವೈಷ್ಣವ್
ಈಗ 24 ನಗರಗಳಲ್ಲಿದೆ. ವಿಶ್ವದಲ್ಲಿ ಭಾರತವು ಮೆಟ್ರೋ ಸಂಪರ್ಕ ಹೊಂದಿದ ಮೂರನೇ ರಾಷ್ಟ್ರವಾಗಿದೆ. ಸ್ವಾತಂತ್ರ್ಯ ಬಂದಾಗಿಂದ 2014ರವರೆಗೆ ಕೇವಲ 20 ಸಾವಿರ ರೈಲ್ವೆ ಎಲೆಕ್ಟ್ರಿಫಿಕೇಷನ್ ಮಾಡಲಾಗಿತ್ತು, ಆದರೆ ಈಗ ಅದರ ಸಂಖ್ಯೆ 40 ಸಾವಿರಕ್ಕೆ ಏರಿದೆ. 2014ಕ್ಕೂ ಮೊದಲು 74 ಏರ್ಪೋರ್ಟ್ಗಳಿದ್ದವು, ಬಳಿಕ ಅದು 160ಕ್ಕೆ ಏರಿದೆ.
#WATCH | Karnataka | Prime Minister Narendra Modi says, “We are seeing Bangalore emerging as a city that has become a symbol of the rise of the new India… A city that has put India’s flag on the global IT map. If there is anything behind Bangalore’s success story, it is the… pic.twitter.com/1cPyoEwky6
— ANI (@ANI) August 10, 2025
ಇನ್ನು ಆರೋಗ್ಯ ಹಾಗ ಶಿಕ್ಷಣದವಿಚಾರಕ್ಕೆ ಬಂದರೆ 2014 7 ಏಮ್ಸ್ ಹಾಗೂ 321 ಮೆಡಿಕಲ್ ಕಾಲೇಜುಗಳಿದ್ದವು ಈಗ ಅದರ ಸಂಖ್ಯೆ 22 ಏಮ್ಸ್ ಹಾಗೂ, 704 ಮೆಡಿಕಲ್ ಕಾಲೇಜುಗಳಾಗಿವೆ. ರಾಜ್ಯ ಸರ್ಕಾರವಿರಲಿ, ಕೇಂದ್ರ ಸರ್ಕಾರವಿರಲಿ ಜನರ ಸೇವೆಗಾಗಿಯೇ ಇರುವುದು ಎಂದರು.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Sun, 10 August 25
