ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಮತ್ತೊಮ್ಮೆ ಮೋದಿ ಸಂಪುಟ ಸೇರುವ ಸಂಭವ, ದೆಹಲಿಗೆ ಬುಲಾವ್!
Union Cabinet Expansion: ‘ಜುಲೈ 8ರಂದು ಕೇಂದ್ರದ ಹಿರಿಯ ನಾಯಕರಿಂದ ದೆಹಲಿಗೆ ಬರುವಂತೆ ಸಂದೇಶ ಬಂದಿದೆ. ಯಾವ ಕಾರಣಕ್ಕಾಗಿ ದೆಹಲಿಗೆ ಕರೆದಿದ್ದಾರೆ ಎಂದು ತಿಳಿದಿಲ್ಲ’ ಎಂದು ಸ್ವತಃ ಸಂಸದ ರಮೇಶ ಜಿಗಜಿಣಗಿ ಟಿವಿ9ಗೆ ತಿಳಿಸಿದ್ದಾರೆ.
ಬೆಂಗಳೂರು: ನಾಡಿದ್ದು, ಜುಲೈ 8ಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಕೇಂದ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಕರ್ನಾಠಕದ ಇನ್ನೋರ್ವ ಸಂಸದರಿಘು ದೆಹಲಿಯಿಂದ ಬುಲಾವ್ ಬಂದಿದೆ. ವಿಜಯಪುರ ಸಂಸದ ರಮೇಶ್ ಜಿಗಜಿಣಗಿಗೆ ಎನ್ಡಿಎ ಮೈತ್ರಿಕೂಟದ ಉನ್ನತ ಮಟ್ಟದ ನಾಯಕರು ಆಹ್ವಾನ ನೀಡಿದ್ದು, ಅವರು ದೆಹಲಿಗೆ ತೆರಳಲು ಅಣಿಯಾಗಿದ್ದಾರೆ. ‘ಜುಲೈ 8ರಂದು ಕೇಂದ್ರದ ಹಿರಿಯ ನಾಯಕರಿಂದ ದೆಹಲಿಗೆ ಬರುವಂತೆ ಸಂದೇಶ ಬಂದಿದೆ. ಯಾವ ಕಾರಣಕ್ಕಾಗಿ ದೆಹಲಿಗೆ ಕರೆದಿದ್ದಾರೆ ಎಂದು ತಿಳಿದಿಲ್ಲ’ ಎಂದು ಸ್ವತಃ ಸಂಸದ ರಮೇಶ ಜಿಗಜಿಣಗಿ ಟಿವಿ9ಗೆ ತಿಳಿಸಿದ್ದಾರೆ. ಈ ಹಿಂದೆ ಮೋದಿ ಸಂಪುಟದಲ್ಲಿ ಗ್ರಾಮೀಣ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ಖಾತೆಯ ರಾಜ್ಯ ಸಚಿವರಾಗಿದ್ದ ಸಂಸದ ರಮೇಶ ಜಿಗಜಿಣಗಿ ಅವರಿಗೆ ಇನ್ನೊಮ್ಮೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ದಟ್ಟವಾಗಿದೆ.
ಕೇಂದ್ರ ಸಂಪುಟದಲ್ಲಿ ಕರ್ನಾಟಕದಿಂದ ಇಬ್ಬರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕೇಂದ್ರ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಚಿತ್ರದುರ್ಗ ಕ್ಷೇತ್ರದ ಸಂಸದ ನಾರಾಯಣಸ್ವಾಮಿಗೆ ಕೇಂದ್ರ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ವರಿಷ್ಠರು ಬುಲಾವ್ ನೀಡಿದ ಹಿನ್ನೆಲೆ ಮಧ್ಯಾಹ್ನ ದೆಹಲಿಗೆ ತೆರಳಲು ನಾರಾಯಣಸ್ವಾಮಿ ಸಿದ್ಧತೆ ಮಾಡಿಕೊಂಡಿದ್ದಾರೆ. ಪತ್ನಿ ವಿಜಯ ಮತ್ತು ಪುತ್ರಿ ಶೀತಲ್ ಸೇರಿ ಕುಟುಂಬ ಸಮೇತ ದೆಹಲಿಗೆ ತೆರಳಲಿದ್ದಾರೆ.
ಮೊದಲ ಬಾರಿಗೆ ಸಂಸದರಾಗಿರುವ ಎಡಗೈ ಸಮುದಾಯದ ನಾಯಕ ನಾರಾಯಣಸ್ವಾಮಿಗೆ ಮೋದಿ ಸಂಪುಟದಲ್ಲಿ ಸ್ಥಾನ ಸಿಗುತ್ತಾ? ಎಂದು ನೋಡಬೇಕಿದೆ. ನಾರಾಯಣಸ್ವಾಮಿಗೆ ಜಾತಿ ಲೆಕ್ಕಾಚಾರದ ಆಧಾರದ ಮೇಲೆ ಸಚಿವ ಸ್ಥಾನ ಒಲಿಯುವ ಸಾಧ್ಯತೆ ಇದೆ. ಪರಿಶಿಷ್ಟ ಜಾತಿ ಎಡಗೈ ಸಮೂದಾಯಕ್ಕೆ ಸೇರಿರುವುದರಿಂದ ಸಚಿವ ಸ್ಥಾನ ಗಿಟ್ಟಿಸಿಕೊಳ್ಳು ಅವಕಾಶ ಇದೆ.
ಇದನ್ನೂ ಓದಿ:
(PM Narendra Modi Cabinet Expansion Vijayapura MP Ramesh Jigajinagi Travel to Delhi)
Published On - 3:48 pm, Tue, 6 July 21