Thawar Chand Gehlot: ಸಂಘ ಪರಿವಾರ ಹಿನ್ನೆಲೆಯ ಥಾವರಚಂದ್ ಗೆಹಲೋತ್ ಈ ಹಿಂದೆಯೂ ಕರ್ನಾಟಕದೊಂದಿಗೆ ಸಂಪರ್ಕದಲ್ಲಿದ್ದರು

New Governor of Karnataka: ಸದ್ಯ ರಾಜ್ಯಸಭೆಯ ಸಭಾನಾಯಕನಾಗಿಯಕಾಗಿರುವ ಥಾವರಚಂದ್ ಗೆಹಲೋತ್, ಇದೀಗ ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿರುವ ಕಾರಣ ರಾಜ್ಯಸಭೆಯ ಸಭಾನಾಯಕ ಹುದ್ದೆಗೆ ರಾಜೀನಾಮೆ ನೀಡಬೇಕಿದೆ. ಹಿಂದೆ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಕೆಲಸ ಮಾಡಿದ್ದ ಅವರು ಕರ್ನಾಟಕದೊಂದಿಗೆ ಸಂಬಂಧ ಹೊಂದಿದ್ದರು ಎನ್ನುವುದು ಗಮನಾರ್ಹ.

Thawar Chand Gehlot: ಸಂಘ ಪರಿವಾರ ಹಿನ್ನೆಲೆಯ ಥಾವರಚಂದ್ ಗೆಹಲೋತ್ ಈ ಹಿಂದೆಯೂ ಕರ್ನಾಟಕದೊಂದಿಗೆ ಸಂಪರ್ಕದಲ್ಲಿದ್ದರು
ಕರ್ನಾಟಕದ 19ನೇ ರಾಜ್ಯಪಾಲರಾಗಿ ತಾವರ್‌ಚಂದ್ ಗೆಹ್ಲೋಟ್ ನೇಮಕ
Follow us
TV9 Web
| Updated By: ganapathi bhat

Updated on:Jul 06, 2021 | 8:41 PM

ಬೆಂಗಳೂರು: ಕರ್ನಾಟಕ ರಾಜ್ಯದ ನೂತನ ರಾಜ್ಯಪಾಲರಾಗಿ ಥಾವರಚಂದ್ ಗೆಹಲೋತ್ ನೇಮಕಗೊಂಡಿದ್ದಾರೆ. ಕರ್ನಾಟಕ ಸೇರಿದಂತೆ 8 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ ಮಾಡಲಾಗಿದ್ದು, ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಇಂದು (ಜುಲೈ 6, ಮಂಗಳವಾರ) ನೇಮಕಾತಿ ಆದೇಶ ಮಾಡಿದ್ದಾರೆ. ಆ ಮೂಲಕ ಕರ್ನಾಟಕ ರಾಜ್ಯದ 19ನೇ ರಾಜ್ಯಪಾಲರಾಗಿ ಥಾವರಚಂದ್ ಗೆಹಲೋತ್ ಅಧಿಕಾರ ಸ್ವೀಕರಿಸಲಿದ್ದು, ಉನ್ನತ ಹುದ್ದೆಯನ್ನು ಅಲಂಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಥಾವರಚಂದ್ ಗೆಹಲೋತ್ ಅವರ ಹಿನ್ನೆಲೆ ಹಾಗೂ ಕಿರುಪರಿಚಯ ಇಲ್ಲಿದೆ.

ಕರ್ನಾಟಕದ ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಲಿರುವ ಥಾವರಚಂದ್ ಗೆಹಲೋತ್, 1948ನೇ ಇಸವಿಯ ಮೇ 18ರಂದು ಜನಿಸಿದರು. ಪ್ರಸ್ತುತ ಅವರು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂರು ಬಾರಿ ಮಧ್ಯಪ್ರದೇಶ ಶಾಸಕರಾಗಿ, ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಥಾವರಚಂದ್ ಗೆಹಲೋತ್​ ಮೂಲತಃ ಮಧ್ಯಪ್ರದೇಶದ ನಾಗ್ಡಾದವರು. ಈಗ ರಾಜ್ಯಸಭೆಯ ಸದಸ್ಯರೂ ಆಗಿರುವ ಅವರು ಈ ಹಿಂದೆ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿಯಾಗಿದ್ದರು. ಸಂಘ ಪರಿವಾರದ ಹಿನ್ನೆಲೆಯ ಥಾವರಚಂದ್ ಗೆಹಲೋತ್, ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದರು.

ಸದ್ಯ ರಾಜ್ಯಸಭೆಯ ಸಭಾನಾಯಕನಾಗಿಯಕಾಗಿರುವ ಥಾವರಚಂದ್ ಗೆಹಲೋತ್, ಇದೀಗ ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿರುವ ಕಾರಣ ರಾಜ್ಯಸಭೆಯ ಸಭಾನಾಯಕ ಹುದ್ದೆಗೆ ರಾಜೀನಾಮೆ ನೀಡಬೇಕಿದೆ. ಹಿಂದೆ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಕೆಲಸ ಮಾಡಿದ್ದ ಗೆಹಲೋತ್ ಅವರು ಕರ್ನಾಟಕದೊಂದಿಗೆ ಸಂಬಂಧ ಹೊಂದಿದ್ದರು ಎನ್ನುವುದು ಗಮನಾರ್ಹ.

ಪ್ರಸ್ತುತ ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದ ವಜುಬಾಯಿ ವಾಲಾ ಅವರ ಅವಧಿ ಪೂರ್ಣಗೊಳ್ಳುತ್ತಿದ್ದು, ಆ ಸ್ಥಾನಕ್ಕೆ ಸಂಘಪರಿವಾರದ ಹಿನ್ನೆಲೆಯ ಥಾವರಚಂದ್ ಗೆಹಲೋತ್ ಆಗಮಿಸಲಿದ್ದಾರೆ. ಕರ್ನಾಟಕದ 18ನೇ ರಾಜ್ಯಪಾಲರಾಗಿದ್ದ ವಜುಬಾಯಿ ವಾಲಾ ಅವರ ಅವಧಿಯಲ್ಲಿ ರಾಜ್ಯದಲ್ಲಿ ನಾಲ್ವರು ಮುಖ್ಯಮಂತ್ರಿಗಳು (ಯಡಿಯೂರಪ್ಪ ಎರಡು ಬಾರಿ) ಕಾರ್ಯ ನಿರ್ವಹಿಸಿದ್ದಾರೆ. 2014ರ ಸೆಪ್ಟೆಂಬರ್ 1 ರಂದು ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡಿದ್ದ ವಾಲಾ ಏಳು ವರ್ಷ ಕರ್ನಾಟಕ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ 19ನೇ ರಾಜ್ಯಪಾಲರಾಗಿ ತಾವರ್‌ಚಂದ್ ಗೆಹ್ಲೋಟ್​ ನೇಮಕವಾಗಿದ್ದಾರೆ.

ಎಂಟು ರಾಜ್ಯಗಳ ನೂತನ ರಾಜ್ಯಪಾಲರ ಪಟ್ಟಿ ಹೀಗಿದೆ ಕರ್ನಾಟಕ: ಥಾವರಚಂದ್ ಗೆಹಲೋತ್ ಮಿಜೋರಾಂ: ಹರಿಬಾಬು ಕಂಭಂಪತಿ ಮಧ್ಯಪ್ರದೇಶ: ಮಂಗೂಭಾಯ್ ಛಗನ್‌ಭಾಯ್ ಪಟೇಲ್ ಹಿಮಾಚಲಪ್ರದೇಶ: ರಾಜೇಂದ್ರನ್ ವಿಶ್ವನಾಥ್ ಅರ್ಲೇಕರ್ ಗೋವಾ: ಪಿ.ಎಸ್.ಶ್ರೀಧರನ್ ಪಿಳ್ಳೈ ತ್ರಿಪುರಾ: ಸತ್ಯದೇವ್ ನಾರಾಯಣ್ ಆರ್ಯ ಜಾರ್ಖಂಡ್: ರಮೇಶ್ ಬೈಸ್ ಹರಿಯಾಣ: ಬಂಡಾರು ದತ್ತಾತ್ರೇಯ

ಇದನ್ನೂ ಓದಿ: Thawar Chand Gehlot: ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರ್‌ಚಂದ್ ಗೆಹ್ಲೋಟ್ ನೇಮಕ

Published On - 1:32 pm, Tue, 6 July 21