ಸುಳ್ಯ: ಪ್ರಧಾನಿ ಮೋದಿಯೇ ಸೂಚಿಸಿದರೂ ಊರಿನ ಬೇಡಿಕೆ ಈಡೇರಲಿಲ್ಲ! ಆಗ ಗ್ರಾಮಸ್ಥರು ಏನು ಮಾಡಿದರು ಗೊತ್ತಾ?

PMO: ತಕ್ಷಣವೇ ಪ್ರಧಾನಿ ಕಾರ್ಯಾಲಯದಿಂದ ಸಮಸ್ಯೆ ಬಗೆಹರಿಸುವಂತೆ ದ.ಕ. ಜಿಲ್ಲಾ ಪಂಚಾಯತ್ ಗೆ  ಸೂಚನೆ ಬಂದಿತು. ಪ್ರಧಾನಿಯೇ ಸೂಚಿಸಿದರೂ ಸ್ಥಳೀಯ ಅಧಿಕಾರಿಗಳು ಇಚ್ಛಾ ಶಕ್ತಿ ಮೆರೆಯಲಿಲ್ಲ. ಇನ್ನೂ ಕಾದರೆ ಪ್ರಯೋಜನವಿಲ್ಲ ಅಂತಾ ತಾವೇ ಸಮಸ್ಯೆ ಬಗೆಹರಿಸಲು ಗುತ್ತಿಗಾರು ಗ್ರಾಮಸ್ಥರು ಮುಂದಾದರು.

ಸುಳ್ಯ: ಪ್ರಧಾನಿ ಮೋದಿಯೇ ಸೂಚಿಸಿದರೂ ಊರಿನ ಬೇಡಿಕೆ ಈಡೇರಲಿಲ್ಲ! ಆಗ ಗ್ರಾಮಸ್ಥರು ಏನು ಮಾಡಿದರು ಗೊತ್ತಾ?
ಸುಳ್ಯ: ಪ್ರಧಾನಿ ಮೋದಿಯೇ ಸೂಚಿಸಿದರೂ ಊರಿನ ಜನೋಪಯೋಗಿ ಬೇಡಿಕೆ ಈಡೇರಲಿಲ್ಲ! ಆಗ ಗ್ರಾಮಸ್ಥರು ಏನು ಮಾಡಿದರು ಗೊತ್ತಾ?
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 25, 2021 | 12:41 PM

ಮಂಗಳೂರು: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯೇ ಸೂಚಿಸಿದರೂ ಊರಿನ ಬಹು ಜನೋಪಯೋಗಿ ಬೇಡಿಕೆಯೊಂದು ಈಡೇರಿಲ್ಲ! ಆದರೆ ತಮ್ಮ ಗುರಿಯಿಂದ ವಿಮುಖರಾಗದ ಗ್ರಾಮಸ್ಥರು ತಾವೇ, ಸ್ವಂತ ಖರ್ಚಿನಲ್ಲಿ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ ! ದಕ್ಷಿಣ ಕ‌ನ್ನಡ ಜಿಲ್ಲೆಯ ಸುಳ್ಯ (Sullia) ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಬಳಿಯ ಜನ ಇಂತಹ ವಿಪರ್ಯಾಸ ಪ್ರಸಂಗಕ್ಕೆ  ಸಾಕ್ಷಿಯಾಗಿದ್ದಾರೆ. 

ಇದು ಸಚಿವ ಎಸ್ ಅಂಗಾರ ಪ್ರತಿನಿಧಿಸುವ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿದೆ! ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಬಳಿಯ ಜನ ತಮ್ಮೂರಿನ ಹೊಳೆಗೆ ಶಾಶ್ವತ ಸೇತುವೆ ಬೇಕೆಂಬುದು ಪುರಾತನ ಮನವಿಯಾಗಿತ್ತು. ಸ್ಥಳೀಯ ಶಾಸಕ ಮತ್ತು ಸಚಿವರುಗಳಿಗೆ ಮನವಿ ಸಲ್ಲಿಸಿ, ಸಲ್ಲಿಸಿ ಪ್ರಯೋಜನಕಾರಿಯಾಗದೇ ನೇರವಾಗಿ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೂ ಮನವಿ ಮಾಡಿದ್ದರು.  ಗ್ರಾಮಸ್ಥರು ತಾವೇ ವಿಡಿಯೋ ಸಿ.ಡಿ.  ಕಳುಹಿಸಿ ಸೇತುವೆಗೆ ಮನವಿ ಮಾಡಿದ್ದರು.

ತಕ್ಷಣವೇ ಪ್ರಧಾನಿ ಕಾರ್ಯಾಲಯದಿಂದ (PMO) ಸಮಸ್ಯೆ ಬಗೆಹರಿಸುವಂತೆ ದ.ಕ. ಜಿಲ್ಲಾ ಪಂಚಾಯತ್ ಗೆ  ಸೂಚನೆ ಬಂದಿತು. ಪ್ರಧಾನಿಯೇ ಸೂಚಿಸಿದರೂ ಸ್ಥಳೀಯ ಅಧಿಕಾರಿಗಳು ಇಚ್ಛಾ ಶಕ್ತಿ ಮೆರೆಯಲಿಲ್ಲ. ಇನ್ನೂ ಕಾದರೆ ಪ್ರಯೋಜನವಿಲ್ಲ ಅಂತಾ ತಾವೇ ಸಮಸ್ಯೆ ಬಗೆಹರಿಸಲು ಗುತ್ತಿಗಾರು ಗ್ರಾಮಸ್ಥರು ಮುಂದಾದರು.

PMO intimation also fail to yield essential bridge for guthigaru village in sullia dakshina kannada 2

ಗ್ರಾಮಸ್ಥರು ತಾವೇ ವಿಡಿಯೋ ಸಿ.ಡಿ.  ಕಳುಹಿಸಿ ಸೇತುವೆಗೆ ಮನವಿ ಮಾಡಿದ್ದರು.

ಅಂದಹಾಗೆ ಸುಳ್ಯದ ಈ ಗುತ್ತಿಗಾರು ಗ್ರಾಮವು (Guthigaru Village ) ಸಚಿವ ಎಸ್. ಅಂಗಾರ ಪ್ರತಿನಿಧಿಸುವ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿದೆ! ಆದರೆ ಇಲ್ಲಿನ ಜನಪ್ರತಿನಿಧಿಗಳು ನೂರಾರು ಬಾರಿ ಮನವಿ ಮಾಡಿದರೂ ಗಣನೆಗೆ ತೆಗೆದುಕೊಳ್ಳಲಿಲ್ಲ. ಆಗ ಗ್ರಾಮಸ್ಥರು ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ (Crowd Fund) ತಾತ್ಕಾಲಿಕ ಕಬ್ಬಿಣದ ಸೇತುವೆಯನ್ನು ತಯಾರಿಸಿದರು.

ಗ್ರಾಮಸ್ಥರೇ ಮುಂದೆ ಬಂದು ತಮಗೆ ಅತ್ಯವಶ್ಯಕವಾಗಿದ್ದ ಸೇತುವೆ ನಿರ್ಮಾಣ ಕಾಮಗಾರಿ (Guthigaru Mogra Bridge) ಕೈಗೊಂಡರು. ಹಲವು ದಶಕಗಳಿಂದ ಎದುರಿಸುತ್ತಿದ್ದ ತೀವ್ರ ಸಮಸ್ಯೆಗೆ ಮುಕ್ತಿ ನೀಡಲು ಗ್ರಾಮಸ್ಥರೇ ಮುಂದಾದರು. ಹೊಳೆಯ ಇನ್ನೊಂದು ಭಾಗದಲ್ಲಿರುವ ಶಾಲೆ ಮತ್ತು ಅಂಗನವಾಡಿ ಕೇಂದ್ರ ತಲುಪುವುದು ಗುತ್ತಿಗಾರು ಗ್ರಾಮಸ್ಥರ ಅಗತ್ಯವಾಗಿತ್ತು. ಮಳೆಗಾಲದ ಸಂದರ್ಭದಲ್ಲಿ ಪೋಷಕರು ಹೊಳೆಯಲ್ಲಿ ಮಕ್ಕಳನ್ನು ಹಿಡಿದು ಶಾಲೆಗೆ ತಲುಪಿಸುತ್ತಿದ್ದರು. ಅದನ್ನು ಅನೇಕ ಬಾರಿ ನೋಡಿಯೂ ಇಲ್ಲಿನ ಜನಪ್ರತಿನಿಧಿಗಳು/ ಅಧಿಕಾರಿಗಳ ಮನಸ್ಸು ಕರಗಿರಲಿಲ್ಲ; ತಮ್ಮ ಜವಾಬ್ದಾರಿಯನ್ನೂ ಪೂರೈಸಲಿಲ್ಲ ಎಂಬುದು ಖೇದಕರ ಸಂಗತಿ.

(PMO intimation also fail to yield essential bridge for guthigaru village in sullia dakshina kannada)

Published On - 12:40 pm, Fri, 25 June 21

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ