ಲಾಕ್​ಡೌನ್​ ವೇಳೆ ಕೆಲ್ಸ ಕಳೆದುಕೊಂಡು.. ಕ್ರಿಕೆಟ್ ಮೈದಾನದಲ್ಲಿ ಕಳ್ಳತನ ಮಾಡ್ತಿದ್ದ ಯುವಕ ಅರೆಸ್ಟ್​

Lockdown effect | ಮಾಲಿನ್ಯ ನಿಯಂತ್ರಣ ಮಂಡಳಿಯ ಗುತ್ತಿಗೆ ಆಧಾರದ ಆಫೀಸ್ ಬಾಯ್ ಆಗಿದ್ದ ಆರೋಪಿ ರವಿ ನಂತರ ಡೆಕೊರೇಟ್ ಬಾಯ್ ಕೆಲಸ ಮಾಡಿಕೊಂಡು ಇದ್ದ. ಬಳಿಕ ಲಾಕ್​ಡೌನ್​ನಲ್ಲಿ ಕೆಲಸ ಇರಲಿಲ್ಲ. ಹೀಗಾಗಿ ಈ ನಡುವೆ ದೊಡ್ಡ ದೊಡ್ಡ ಮೈದಾನದ ಕ್ರಿಕೆಟ್ ಗ್ರೌಂಡ್ ಟಾರ್ಗೆಟ್ ಮಾಡುತಿದ್ದ ರವಿ ಕಳ್ಳತನ ಮಾಡಲು ಶುರು ಮಾಡಿದ್ದಾನೆ.

ಲಾಕ್​ಡೌನ್​ ವೇಳೆ ಕೆಲ್ಸ ಕಳೆದುಕೊಂಡು.. ಕ್ರಿಕೆಟ್ ಮೈದಾನದಲ್ಲಿ ಕಳ್ಳತನ ಮಾಡ್ತಿದ್ದ ಯುವಕ ಅರೆಸ್ಟ್​
ಕ್ರಿಕೆಟ್​ ಮೈದಾನದಲ್ಲಿ ಕಳ್ಳತನ ಮಾಡುತ್ತಿದ್ದ ರವಿ ಬಂಧನ
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Mar 15, 2021 | 1:05 PM

ಬೆಂಗಳೂರು: ದೊಡ್ಡ ಮೈದಾನಗಳಲ್ಲಿ ಕ್ರಿಕೆಟ್ ಪಂದ್ಯಾವಳಿಗಳ ವೇಳೆ ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಸವೇಶ್ವರ ನಗರ ನಿವಾಸಿ ರವಿ ಬಂಧಿತ ಆರೋಪಿ. ಬಂಧಿತನಿಂದ 31 ವಿವಿಧ ಮಾದರಿಯ ಮೊಬೈಲ್ ಫೋನ್ ಅನ್ನು ಪೊಲೀಸರು ವಶಕ್ಕೆ ಪಡಿಸಿಕೊಂಡಿದ್ದು, ಇನ್ನು ಹೆಚ್ಚಿನ ಮಾಹಿತಿಗಾಗಿ ವಿಚಾರಣೆ ನಡೆಸುತ್ತಿದ್ದಾರೆ.

ಈ ಹಿಂದೆ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಗುತ್ತಿಗೆ ಆಧಾರದಲ್ಲಿ ಆಫೀಸ್ ಬಾಯ್ ಆಗಿದ್ದ ಆರೋಪಿ ರವಿ ನಂತರ ಡೆಕೊರೇಟ್ ಬಾಯ್ ಕೆಲಸ ಮಾಡಿಕೊಂಡು ಇದ್ದ. ಬಳಿಕ ಲಾಕ್​ಡೌನ್​ನಲ್ಲಿ ಕೆಲಸ ಇರಲಿಲ್ಲ. ಹೀಗಾಗಿ ಈ ನಡುವೆ ದೊಡ್ಡ ದೊಡ್ಡ ಮೈದಾನದ ಕ್ರಿಕೆಟ್ ಗ್ರೌಂಡ್ ಟಾರ್ಗೆಟ್ ಮಾಡುತಿದ್ದ ರವಿ ಕಳ್ಳತನ ಮಾಡಲು ಶುರು ಮಾಡಿದ್ದಾನೆ.

ಪಂದ್ಯಾವಳಿಗಳ ವೇಳೆ ಆಟಗಾರರು ಒಂದೇ ಬ್ಯಾಗ್​ನಲ್ಲಿ ಮೊಬೈಲ್ ಇಡುವುದನ್ನು ನೋಡಿಕೊಳ್ಳುತಿದ್ದ ರವಿ, ಬಳಿಕ ತಾನೂ ಆಟಗಾರನ ರೀತಿ ಜರ್ಸಿ ತೊಟ್ಟು ಮೊಬೈಲ್ ಹಾಗೂ ಬ್ಯಾಗ್​ಗಳನ್ನು ಕದ್ದು ಪರಾರಿಯಾಗುತ್ತಿದ್ದ. ಬಸವನಗುಡಿ ನ್ಯಾಷನಲ್ ಗ್ರೌಂಡ್, ಮಲ್ಲೇಶ್ವರಂ, ಜಯನಗರ, ಜಾಲಹಳ್ಳಿ, ಹೆಚ್​ಎಂಟಿ ಗ್ರೌಂಡ್​ನಲ್ಲಿ ಕಳ್ಳತನ ಮಾಡಿದ್ದಾನೆ. ಇಷ್ಟೇ ಅಲ್ಲದೇ ಬಾಗಲಗುಂಟೆಯಲ್ಲೂ ಈ ರೀತಿಯ ಕೃತ್ಯವನ್ನು ಎಸಗಿರುವ ರವಿ ಸದ್ಯ ಜಾಲಹಳ್ಳಿ ಪೊಲೀಸರ ವಶದಲ್ಲಿದ್ದಾನೆ.

ಇದನ್ನೂ ಓದಿ: Serial theft: ಮೇಲ್ಚಾವಣಿ ಮೇಲೆ ಮಲಗಿದ್ದ ಮನೆಯವರು! ಅಂಗಡಿ, ಮನೆಗಳ ಸರಣಿ ಕಳ್ಳತನ: ಬೈಕ್, ನಗದು, ಚಿನ್ನಾಭರಣ ದೋಚಿ ಪರಾರಿ

ಇದನ್ನೂ ಓದಿ: ಚನ್ನಗಿರಿ ಶಾಸಕರ ಮನೆ ಅಂಗಳದಲ್ಲಿ ಬೆಳೆಸಿದ್ದ ಗಂಧದ ಮರ ಕಳ್ಳತನ