House Shifting ನಕಲಿ ಜಾಹಿರಾತು ನೀಡಿ ವಂಚನೆ: ಮೂವರು ಅಂತಾರಾಜ್ಯ ಕಳ್ಳರ ಸೆರೆ
House Shifting ದ್ವಿಚಕ್ರ ವಾಹನ ಹಾಗೂ ಕಾರು ಸೇರಿದಂತೆ ಮನೆ ವಸ್ತುಗಳನ್ನ ಒಂದೆಡೆಯಿಂದ ಮತ್ತೊಂದೆಡೆ ಸಾಗಿವುದಾಗಿ ಪೋಸ್ಟ್ ಹಾಕುತ್ತಿದ್ದು, ಬಳಿಕ ಗಿರಾಕಿಗಳಿಂದ ವಾಹನ ಪಡೆದು ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಬೆಂಗಳೂರು: ಮನೆ ಬದಲಾಯಿಸುವ ವೇಳೆ ಸರಕುಗಳನ್ನು ಸಾಗಿಸುವುದಾಗಿ ಆನ್ಲೈನ್ ಮೂಲಕ ವಂಚಿಸುತ್ತಿದ್ದವರನ್ನು ಬೆಂಗಳೂರಿನ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದ್ವಿಚಕ್ರ ವಾಹನ ಹಾಗೂ ಕಾರು ಸೇರಿದಂತೆ ಮನೆ ವಸ್ತುಗಳನ್ನ ಒಂದೆಡೆಯಿಂದ ಮತ್ತೊಂದೆಡೆ ಸಾಗಿಸುವುದಾಗಿ ಪೋಸ್ಟ್ ಹಾಕುತ್ತಿದ್ದು, ಬಳಿಕ ಗಿರಾಕಿಗಳಿಂದ ವಾಹನ ಪಡೆದು ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ಯಾಕರ್ಸ್ ಹಾಗೂ ಮೂವರ್ಸ್ ವಿಆರ್ಎಲ್ ಪ್ಯಾಕರ್ಸ್ ಎಂಬ ಹೆಸರಿನಲ್ಲಿ ಜಾಹೀರಾತು ನೀಡುತ್ತಿದ್ದ ಅಂತಾರಾಜ್ಯ ಕಳ್ಳರಾದ ಶಿವಕುಮಾರ್, ಸಂದೀಪ್, ಪ್ರದೀಪ್ನನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 1 ದ್ವಿಚಕ್ರ ವಾಹನ 1 ಕಾರು ಸೇರಿದಂತೆ ನಕಲಿ ಬಿಲ್ ಹಾಗೂ ಮೂರು ಮೊಬೈಲ್ ಜಪ್ತಿ ಮಾಡಿದ್ದಾರೆ. ಸದ್ಯ ಸಿಇಎನ್ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.



