ಕರ್ನಾಟಕದ ಸಾಹಿತಿಗಳಿಗೆ ಪದೇ ಪದೇ ಬೆದರಿಕೆ ಪತ್ರ: ಸಿಎಂ ಭೇಟಿ ಬೆನ್ನಲೆ ತನಿಖಾಧಿಕಾರಿ ನೇಮಕಕ್ಕೆ ಸೂಚಿಸಿದ ಪೊಲೀಸ್ ಇಲಾಖೆ

ಕರ್ನಾಟಕದ ಸಾಹಿತಿಗಳಿಗೆ ಪದೇ ಪದೇ ಬೆದರಿಕೆ ಪತ್ರ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಆಳವಾಗಿ ತನಿಖೆ ಮಾಡುವ ಉದ್ದೇಶದಿಂದ ಎಲ್ಲಾ ಪ್ರಕರಣಗಳನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಜತೆಗೆ ತನಿಖಾಧಿಕಾರಿಯಾಗಿ ಓರ್ವ ಎಸಿಪಿ ದರ್ಜೆ ಅಧಿಕಾರಿ ನೇಮಕಕ್ಕೆ ಪೊಲೀಸ್ ಇಲಾಖೆ​ ಸೂಚಿಸಿದೆ.

ಕರ್ನಾಟಕದ ಸಾಹಿತಿಗಳಿಗೆ ಪದೇ ಪದೇ ಬೆದರಿಕೆ ಪತ್ರ: ಸಿಎಂ ಭೇಟಿ ಬೆನ್ನಲೆ ತನಿಖಾಧಿಕಾರಿ ನೇಮಕಕ್ಕೆ ಸೂಚಿಸಿದ ಪೊಲೀಸ್ ಇಲಾಖೆ
ಸಾಹಿತಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ
Edited By:

Updated on: Aug 24, 2023 | 7:06 PM

ಬೆಂಗಳೂರು, ಆಗಸ್ಟ್ 24: ಬೆದರಿಕೆ (threats) ಪತ್ರಗಳಿಗೆ ಸಂಬಂಧಿಸಿದಂತೆ ಆಗಸ್ಟ್ 23 ರಂದು ಸಾಹಿತಿಗಳ ನಿಯೋಗ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಬೆನ್ನಲೆ ಬೆಂಗಳೂರು ಪೊಲೀಸ್ ಎಲ್ಲಾ ಪ್ರಕರಣಗಳ ತನಿಖಾಧಿಕಾರಿಯಾಗಿ ಓರ್ವ ಎಸಿಪಿ ದರ್ಜೆ ಅಧಿಕಾರಿ ನೇಮಕಕ್ಕೆ ಸೂಚನೆ ನೀಡಲಾಗಿದೆ. ಜೊತೆಗೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಆಳವಾಗಿ ತನಿಖೆ ಮಾಡುವ ಉದ್ದೇಶದಿಂದ ಎಲ್ಲಾ ಪ್ರಕರಣಗಳು ಸಿಸಿಬಿ ವರ್ಗಾವಣೆ ಕುರಿತಂತೆ ಡಿಜಿ ಮತ್ತು ಐಜಿಪಿ ಡಾ.ಅಲೋಕ್ ಮೋಹನ್ ಪತ್ರ ಬರೆದಿದ್ದಾರೆ.

ಪ್ರತಿದಿನ ಪ್ರಕರಣಗಳ ಮೇಲ್ವಿಚಾರಣೆ ನಡೆಸಲು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರು, ಉಪಪೋಲಿಸ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಅನಾಮಧೇಯ ಪತ್ರಗಳ ಹಿನ್ನಲೆ ಕೆಲ ಸಾಹಿತಿಗಳಿಂದ ದೂರು ಕೂಡ ನೀಡಲಾಗಿದ್ದು, ನಗರದ ವಿವಿಧ ಠಾಣೆಗಳಲ್ಲಿ ಕೇಸ್​ಗಳು ದಾಖಲಾಗಿವೆ.

ಸಾಹಿತಿಗಳ ನಿಯೋಗಕ್ಕೆ ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ

ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಭೇಟಿ ಮಾಡಿದ್ದ ಸಾಹಿತಿಗಳ ನಿಯೋಗವೂ ಮನವಿ ಸಲ್ಲಿಸಿದ್ದರು. ಅಷ್ಟೆ ಅಲ್ಲದೇ ಸೂಕ್ತ ಕ್ರಮ ವಹಿಸುವುದಾಗಿ ಹಿರಿಯ ಸಾಹಿತಿಗಳು, ಲೇಖಕರು ಮತ್ತು ಹೋರಾಟಗಾರರ ನಿಯೋಗಕ್ಕೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು.

ಇದನ್ನೂ ಓದಿ: ಯಶವಂತಪುರ ಕ್ಷೇತ್ರದಲ್ಲಿ ಸುಂಟರಗಾಳಿ ಎದ್ದಿದೆ, ಇದು ನಮಗೆ ಎಚ್ಚರಿಕೆ ಗಂಟೆ; ಸೋಮಶೇಖರ್ ಭೇಟಿ ಬಳಿಕ ಹೀಗೆ ಹೇಳಿದ್ದೇಕೆ ಅಶೋಕ್?

ಹಿರಿಯ ಸಾಹಿತಿಗಳಾದ ಮರುಳಸಿದ್ದಪ್ಪ, ಎಸ್.ಜಿ. ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಸುಂಧರಾ ಭೂಪತಿ, ವಿಜಯಮ್ಮ, ದಿನೇಶ್ ಅಮೀನ್ ಮಟ್ಟು, ಎಲ್.ಎನ್.ಮುಕುಂದರಾಜ್, ರುದ್ರಪ್ಪ ಹನಗವಾಡಿ, ಶಿಕ್ಷಣ ತಜ್ಞ ನಿರಂಜನಾರಾಧ್ಯ ಸೇರಿ ಹಲವು ಪ್ರಮುಖರಿಂದ ನಿನ್ನೆ ಸಭೆ ಮಾಡಲಾಗಿದೆ.

ಇದನ್ನೂ ಓದಿ: ಚಂದ್ರಯಾನ 3 ರ ಯಶಸ್ಸಿಗೆ ನಿಪ್ಪಾಣಿ ತಾಲೂಕಿನ ಇಬ್ಬರು ವಿಜ್ಞಾನಿಗಳ ಮಹತ್ತರ ಕೊಡುಗೆ

ಸಭೆಯಲ್ಲಿ ಹಿರಿಯ ಸಾಹಿತ್ಯ ಡಾ.ಕೆ ಮರುಳಸಿದ್ದಪ್ಪ ಅವರು ಮಾತನಾಡಿ, ಕಳೆದ ಒಂದು ವರ್ಷಕ್ಕೂ ಹೆಚ್ಚು ಅವಧಿಯಲ್ಲಿ ಸಾಹಿತಿಗಳಿಗೆ ನಿರಂತರ ಬೆದರಿಕೆ ಕರೆಗಳು ಮತ್ತು ಪತ್ರಗಳು ಬಂದಿವೆ. ಇದು ಆತಂಕಕ್ಕೆ ತಳ್ಳುವ ಮೂಲಕ ಸಮಾಜದಲ್ಲಿ ಮುಜುಗರದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:55 pm, Thu, 24 August 23

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us