Davangere News: ಪೊಲೀಸರ ದಾಳಿ; ಅಕ್ರಮವಾಗಿ ಸಂಗ್ರಹಿಸಿದ್ದ ಲಕ್ಷ ಲಕ್ಷ ಮೌಲ್ಯದ ಮದ್ಯ ವಶ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ಡಿಸಿಆರ್ಬಿ ಪೊಲೀಸರು ದಾಳಿ ಮಾಡಿದ್ದು ಅಕ್ರಮವಾಗಿ ಸಂಗ್ರಹಿಸಿದ್ದ 3.61 ಲಕ್ಷ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ದಾವಣಗೆರೆ: ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ಡಿಸಿಆರ್ಬಿ ಪೊಲೀಸರು (Police) ದಾಳಿ ಮಾಡಿದ್ದು ಅಕ್ರಮವಾಗಿ ಸಂಗ್ರಹಿಸಿದ್ದ 3.61 ಲಕ್ಷ ಮೌಲ್ಯದ ಮದ್ಯವನ್ನು (Alcohol) ವಶಪಡಿಸಿಕೊಂಡಿದ್ದಾರೆ. ಈ ವೇಳೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಎಂ.ಬಿ.ರವಿಕುಮಾರ (47) ಹಾಗೂ ತಿಪ್ಪೇಶ (43) ಬಂಧಿತ ಆರೋಪಿಗಳು. ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ ನಗರದಲ್ಲಿ ಅಕ್ರಮ ಗುಟ್ಕಾ ತಯಾರಿಕಾ ಘಟಕ ಪತ್ತೆ
ಕಲಬುರಗಿ: ನಗರದ ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಅಕ್ರಮವಾಗಿ ಗುಟ್ಕಾ ತಯಾರಿಕಾ ಘಟಕ ಪತ್ತೆಯಾಗಿದೆ. ದಾಲ್ ಮಿಲ್ನಲ್ಲಿ ಎಂಬ ಘಟಕದಲ್ಲಿ ಅಕ್ರಮವಾಗಿ ಗುಟ್ಕಾ ತಯಾರಿಸಿ ಕೆಲ ಪಾನ್ ಮಸಾಲಾಗಳ ಹೆಸರುಗಳ ನಕಲಿ ಪೌಚ್ನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಸ್ಥಳದಲ್ಲಿ ಗುಟ್ಕಾ ತಯಾರಿಕೆಗೆ ಬಳಸುತ್ತಿದ್ದ ವಸ್ತುಗಳು ಪತ್ತೆಯಾಗಿದೆ.
ಇದನ್ನೂ ಓದಿ: KSRTC ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ: ಕೊಡಗು ಮೂಲದ ದಂಪತಿ ಸಾವು
ಬಿಹಾರ್, ಉತ್ತರಪ್ರದೇಶದಿಂದ ಅನೇಕ ಕಾರ್ಮಿಕರನ್ನು ಕರೆತಂದು ನಕಲಿ ಗುಟ್ಕಾ ತಯಾರು ಮಾಡಲಾಗುತ್ತಿತ್ತು. ಪೊಲೀಸರು ಅಕ್ರಮವಾಗಿ ಗುಟ್ಕಾ ತಯಾರಿಸುತ್ತಿದ್ದ ಘಟಕದ ಮಾಲೀಕರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ