ಹುಬ್ಬಳ್ಳಿ: ಕುಡಿದ ಮತ್ತಿನಲ್ಲಿ ನೇಣು ಹಾಕಿಕೊಳ್ಳಲು ಮುಂದಾದ ವ್ಯಕ್ತಿಯ ಪ್ರಾಣ ಉಳಿಸಿದ ಪೊಲೀಸ್
ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. 112ಗೆ ಕರೆ ಬಂದ ಹಿನ್ನಲೆ ಅಲರ್ಟ್ ಆದ ಪೊಲೀಸರು, ತಕ್ಷಣವೇ ಸ್ಥಳಕ್ಕೆ ಧಾವಿಸಿ ನೇಣಿಕೆ ಕೊರಳೊಡ್ಡಿದ ಶಂಭುಲಿಂಗಯ್ಯ ಪ್ರಾಣ ಉಳಿಸಿದ್ದಾರೆ.
ಹುಬ್ಬಳ್ಳಿ, ಜುಲೈ.14: ಆತ್ಮಹತ್ಯೆಗೆ ಮುಂದಾಗಿದ್ದ ವ್ಯಕ್ತಿಯ ಜೀವವನ್ನು ಪೊಲೀಸರು ಉಳಿಸಿದ ಘಟನೆ ಧಾರವಾಡ (Dharwad) ಜಿಲ್ಲೆಯ ಕಲಘಟಗಿ ತಾಲೂಕಿನ ನೆಲ್ಲಿಹರವಿ ಗ್ರಾಮದಲ್ಲಿ ನಡೆದಿದೆ. ನೆಲ್ಲಿಹರವಿ ಗ್ರಾಮದ ಶಂಭುಲಿಂಗಯ್ಯ ಹುಲಸೋಗಿ ಕುಡಿದ ಮತ್ತಿನಲ್ಲಿ ನೇಣಿಗೆ (Hang) ಮುಂದಾಗಿದ್ದ. ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಈ ವೇಳೆ 112ಗೆ ಕರೆ ಬಂದ ಹಿನ್ನಲೆ ಅಲರ್ಟ್ ಆದ ಪೊಲೀಸರು, ತಕ್ಷಣವೇ ಸ್ಥಳಕ್ಕೆ ಧಾವಿಸಿ ನೇಣಿಕೆ ಕೊರಳೊಡ್ಡಿದ ಶಂಭುಲಿಂಗಯ್ಯ ಪ್ರಾಣ ಉಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಗಣೇಶ್ ಹಾಗೂ ಸಂಗನಗೌಡರವರು ಶಂಭುಲಿಂಗಯ್ಯ ಅವರನ್ನು ರಕ್ಷಿಸಿದ್ದಾರೆ. ಸದ್ಯ ಕಲಘಟಗಿ ತಾಲೂಕು ಆಸ್ಪತ್ರೆಯಲ್ಲಿ ಶಂಭುಲಿಂಗಯ್ಯಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅನಾರೋಗ್ಯ ಹಿನ್ನಲೆ ನಿವೃತ್ತ ಎಎಸ್ಐ ನೇಣಿಗೆ ಶರಣು
ದಾವಣಗೆರೆಯ ಡಿಸಿಎಂ ಟೌನ್ಶಿಪ್ನ 3ನೇ ಕ್ರಾಸ್ನಲ್ಲಿ ಅನಾರೋಗ್ಯದಿಂದ ನಿವೃತ್ತ ಎಎಸ್ಐ ಸುರೇಶ್(65) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಳೆದ ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸುರೇಶ್, ಇಂದು ಮುಂಜಾನೆ ನೇಣಿಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ದೇವನಹಳ್ಳಿ: ಹುಟ್ಟಹಬ್ಬ ಆಚರಿಸಲು ಲಾಗ್ಡ್ರೈವ್ ಹೊರಟಿದ್ದ ಯುವಕರ ವಾಹನ ಅಪಘಾತ, ಇಬ್ಬರು ಸಾವು
ಬೈಕ್ ಕೊಡಿಸದ್ದಕ್ಕೆ ಮಗ ಸೂಸೈಡ್.. ತಾಯಿಯೂ ಆತ್ಮಹತ್ಯೆ
ಮನೆಯಲ್ಲಿ ಬೈಕ್ ಕೊಡಿಸದ್ದಕ್ಕೆ 18 ವರ್ಷದ ಧನರಾಜ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನ ಸಾವಿನ ಸುದ್ದಿ ತಿಳಿದು ತಾಯಿ ಭಾಗ್ಯಮ್ಮ ಕೂಡ ರೈಲಿಗೆ ತಲೆಕೊಟ್ಟು ಸೂಸೈಡ್ ಮಾಡಿಕೊಂಡಿದ್ದಾಳೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕರೂರು ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಸಾಲಬಾದೆ ತಾಳಲಾರದೆ ರೈತ ಮಹಿಳೆ ಆತ್ಮಹತ್ಯೆ
ಸಾಲಬಾದೆ ತಾಳಲಾರದೆ ರೈತ ಮಹಿಳೆ ರುಕ್ಮಿಣಿ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಸನ ತಾಲೂಕಿನ ಸತ್ತಿಗರಹಳ್ಳಿ ಕೊಪ್ಪಲು ಗ್ರಾಮದಲ್ಲಿ ಘಟನೆ ನಡೆದಿದೆ. ಸರ್ಕಾರಿ ಬ್ಯಾಂಕ್ ಸೇರಿ ವಿವಿಧೆಡೆ 2 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದು, ತೀರಿಸಲಾಗದೇ ಜಮೀನಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ