ಹೆಸರಿಗೆ ಬ್ರ್ಯಾಂಡ್ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!: ಉತ್ತರಹಳ್ಳಿಯಲ್ಲಿ ಇದೆಂಥಾ ಸ್ಥಿತಿ?
ಬೆಂಗಳೂರಿನ ಉತ್ತರಹಳ್ಳಿ ವಾರ್ಡ್‌ನ ಸಿಂಹಾದ್ರಿ ಲೇಔಟ್‌ನಲ್ಲಿ ಕುಡಿಯುವ ಹಾಗೂ ಮನೆ ಬಳಕೆಯ ನೀರು ತೀವ್ರವಾಗಿ ಕಲುಷಿತಗೊಂಡಿದೆ. ಮಲಮೂತ್ರ ಹಾಗೂ ಕೊಳಚೆ ಮಿಶ್ರಿತ ಕಪ್ಪು ಬಣ್ಣದ ನೀರನ್ನು ಬಳಸಲು ನಿವಾಸಿಗಳು ಪರದಾಡುತ್ತಿದ್ದಾರೆ. ದೂರುಗಳ ನಂತರ ಟಿವಿ9 ವರದಿ ಪ್ರಸಾರವಾಗುತ್ತಿದ್ದಂತೆ ಪಾಲಿಕೆ ಸಿಬ್ಬಂದಿ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ.
ಬೆಂಗಳೂರು, ಡಿಸೆಂಬರ್ 12: ಬ್ರ್ಯಾಂಡ್ ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಶುದ್ಧ ಕುಡಿಯುವ ನೀರಿಗೂ ಜನರು ಪರದಾಡಬೇಕಾದ ಸ್ಥಿತಿ ಬಂದೊದಗಿದೆ. ದಕ್ಷಿಣ ನಗರಪಾಲಿಕೆ ವ್ಯಾಪ್ತಿಯ ಸಿಂಹಾದ್ರಿ ಲೇಔಟ್‌ನಲ್ಲಿ ಪೂರೈಕೆಯಾಗುತ್ತಿರುವ ನೀರು ರಾಸಾಯನಿಕ ಮತ್ತು ಕೊಳಚೆ ಮಿಶ್ರಿತವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಡಿಯಲು ಹಾಗೂ ಮನೆ ಬಳಕೆಗೆ ಸರಬರಾಜು ಆಗುತ್ತಿರುವ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ಮಲಮೂತ್ರದ ಅಂಶಗಳು ಪತ್ತೆಯಾಗಿವೆ. ಜನರು ಗತಿ ಇಲ್ಲದೆ ಇದೇ ನೀರನ್ನು ಬಳಸುವ ಅನಿವಾರ್ಯತೆ ಎದುರಾಗಿದೆ. ಈ ಸಮಸ್ಯೆ ಬಗ್ಗೆ ಟಿವಿ9 ವರದಿ ಮಾಡುತ್ತಿದ್ದಂತೆ, ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಚರಂಡಿಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್ಬಾಸ್ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್ಮಿಸ್

