AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Drink to Kidney Health: ದಿನಕ್ಕೆ ಇಷ್ಟು ಲೀಟರ್ ನೀರು ಕುಡಿದ್ರೆ ನಿಮ್ಮ ಕಿಡ್ನಿ ಹೇಲ್ದಿಯಾಗಿರುತ್ತೆ

ಕಿಡ್ನಿ ಆರೋಗ್ಯ: ಒಂದು ದಿನದಲ್ಲಿ ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು ಎಂಬ ಅನುಮಾನ ಅನೇಕರಿಗಿರುತ್ತದೆ. ವೈದ್ಯರು ಶಿಫಾರಸು ಮಾಡಿದ ಪ್ರಮಾಣದಲ್ಲಿ ನೀರನ್ನು ಕುಡಿದರೆ ದೇಹವು ಹೈಡ್ರೇಟೆಡ್ ಆಗಿರುವುದು ಮಾತ್ರವಲ್ಲದೆ, ಮೂತ್ರಪಿಂಡ ಅಥವಾ ಕಿಡ್ನಿ ಆರೋಗ್ಯವೂ ಕೂಡ ಸುಧಾರಿಸುತ್ತದೆ. ಹಾಗಾದರೆ, ನಮ್ಮ ಕಿಡ್ನಿ ಯಾವಾಗಲು ಆರೋಗ್ಯವಾಗಿರಬೇಕು ಎಂದರೆ ಒಬ್ಬ ವ್ಯಕ್ತಿ ಪ್ರತಿನಿತ್ಯ ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

Drink to Kidney Health: ದಿನಕ್ಕೆ ಇಷ್ಟು ಲೀಟರ್ ನೀರು ಕುಡಿದ್ರೆ ನಿಮ್ಮ ಕಿಡ್ನಿ ಹೇಲ್ದಿಯಾಗಿರುತ್ತೆ
Kidney Health
ಪ್ರೀತಿ ಭಟ್​, ಗುಣವಂತೆ
|

Updated on: Aug 05, 2025 | 3:44 PM

Share

ದಿನಕ್ಕೆ ಎಷ್ಟು ನೀರು (Water) ಕುಡಿಯಬೇಕು? ಈ ಅನುಮಾನ ಅನೇಕರಿಗಿರುತ್ತದೆ. ಆದರೆ ಇದಕ್ಕೆ ಉತ್ತರ ಹುಡುಕಿ ಹೊರಟರೆ ನಾನಾ ರೀತಿಯ ಉತ್ತರಗಳು ಸಿಗುತ್ತವೆ. ಏಕೆಂದರೆ ಪ್ರತಿಯೊಬ್ಬರೂ ಕೂಡ ವಿಭಿನ್ನ ರೀತಿಯ ಉತ್ತರಗಳನ್ನು ನೀಡುತ್ತಾರೆ. ಆದರೆ ಇವುಗಳನ್ನೆಲ್ಲಾ ಬದಿಗಿಟ್ಟು, ಕನಿಷ್ಠ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ನೀರು ಕುಡಿಯುವುದು ಇಡೀ ದೇಹವನ್ನು ಪುನರ್ಭರ್ತಿ ಮಾಡಿದಂತೆ. ದೇಹದ ಉಷ್ಣತೆಯನ್ನು ಸಮತೋಲನಗೊಳಿಸುವುದರಿಂದ ಹಿಡಿದು ಒಳಗಿನಿಂದ ಕಲ್ಮಶಗಳನ್ನು ಹೊರಹಾಕುವ ವರೆಗೆ ನೀರು ಹಲವು ವಿಧಗಳಲ್ಲಿ ಉಪಯುಕ್ತವಾಗಿದೆ. ಆದರೆ ಈ ಸಂಪೂರ್ಣ ಪ್ರಕ್ರಿಯೆಯಲ್ಲಿ, ನಮ್ಮ ಮೂತ್ರಪಿಂಡಗಳು ಅಂದರೆ ಕಿಡ್ನಿ (Kidney) ಮೌನವಾಗಿದ್ದುಕೊಂಡು ತಮ್ಮ ಕೆಲಸವನ್ನು ಮಾಡುತ್ತವೆ. ಅವು ರಕ್ತದಲ್ಲಿನ ನೀರನ್ನು ನಿರಂತರವಾಗಿ ಶುದ್ಧೀಕರಿಸುತ್ತವೆ ಮತ್ತು ಕಲ್ಮಶಗಳನ್ನು ಹೊರಹಾಕುತ್ತವೆ. ಹಾಗಾದರೆ, ನಮ್ಮ ಕಿಡ್ನಿ ಯಾವಾಗಲು ಆರೋಗ್ಯವಾಗಿರಬೇಕು ಎಂದರೆ ಒಬ್ಬ ವ್ಯಕ್ತಿ ಪ್ರತಿನಿತ್ಯ ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನೀರು ಕುಡಿಯುವುದು ಬಹಳ ಮುಖ್ಯ

ಮೂತ್ರಪಿಂಡ ಅಥವಾ ಕಿಡ್ನಿ ಆರೋಗ್ಯವಾಗಿರಲು, ದೇಹಕ್ಕೆ ಅಗತ್ಯ ಪ್ರಮಾಣದಲ್ಲಿ ನೀರನ್ನು ಒದಗಿಸಬೇಕು. ಏಕೆಂದರೆ ಇವುಗಳ ಆರೋಗ್ಯವು ನೀವು ಎಷ್ಟು ಪ್ರಮಾಣದಲ್ಲಿ ನೀರು ಕುಡಿಯುತ್ತೀರಿ ಮತ್ತು ಅದನ್ನು ಹೇಗೆ ಕುಡಿಯುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ, ದಿನಕ್ಕೆ 8 ಗ್ಲಾಸ್ ನೀರು ಕುಡಿಯುವುದು ಸಾಮಾನ್ಯ. ಆದರೆ, ವಯಸ್ಸು, ಪರಿಸರ ಮತ್ತು ಆರೋಗ್ಯ ಸಮಸ್ಯೆಗಳ ಆಧಾರದ ಮೇಲೆ ನೀರಿನ ಪ್ರಮಾಣವನ್ನು ನಿರ್ಧರಿಸಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಲೆಕ್ಕಾಚಾರವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದವರು ಅಗತ್ಯವಿರುವಷ್ಟು ನೀರು ಕುಡಿಯುವುದಿಲ್ಲ. ಈ ಕಾರಣಕ್ಕಾಗಿ, ಚಿಕ್ಕ ವಯಸ್ಸಿನಲ್ಲಿಯೇ ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳು, ಅದರಲ್ಲಿಯೂ ದೀರ್ಘಕಾಲದ ಕಾಯಿಲೆಗಳು ಉದ್ಭವಿಸುತ್ತಿವೆ. ಆದ್ದರಿಂದ, ಮೂತ್ರಪಿಂಡ ಆರೋಗ್ಯವಾಗಿರಬೇಕು ಎಂದರೆ ಪ್ರತಿದಿನ ದೇಹದ ಅಗತ್ಯಕ್ಕೆ ತಕ್ಕಂತೆ ನೀರು ಕುಡಿಯುವುದು ಅತ್ಯಗತ್ಯ.

ಮೂತ್ರಪಿಂಡದ ಕಾರ್ಯ

ನಮ್ಮ ಕಿಡ್ನಿ ಅಥವಾ ಮೂತ್ರಪಿಂಡ ಪ್ರತಿನಿತ್ಯ ಕನಿಷ್ಠ 50 ಗ್ಯಾಲನ್‌ಗಳಷ್ಟು ರಕ್ತವನ್ನು ಶೋಧಿಸಿ ಅದರಿಂದ ವಿಷ ಮತ್ತು ದ್ರವಗಳನ್ನು ಹೊರಹಾಕುತ್ತವೆ. ಆದ್ದರಿಂದ, ದೇಹವನ್ನು ಯಾವಾಗಲೂ ಹೈಡ್ರೀಕರಿಸಿಟ್ಟುಕೊಳ್ಳುವುದು ಬಹಳ ಮುಖ್ಯ. ಅಂದರೆ ಸಾಕಷ್ಟು ನೀರು ಸೇವಿಸುವುದರಿಂದ, ಯೂರಿಯಾ ಮತ್ತು ಸೋಡಿಯಂನಂತಹ ಹಾನಿಕಾರಕ ಪದಾರ್ಥಗಳು ಸರಿಯಾಗಿ ಹೊರಹಾಕಲ್ಪಡುತ್ತವೆ. ಇಲ್ಲವಾದಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಹಲವಾರು ಅಧ್ಯಯನಗಳು ಇದನ್ನು ಈಗಾಗಲೇ ವಿವರಿಸಿವೆ. 2021 ರಲ್ಲಿ ನಡೆಸಿದ ಅಧ್ಯಯನವು ಮೂತ್ರಪಿಂಡಗಳಿಗೆ ಸಾಕಷ್ಟು ನೀರು ಸಿಗದಿದ್ದಾಗ ದೀರ್ಘಕಾಲದ ಕಾಯಿಲೆಗಳ ಅಪಾಯ ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂದು ಬಹಿರಂಗಪಡಿಸಿದೆ. ಆದರೆ ಅತಿಯಾಗಿ ನೀರು ಕಿಡಿಯುವುದು ಕೂಡ ಮೂತ್ರಪಿಂಡಗಳ ಮೇಲೆ ಒತ್ತಡ ಉಂಟುಮಾಡುತ್ತದೆ, ಇದು ಸಂಭಾವ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಇದನ್ನೂ ಓದಿ
Image
ಪ್ರತಿದಿನ ಕಾಫಿ ಕುಡಿಯುವುದರಿಂದ ಏನೆಲ್ಲಾ ಆಗುತ್ತೆ ಗೊತ್ತಾ?
Image
ಹೃದಯಾಘಾತಕ್ಕೂ ಮುನ್ನ ಚರ್ಮದಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತಂತೆ
Image
ಈ ಆಯುರ್ವೇದ ಅಭ್ಯಾಸಗಳನ್ನು ಅನುಸರಿಸಿದರೆ ಲಿವರ್ ಆರೋಗ್ಯವಾಗಿರುತ್ತೆ!
Image
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ರೀತಿ ಅಂಜೂರ ಸೇವನೆ ಮಾಡಿ

ಎಷ್ಟು ನೀರು ಕುಡಿಯಬೇಕು?

ಮೇಯೊ ಕ್ಲಿನಿಕ್ ಮಾರ್ಗಸೂಚಿಗಳ ಪ್ರಕಾರ, ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು, ಒಬ್ಬ ವ್ಯಕ್ತಿ ಪ್ರತಿದಿನ ಕನಿಷ್ಠ 3.7 ಲೀ. ನೀರು ಕುಡಿಯಬೇಕು. ಪುರುಷರಿಗೆ ಇದು ಅಗತ್ಯ. ಮಹಿಳೆಯರು ದಿನಕ್ಕೆ 2.7 ಲೀ ನೀರನ್ನು ಕುಡಿಯಬೇಕು. ಚಹಾ, ಕಾಫಿ, ಸೂಪ್ ಮತ್ತು ಹಣ್ಣುಗಳಿಂದಲೂ ನೀರನ್ನು ಪಡೆಯಬಹುದು. ಆಗ ಮಾತ್ರ ಎಲ್ಲಾ ರೀತಿಯ ಪೋಷಕಾಂಶಗಳು ಲಭ್ಯವಿರುತ್ತವೆ. ವೈದ್ಯರು ಹೇಳುವ ಪ್ರಕಾರ, ಒಬ್ಬ ವ್ಯಕ್ತಿ ದಿನಕ್ಕೆ ಸುಮಾರು 1.5 ರಿಂದ 2 ಲೀ. ನೀರನ್ನು ಮಾತ್ರ ಕುಡಿಯಬೇಕು. ಇದರರ್ಥ 6- 8 ಗ್ಲಾಸ್ ನೀರನ್ನು ಕುಡಿಯುವುದು ಒಳ್ಳೆಯದು. ಬೇಸಿಗೆಯಲ್ಲಿ, ಒಂದು ಹೆಚ್ಚುವರಿ ಗ್ಲಾಸ್ ಕುಡಿಯುವುದು ಒಳ್ಳೆಯದು. ಆದರೆ ಮೂತ್ರಪಿಂಡದಲ್ಲಿ ಕಲ್ಲುಗಳಿರುವವರು ಅವುಗಳನ್ನು ತ್ವರಿತವಾಗಿ ಕರಗಿಸಲು ದಿನಕ್ಕೆ ಕನಿಷ್ಠ 2.5 ಲೀಟರ್ ಕುಡಿಯಬೇಕು. ಒಟ್ಟು ಮೂರು ಲೀಟರ್ ದ್ರವ ಪದಾರ್ಥಗಳನ್ನು ಸೇವಿಸಬೇಕು. ಮೂತ್ರವು ಗಾಢ ಬಣ್ಣದಲ್ಲಿರದೆ ಸಾಮಾನ್ಯ ಬಣ್ಣದಲ್ಲಿದ್ದರೆ, ನೀವು ಸಾಕಷ್ಟು ನೀರು ಕುಡಿಯುತ್ತಿದ್ದೀರಿ ಎಂದರ್ಥ. ಇದಲ್ಲದೆ, ದಿನಕ್ಕೆ ಕನಿಷ್ಠ 6- 8 ಬಾರಿ ಮೂತ್ರ ವಿಸರ್ಜನೆ ಮಾಡುವುದರಿಂದ ಮೂತ್ರಪಿಂಡಗಳು ಆರೋಗ್ಯಕರವಾಗಿವೆ ಎಂಬುದನ್ನು ಸೂಚಿಸುತ್ತದೆ.

ನೀರಿನ ಜೊತೆಗೆ ಇತರ ದ್ರವ ಪದಾರ್ಥಗಳ ಸೇವನೆ ಮಾಡುವುದು ಒಳ್ಳೆಯದು. ಆದಾಗ್ಯೂ, ಹೆಚ್ಚಿನ ಪ್ರಮಾಣದ ಸಕ್ಕರೆ ಬೆರೆಸಿದಂತಹ ಜ್ಯೂಸ್‌ ಅಥವಾ ತಂಪು ಪಾನೀಯಗಳನ್ನು ಕುಡಿಯುವುದು ಸೂಕ್ತವಲ್ಲ. ಗಿಡಮೂಲಿಕೆ ಚಹಾ ಮತ್ತು ಸಕ್ಕರೆ ಕಡಿಮೆ ಇರುವ ಜ್ಯೂಸ್‌ಗಳನ್ನು ಸೇವಿಸಬಹುದು. ಸೌತೆಕಾಯಿಯಲ್ಲಿ ಹೆಚ್ಚಿನ ನೀರಿನ ಅಂಶವಿದೆ. ಇವುಗಳನ್ನು ನಿಯಮಿತವಾಗಿ ತಿನ್ನುವುದರಿಂದ ದೇಹಕ್ಕೆ ದ್ರವಗಳ ಜೊತೆಗೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ. ಕಾಫಿ ಮತ್ತು ಚಹಾವನ್ನು ಮಿತವಾಗಿ ಸೇವಿಸಿದಾಗ ದೇಹವನ್ನು ಹೈಡ್ರೀಕರಿಸಲು ಸಹಾಯ ಮಾಡುತ್ತದೆ. ಎನರ್ಜಿ ಡ್ರಿಂಕ್ಸ್ ಅನ್ನು ಯಾವುದೇ ಕಾರಣಕ್ಕೂ ಕುಡಿಯಬಾರದು. ಅವು ಮೂತ್ರಪಿಂಡದ ಕಾರ್ಯದ ಮೇಲೆ ಪರಿಣಾಮ ಬೀರಬಹುದು.

ಇದನ್ನೂ ಓದಿ: ಕೇವಲ ನೀರು ಕಡಿಮೆ ಕುಡಿದ್ರೆ ಮಾತ್ರವಲ್ಲ, ಈ ಆಹಾರಗಳ ಸೇವನೆ ಮಾಡಿದ್ರೂ ಕಿಡ್ನಿ ಸ್ಟೋನ್ ಆಗುತ್ತೆ!

ನೀರನ್ನು ಸರಿಯಾದ ಪ್ರಮಾಣದಲ್ಲಿ ಕುಡಿಯದಿದ್ದರೆ ಏನಾಗುತ್ತೆ?

ನೀವು ಸರಿಯಾಗಿ ನೀರು ಕುಡಿಯದಿದ್ದರೆ, ಮೂತ್ರಪಿಂಡದ ಆರೋಗ್ಯ ಹಾಳಾಗುತ್ತದೆ. ಅವುಗಳ ಕಾರ್ಯನಿರ್ವಹಣೆ ಸಾಮಾನ್ಯವಾಗಿರುವುದಿಲ್ಲ. ಪರಿಣಾಮವಾಗಿ, ಇದು ಇತರ ಅಂಗಗಳ ಮೇಲೂ ಪರಿಣಾಮ ಬೀರುತ್ತದೆ. ತ್ಯಾಜ್ಯವನ್ನು ಹೊರಹಾಕಲು ಸಾಧ್ಯವಾಗದೆಯೇ ಒಳಗೆ ಸಂಗ್ರಹವಾಗುತ್ತದೆ. ಕ್ರಮೇಣ, ಕರುಳಿನ ಆರೋಗ್ಯವೂ ಹದಗೆಡುತ್ತದೆ. ನೀವು ಸಾಕಷ್ಟು ನೀರು ಕುಡಿಯದಿದ್ದರೆ, ಮೂತ್ರಪಿಂಡದಲ್ಲಿ ಕಲ್ಲುಗಳು ರೂಪುಗೊಳ್ಳುವ ಸಾಧ್ಯತೆ ಹೆಚ್ಚಾಗುತ್ತವೆ. ಇದು ಮೂತ್ರದ ಸೋಂಕು ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದಕ್ಕಾಗಿಯೇ ದೇಹಕ್ಕೆ ಅಗತ್ಯವಿರುವಷ್ಟು ನೀರನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ