
ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಉಕ್ಕುಂದ ಹೊಲದಲ್ಲಿ ಬೆಳೆದಿದ್ದ ಆಲೂಗಡ್ಡೆ ಕಳ್ಳತನವಾಗಿದ್ದು, ವರ್ಷ ಪೂರ್ತಿ ದುಡಿದು ಫಲ ಸಿಗುವ ವೇಳೆಗೆ ರೈತರಿಗೆ ದೊಡ್ಡ ಅಘಾತ ಎದುರಾಗಿದೆ.
ಈ ಬಾರಿ ಉತ್ತಮ ಬೆಳೆಯಿಂದ ಹೆಚ್ಚು ಆದಾಯವನ್ನು ಪಡೆಯುವ ನಿರೀಕ್ಷೆಯಲ್ಲಿದ್ದ ಕೃಷ್ಣಪ್ಪ ಹಾಗೂ ವೆಂಕಟೇಶಪ್ಪ ಎಂಬುವವರ ಹೊಲದಲ್ಲಿದ್ದ ಸುಮಾರು 60 ಮೂಟೆಯಷ್ಟು ಆಲೂಗಡ್ಡೆ ಕಳ್ಳತನ ನಡೆದಿದ್ದು, ರೈತರು ಕಂಗಾಲಾಗಿದ್ದಾರೆ. ಆಲೂಗಡ್ಡೆಗೆ ಉತ್ತಮ ಬೆಲೆ ಇರುವ ಹಿನ್ನೆಲೆಯಲ್ಲಿ ಖದೀಮರಿಂದ ಕಳ್ಳತನ ನಡೆದಿದೆ ಎನ್ನುವ ವಿಚಾರ ಕೇಳಿಬಂದಿದ್ದು, ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರೈತರ ಹೊಲದಲ್ಲಿ ಕಳ್ಳತನ
ಆನೆಗಳ ಕಾಟ:
ರಾತ್ರಿಯೆಲ್ಲ ಹೊಲದಲ್ಲಿ ಇರುಲು ಆನೆಗಳ ಭಯವಿದೆ. ಆದರೂ 10 ಗಂಟೆವರೆಗೆ ಇರುತ್ತೇವೆ. ಮನೆಗೆ ಹೋದ ಬಳಿಕ ಈ ಕಳ್ಳತನ ನಡೆದಿದೆ. ಬೆಳೆ ಬೆಳೆಯಲು ಹಗಲು ರಾತ್ರಿ ಎನ್ನದೇ ಬೆವರು ಸುರಿಸುತ್ತೇವೆ. ಆದಾಯ ಸಿಗುವ ಹಂತದಲ್ಲಿ ಕಳ್ಳತನ ನಡೆದರೆ ಬದುಕಲು ಬೇರೆ ದಾರಿ ಇಲ್ಲ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ನ್ಯಾಯ ದೊರಕಿಸಬೇಕೆಂದು ರೈತರು ಮನವಿ ಮಾಡಿದ್ದಾರೆ.
ಬಾಯ್ಫ್ರೆಂಡ್ಗಾಗಿ.. ಯುವತಿಯರ ಬೆತ್ತಲೆ ವಿಡಿಯೋ ಮಾಡ್ತಿದ್ದ ನರ್ಸ್ ಕೊನೆಗೂ ಅಂದರ್