ಬೆಂಗಳೂರು, ಮೇ 20: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದು ಎನ್ನಲಾಗಿರುವ ಪೆನ್ಡ್ರೈಪ್ (Pen Drive) ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋ ಒಂದರಲ್ಲಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ (HD Devegowda) ಅವರನ್ನು ಅವಹೇಳನಕಾರಿಯಾಗಿ ನಿಂದಿಸಿದ್ದಾರೆ ಎನ್ನಲಾಗಿರುವ ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡ (LR Shivaramegowda) ಅವರ ಮನೆ ಮೇಲೆ ಮೊಟ್ಟೆ ದಾಳಿಗೆ ಯತ್ನಿಸಲಾಗಿದೆ.
ತಡರಾತ್ರಿ ಕಾರಿನಲ್ಲಿ ಬಂದ ವ್ಯಕ್ತಿಗಳು ಪೊಲೀಸರನ್ನು ಕಂಡು ಅವರ ಕಣ್ಣು ತಪ್ಪಿಸಿ ಎಲ್ಆರ್ ಶಿವರಾಮೇಗೌಡ ಮನೆ ಮುಂದೆ 5-6 ಮೊಟ್ಟೆ ಎಸೆದು ಪರಾರಿಯಾಗಿದ್ದಾರೆ. ಮೊಟ್ಟೆ ಎಸೆಯಲು ಯತ್ನಿಸಿ ಪರಾರಿ ಆದವರಿಗಾಗಿ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಸಿಸಿಟಿವಿ ವಿಷ್ಯುವಲ್ಸ್ ಆಧರಿಸಿ ಹುಡುಕಾಟ ನಡೆಸಿದ್ದಾರೆ.
ಮೊಟ್ಟೆ ಎಸೆದು ಹೋದ ಬಳಿಕ ಪೊಲೀಸರು ಎಲ್ಆರ್ ಶಿವರಾಮೇಗೌಡ ಮನೆ ರಸ್ತೆಯ ಎರಡು ಕಡೆ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಿದ್ದಾರೆ.
ಇದನ್ನೂ ಓದಿ: ಪೆನ್ಡ್ರೈವ್ ಕೇಸ್: ಶಿವರಾಮೇಗೌಡ, ದೇವರಾಜೇಗೌಡ, ಡಿಕೆಶಿ ಸೀಕ್ರೆಟ್ ಆಡಿಯೋ ವೈರಲ್
ಆಡಿಯೋ ಸಂಭಾಷಣೆಯೊಂದರಲ್ಲಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಬಗ್ಗೆ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಇದನ್ನು ಖಂಡಿಸಿ ಇಂದು (ಮೇ 20) ಜೆಡಿಎಸ್ ನಾಯಕರು ಬೃಹತ್ ಪ್ರತಿಭಟನೆ ಮಾಡಲಿದ್ದಾರೆ.
ಎಲ್.ಆರ್. ಶಿವರಾಮೇಗೌಡರನ್ನು ಬಂಧಿಸಿ ಸೂಕ್ತ ತನಿಖೆ ನಡೆಸಬೇಕು. ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ವಿಚಾರಣೆಗೊಳಪಡಿಸಬೇಕು. ಪೆನ್ಡ್ರೈವ್ ಕೇಸ್ ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿ ಬೆಳಗ್ಗೆ 11ಕ್ಕೆ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಧರಣಿ ನಡೆಸಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ