ಪ್ರಜ್ವಲ್ ರೇವಣ್ಣ ಅಶ್ಲೀಲ‌ ವಿಡಿಯೋ ಕೇಸ್: 3 ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ ದೇವರಾಜೇಗೌಡ

| Updated By: ಗಂಗಾಧರ​ ಬ. ಸಾಬೋಜಿ

Updated on: May 10, 2024 | 9:05 PM

ಪ್ರಜ್ವಲ್ ರೇವಣ್ಣ ವೀಡಿಯೊ ಕೇಸ್ ಪ್ರಕರಣ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಮೊನ್ನೆ ಅಷ್ಟೇ ಪ್ರೆಸ್ ಮೀಟ್ ಮಾಡಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಆಡಿಯೋ ಸಹ ಇದೆ ಶೀಘ್ರ ದಲ್ಲಿ ಬಿಡುಗಡೆ ಮಾಡ್ತೀನಿ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ದೇವರಾಜೇಗೌಡ ಅವರು ಡಿಕೆ ಶಿವಮಾರ್ ಆವರ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಪ್ರಜ್ವಲ್ ರೇವಣ್ಣ ಅಶ್ಲೀಲ‌ ವಿಡಿಯೋ ಕೇಸ್: 3 ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ ದೇವರಾಜೇಗೌಡ
ಪ್ರಜ್ವಲ್ ರೇವಣ್ಣ ಅಶ್ಲೀಲ‌ ವಿಡಿಯೋ ಕೇಸ್: ಅಜ್ಞಾತ ಸ್ಥಳದಿಂದ 3 ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ ದೇವರಾಜೇಗೌಡ
Follow us on

ಬೆಂಗಳೂರು, ಮೇ 10: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna)
ವಿಡಿಯೋ ಕೇಸ್ ಪ್ರಕರಣ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಪ್ರಜ್ವಲ್ ಬಂಧನಕ್ಕೆ ಎಸ್​ಐಟಿ ಅಧಿಕಾರಿಗಳು ಸಾಕಷ್ಟು ತಯಾರಿ ನಡೆಸಿದ್ದಾರೆ. ಮೊನ್ನೆಯಷ್ಟೇ ಸುದ್ದಿಗೋಷ್ಠಿ ಮಾಡಿ ಡಿಸಿಎಂ ಡಿಕೆ ಶಿವಕುಮಾರ್​ ವಿರುದ್ಧ ಗಂಭೀರ ಆರೋಪ ಮಾಡಿದ್ದ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ (Devarajegowda) ಇದೀಗ ಅಜ್ಞಾತ ಸ್ಥಳದಿಂದ 3 ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದಾರೆ.

ಶಿವರಾಮೇಗೌಡ ಜೊತೆ ಮಾತನಾಡಿದ ಎರಡು ಆಡಿಯೋ ತುಣುಕು ಹಾಗೂ ಹನಿಟ್ರ್ಯಾಪ್ ಸಂಬಂಧ ಮಹಿಳೆ ಗಂಡನ ಜೊತೆ ಮಾತಾಡಿದ ಒಂದು ಆಡಿಯೋ ಬಿಡುಗಡೆ ಮಾಡಿದ್ದಾರೆ. ಶಿವರಾಮೇಗೌಡ ಜೊತೆ ಡಿಕೆ ಶಿವಕುಮಾರ್​ ವಿಚಾರ ಮಾತಾಡುವ ಆಡಿಯೋ ಬಿಡುಗಡೆ ಮಾಡಲಾಗಿದ್ದು, ಎಸ್‌ಐಟಿ ವಿಚಾರಣೆಯಲ್ಲಿ ಡಿಕೆ ಶಿವಕುಮಾರ್​ ಹೆಸರೇಳದಂತೆ ಶಿವರಾಮೇಗೌಡ ಸೂಚಿದ್ದಾರೆ.

ಕಾಣೆಯಾಗುವ ಪರಿಸ್ಥಿತಿ ಬಂದಿಲ್ಲ ಎಂದ ದೇವರಾಜೇಗೌಡ

ಮೂರು ಆಡಿಯೋ ಕ್ಲಿಪ್​ಗಳನ್ನು ಬಿಡುಗಡೆ ಮಾಡಿರುವ ದೇವರಾಜೇಗೌಡ, ಅಜ್ಞಾತ ಸ್ಥಳದಿಂದ ವಿಡಿಯೋ ಸಹ ರಿಲೀಸ್ ಮಾಡಿದ್ದಾರೆ. ಎಲ್ಲೂ ಕಾಣೆ ಆಗಿಲ್ಲ, 3 ದಿನ ರಜೆ ಇದ್ದಿದ್ದರಿಂದ ದೇಗುಲಕ್ಕೆ ಹೋಗುತ್ತಿದ್ದೇನೆ. ಕಾಣೆಯಾಗುವ ಪರಿಸ್ಥಿತಿ ಬಂದಿಲ್ಲ. ಕುಟುಂಬ ಸಮೇತ ದೇಗುಲಕ್ಕೆ ಬಂದಿರುವೆ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ವಿಡಿಯೋ ಕೇಸ್​: ದೇವರಾಜೇಗೌಡ, ಕಾರ್ತಿಕ್​ ಗೌಡಗೆ ಮತ್ತೆ SIT ನೋಟಿಸ್​

ಇತ್ತೀಚೆಗೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ್ದ ದೇವರಾಜೇಗೌಡ, ಈ ಪ್ರಕರಣದ ಸೂತ್ರಧಾರಿ ಡಿಸಿಎಂ ಡಿಕೆ ಶಿವಕುಮಾರ್ ಎಂದು ನೇರವಾಗಿ ಗಂಭೀರ ಆರೋಪ ಮಾಡಿದ್ದರು. ಅಲ್ಲದೇ ಈ ವಿಚಾರವಾಗಿ ಬಹಿರಂಗ ಚರ್ಚೆಗೂ ಡಿಕೆ ಶಿವಕುಮಾರ್​ನ್ನು ಆಹ್ವಾನಿಸಿದ್ದರು. ಅಲ್ಲದೇ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್​ ತಮ್ಮನ್ನು ಭೇಟಿಯಾಗಿದ್ದು ಹಾಗೂ ಡಿಕೆ ಶಿವಕುಮಾರ್ ಅವರು ತಮಗೆ ಆಮಿಷವೊಡ್ಡಿದ ಸಂಭಾಷಣೆಯ ಆಡಿಯೋವನ್ನು ದೇವರಾಜೇಗೌಡ ಬಿಡುಗಡೆ ಮಾಡಿದ್ದರು.

ಇದನ್ನೂ ಓದಿ: ಡಿಕೆಶಿ ವಿರುದ್ಧ ಆರೋಪ ಮಾಡಿದ್ದ ಬಿಜೆಪಿ ಮುಖಂಡ ದೇವರಾಜೇಗೌಡಗೆ ಸಂಕಷ್ಟ

ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ದೇವರಾಜೇಗೌಡ ವಿರುದ್ಧ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿಯಲ್ಲಿ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 1 ರಂದು ಎಫ್​ಐಆರ್ ದಾಖಲಾಗಿರುವ ಮಾಹಿತಿ ಬಹಿರಂಗಗೊಂಡಿದೆ. ಸಂತ್ರಸ್ಥೆಗೆ ವಾಟ್ಸಾಪ್ ಕಾಲ್ ಮಾಡಿ ಖಾಸಗಿ ಅಂಗಾಂಗ ಪ್ರದರ್ಶಿಸುವಂತೆ ಕಿರುಕುಳ ನೀಡಿದ್ದಲ್ಲದೇ ಲೈಂಗಿಕವಾಗಿ ಬಳಸಿಕೊಂಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:47 pm, Fri, 10 May 24