Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಲಿತ್ ಮಹಲ್ ಹೆಲಿಪ್ಯಾಡ್ ಜಾಗ ಅರಮನೆಗೆ ಸೇರಿದ್ದು -ವಿವಾದದ ಯಾತನೆ ಬಿಚ್ಚಿಟ್ಟ ರಾಜವಂಶಸ್ಥೆ ಪ್ರಮೋದಾದೇವಿ

ನಗರದ ಲಲಿತ್ ಮಹಲ್ ಹೋಟೆಲ್​ನಲ್ಲಿರುವ ಹೆಲಿಪ್ಯಾಡ್ ಜಾಗ ವಿವಾದದ ಕುರಿತು ರಾಜವಂಶಸ್ಥೆ ಪ್ರಮೋದಾದೇವಿ ಮಾತನಾಡಿದರು. ಹೆಲಿಪ್ಯಾಡ್​ ಜಾಗ ಬಿ ಖರಾಬ್ ಅಂತಾ ಎಲ್ಲೂ ಇಲ್ಲ. ಅದು ಅರಮನೆಗೆ ಸೇರಿದ ಜಾಗ ಎಂದು ಸ್ಪಷ್ಟನೆ ನೀಡಿದರು.

ಲಲಿತ್ ಮಹಲ್ ಹೆಲಿಪ್ಯಾಡ್ ಜಾಗ ಅರಮನೆಗೆ ಸೇರಿದ್ದು -ವಿವಾದದ ಯಾತನೆ ಬಿಚ್ಚಿಟ್ಟ ರಾಜವಂಶಸ್ಥೆ ಪ್ರಮೋದಾದೇವಿ
ರಾಜವಂಶಸ್ಥೆ ಪ್ರಮೋದಾದೇವಿ (ಎಡ); ಲಲಿತ್ ಮಹಲ್ ಹೋಟೆಲ್ (ಬಲ)
Follow us
KUSHAL V
|

Updated on:Jan 02, 2021 | 6:33 PM

ಮೈಸೂರು: ನಗರದ ಲಲಿತ್ ಮಹಲ್ ಹೋಟೆಲ್​ನಲ್ಲಿರುವ ಹೆಲಿಪ್ಯಾಡ್ ಜಾಗ ವಿವಾದದ ಕುರಿತು ರಾಜವಂಶಸ್ಥೆ ಪ್ರಮೋದಾದೇವಿ ಮಾತನಾಡಿದರು. ಹೆಲಿಪ್ಯಾಡ್​ ಜಾಗ ಬಿ ಖರಾಬ್ ಅಂತಾ ಎಲ್ಲೂ ಇಲ್ಲ. ಅದು ಅರಮನೆಗೆ ಸೇರಿದ ಜಾಗ ಎಂದು ಸ್ಪಷ್ಟನೆ ನೀಡಿದರು.

ಹರ್ಷಗುಪ್ತ ಡಿಸಿ ಆಗಿದ್ದಾಗ ಬಿ ಖರಾಬ್ ಅಂತಾ ಶುರುವಾಯ್ತು. ವಸ್ತ್ರದ್ ಬಂದ ವೇಳೆ ಅದು ಅರಮನೆಗೆ ಸೇರಿದ್ದೆಂದು ತೀರ್ಪು ನೀಡಿದ್ದರು. ಆದರೆ, ಬಳಿಕ ಡಿಸಿ ಶಿಖಾ ಬಂದ ವೇಳೆ ಸರ್ಕಾರಿ ಭೂಮಿ ಅಂತಾ ತೀರ್ಪು ಕೊಟ್ಟಿದರು.

ಹಾಗಾಗಿ, ಈ ತೀರ್ಪು ಪ್ರಶ್ನಿಸಿ ನಾವು ಹೈಕೋರ್ಟ್ ಮೊರೆ ಹೋಗಿದ್ದೆವು. ಇದೀಗ ಜೂ.19ರಂದು ಹೈಕೋರ್ಟ್ ಅರಮನೆಗೆ ಸೇರಿದ್ದೆಂದು ತೀರ್ಪು ನೀಡಿದೆ. ಅರಮನೆ ವಂಶಸ್ಥರಿಗೆ ಸೇರಿದ ಭೂಮಿ ಎಂದು ತೀರ್ಪು ಕೊಟ್ಟಿತ್ತು. ಇದನ್ನ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಸರ್ಕಾರದ ಅರ್ಜಿ ಸಹ ವಜಾಗೊಂಡಿದೆ. ಸರ್ಕಾರದ ಅರ್ಜಿಯನ್ನು ಕೋರ್ಟ್​ ಕಳೆದ ಡಿಸೆಂಬರ್ 19ರಂದು ವಜಾ ಮಾಡಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಹೇಳಿದರು.

‘ಎಲ್ಲ ಸರ್ಕಾರಗಳೂ ತೊಂದರೆ ಕೊಟ್ಟಿವೆ, ಈಗಿನ ಸರ್ಕಾರ ತಟಸ್ಥ’ ಎಲ್ಲ ಸರ್ಕಾರಗಳೂ ತೊಂದರೆ ಕೊಟ್ಟಿವೆ, ಈಗಿನ ಸರ್ಕಾರ ತಟಸ್ಥ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಹೇಳಿದ್ದಾರೆ. ಕೆಲ ಸರ್ಕಾರಗಳು ನಮಗೆ ಜಾಸ್ತಿ ತೊಂದರೆಯನ್ನು ಕೊಟ್ಟಿವೆ. ಕೆಲ ಸರ್ಕಾರ ಕಡಿಮೆ ತೊಂದರೆ ಕೊಟ್ಟಿವೆ. ಆದರೆ, ಯಾವುದೇ ಸರ್ಕಾರ ಅಥವಾ ವ್ಯಕ್ತಿಯನ್ನು ದೂಷಿಸುವುದಿಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಹೇಳಿದರು.

ಹಿಂಬದಿ ಸವಾರರಿಗೆ ಥರ್ಡ್ ಪಾರ್ಟಿ ವಿಮೆ ಪರಿಹಾರವಿಲ್ಲ -ಹೈಕೋರ್ಟ್ ಮಹತ್ವದ ತೀರ್ಪು

Published On - 6:23 pm, Sat, 2 January 21

ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?
ಮಾಜಿ ಪ್ರಧಾನಿಯ ಮಗನಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡ್ತೀನಾ? ಕುಮಾರಸ್ವಾಮಿ
ಮಾಜಿ ಪ್ರಧಾನಿಯ ಮಗನಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡ್ತೀನಾ? ಕುಮಾರಸ್ವಾಮಿ
ಪಂದ್ಯವಾಡು ಫೈನ್ ಕಟ್ಟು: ಬ್ಯಾಕ್ ಟು ಬ್ಯಾಕ್ ದಂಡ ಕಟ್ಟಿದ ದಿಗ್ವೇಶ್ ರಾಠಿ
ಪಂದ್ಯವಾಡು ಫೈನ್ ಕಟ್ಟು: ಬ್ಯಾಕ್ ಟು ಬ್ಯಾಕ್ ದಂಡ ಕಟ್ಟಿದ ದಿಗ್ವೇಶ್ ರಾಠಿ