ದಲಿತ ಕಾರ್ಮಿಕರನ್ನು ಕೂಡಿ ಹಾಕಿರುವ ಪ್ರಕರಣ: ವೀಡಿಯೋ ಮಾಡಿದ್ದಕ್ಕೆ ಗರ್ಭಿಣಿ ಮೇಲೆ ಹಲ್ಲೆ, ಗರ್ಭಪಾತ
ದಲಿತ ಕಾರ್ಮಿಕರನ್ನು ಕೂಡಿ ಹಾಕಿದ ಸಂದರ್ಭದಲ್ಲಿ ಗರ್ಭಿಣಿಯೊಬ್ಬರ ಮೇಲೆ ಹಲ್ಲೆ ನಡೆಸಲಾಗಿದ್ದು, ಸ್ಥಳದಲ್ಲೇ ಆಕೆಗೆ ಗರ್ಭಪಾತವಾಗಿರುವ ಮನಕಲಕುವ ಘಟನೆ ವರದಿಯಾಗಿದೆ.
ದಲಿತ ಕಾರ್ಮಿಕರನ್ನು ಕೂಡಿ ಹಾಕಿದ ಸಂದರ್ಭದಲ್ಲಿ ಗರ್ಭಿಣಿಯೊಬ್ಬರ ಮೇಲೆ ಹಲ್ಲೆ ನಡೆಸಲಾಗಿದ್ದು, ಸ್ಥಳದಲ್ಲೇ ಆಕೆಗೆ ಗರ್ಭಪಾತವಾಗಿರುವ ಮನಕಲಕುವ ಘಟನೆ ವರದಿಯಾಗಿದೆ.
ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಕ್ಷನ್ 504, 323, 342 ಸೇರಿದಂತೆ ಎಸ್ಸಿ, ಎಸ್ಟಿ ದೌರ್ಜನ್ಯದ ಅಡಿ ಪ್ರಕರಣ ದಾಖಲು. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, ಆರೋಪಿಗಳಾದ ಜಗದೀಶ್, ತಿಲಕ್ ವಿರುದ್ಧ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿದ ಹಿನ್ನೆಲೆ ಮಹಿಳೆಗೆ ಗರ್ಭಪಾತವಾಗಿತ್ತು. ತೋಟದ ಮಾಲೀಕ ಜಗದೀಶ್ ಗೌಡ ಎಂಬುವರಿದ ಹಲ್ಲೆ ನಡೆದಿತ್ತು. ಚಿಕ್ಕಮಗಳೂರು ತಾಲೂಕಿನ ಜೇನುಗದ್ದೆಯ ಪುರ ಗ್ರಾಮದಲ್ಲಿ ನಡೆದಿದ್ದ ಘಟನೆ ನಡೆದಿದೆ. 6 ಕುಟುಂಬದ 14 ಜನರನ್ನ ಕೊಠಡಿಯಲ್ಲಿ ಕೂಡಿ ಹಾಕಿದ್ದರು ಎನ್ನಲಾಗಿದೆ.
ತೋಟದ ಕೆಲಸಕ್ಕೆ ಬಂದಿದ್ದ ಕಾರ್ಮಿಕರು ತೋಟದ ಮಾಲೀಕನಲ್ಲಿ ಮುಂಗಡವಾಗಿ 9 ಲಕ್ಷ ರೂ. ಪಡೆದಿದ್ದರು. ಆದರೆ ಈಗ ಕಾರ್ಮಿಕರು ಬೇರೆ ಕಡೆಗೆ ಕೆಲಸಕ್ಕೆ ಹೋಗುವುದಾಗಿ ಮಾಲೀಕರಲ್ಲಿ ಹೇಳಿದ್ದಾರೆ ಅದಕ್ಕೆ ಮಾಲೀಕ ತನ್ನಿಂದ ಮುಂಗಡವಾಗಿ ಪಡೆದಿರುವ ಹಣವನ್ನು ಹೊಂದಿರುಗಿಸುವಂತೆ ಕಾಂಇರ್ಕರಲ್ಲಿ ಕೇಳಿದ್ದಾರೆ.
ಅದಕ್ಕೆ ಕಾರ್ಮಿಕರು ನಮ್ಮ ಬಳಿ ಸಧ್ಯಕ್ಕೆ ಕೊಡಲು ಹಣವಿಲ್ಲ, ಸ್ವಲ್ಪ ಸಮಯ ನೀಡಿ ಬಳಿಕ ಹಂದಿರುಗಿಸುತ್ತೇವೆ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ತೋಟದ ಮಾಲೀಕ ದುಡ್ಡು ಕೊಡುವವರೆಗೆ ಇಲ್ಲಿಂದ ಹೋಗುವಹಾಗಿಲ್ಲ ಎಂದು ಕಾರ್ಮಿಕರನ್ನು ಕೂಡಿಹಾಕಿದ್ದರು.
ತೋಟದ ಮಾಲೀಕರ ಜತೆ ಮಾತನಾಡುವ ಸಂದರ್ಭದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ ಮಹಿಳೆ ಗರ್ಭಿಣಿ ಎಂದೂ ನೋಡದೆ ಹಲ್ಲೆ ನಡೆಸಿದ್ದು, ಮಹಿಳೆಗೆ ಗರ್ಭಪಾತವಾಗಿದೆ. ಇದನ್ನು ತಡೆಯಲು ಬಂದವರ ಮೇಲೂ ಕೂಡ ಹಲ್ಲೆ ನಡೆಸಿದ್ದಾರೆ. ಸಧ್ಯ ಮಹಿಳೆಯು ಚಿಕ್ಕಮಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.