ಮತ್ತೊಂದು ಜರ್ಕ್: ಚಕ್ರತೀರ್ಥ ಸಮಿತಿ ಧೋರಣೆ ಖಂಡಿಸಿ ಸರ್ಕಾರದ ವಿರುದ್ಧ ಸಿಡಿದೆದ್ದ ಹಳೇ ಪಠ್ಯ ಸಮಿತಿ ಸದಸ್ಯರು
ಪಠ್ಯವಸ್ತುವಿನ ಆಶಯಗಳಾದ ಸಾಮಾಜಿಕ ನ್ಯಾಯ, ಲಿಂಗ ಸಮಾನತೆ, ಪ್ರಾದೇಶಿಕ ಪ್ರಾತಿನಿಧ್ಯಕ್ಕೆ ವಿರೋಧವಾಗಿ ಪ್ರಸ್ತುತ ಪಠ್ಯ ಪರಿಷ್ಕರಣೆ ಮಾಡಲಾಗಿದೆ. 1 ರಿಂದ 10ನೇ ತರಗತಿ ವರೆಗೂ ಕೇವಲ ಒಂದೇ ಒಂದು ಅವಕಾಶವಿದ್ದ ಸುಮಾರು 28 ಕವಿ - ಲೇಖಕರನ್ನ ಕೈಬಿಡಲಾಗಿದೆ. 10ನೇ ತರಗತಿಯಲ್ಲಿ 4 ಬಿಡಿ ಲೇಖನ 7 ಪೂರಕ ಲೇಖನ ಸೇರಿಸಿ ವಿದ್ಯಾರ್ಥಿಗಳಿಗೆ ನೂತನ ಸಮಿತಿ ಹೊರೆ ಮಾಡಿದೆ.
ಬೆಂಗಳೂರು: ರಾಜ್ಯದಲ್ಲಿ ಶಾಲಾ ಪಠ್ಯ ಪರಿಷ್ಕರಣೆ ವಿವಾದ ಮತ್ತೊಂದು ಮಜಲು ತಲುಪಿದೆ. ವಿವಾದ ಹಿಂದಿನ ಕಾಲಘಟ್ಟಕ್ಕೆ ಸರಿದಿದ್ದು, ಈ ಹಿಂದಿನ ಪಠ್ಯ ಪರಿಷ್ಕರಣೆ ಸಮಿತಿಯಲ್ಲಿದ್ದ ಸದಸ್ಯರು ಚಕ್ರತೀರ್ಥ (rohit chakratheertha) ಪಠ್ಯ ಪರಿಷ್ಕರಣಾ ಸಮಿತಿ ಧೋರಣೆ ಖಂಡಿಸಿ, ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ (basavaraj bommai) ಪತ್ರ ಬರೆದ ಹಳೇ ಪಠ್ಯ ಸಮಿತಿಯ ಸದಸ್ಯರು ಚಕ್ರತೀರ್ಥ ಪಠ್ಯ ಪುಸ್ತಕ ಸಮಿತಿಯುನ ನಾಡಿನ ಕವಿಗಳಿಗೆ ಅನ್ಯಾಯ ಮಾಡಿದೆ. ಹಳೆಯ ಪಠ್ಯ ಪರಿಷ್ಕರಣಾ ಸಮಿತಿಯ ಕವಿಗಳಿಗೆ ಅನ್ಯಾಯವಾಗಿದೆ. ಹಾಲಿ ಅದ್ಯಕ್ಷ ರೋಹಿತ್ ಚಕ್ರತೀರ್ಥ ಸಮಿತಿಯು ಹಳೇ ಪಠ್ಯದಲ್ಲಿದ್ದ 28 ಲೇಖಕ ಮತ್ತು ಕವಿಗಳ ಪಠ್ಯವನ್ನು ಕೈಬಿಟ್ಟಿದೆ. ಸಿಎಂ ಪಠ್ಯ ಪರಿಶೀಲನೆ ಮಾಡಿ, ಈ ಕುರಿತು ಚರ್ಚೆ ನಡೆಸಿ, ನ್ಯಾಯ ನೀಡಬೇಕೆಂದು ಹಳೆಯ ಪಠ್ಯ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ (Textbook row).
ಪಠ್ಯವಸ್ತುವಿನ ಆಶಯಗಳಾದ ಸಾಮಾಜಿಕ ನ್ಯಾಯ, ಲಿಂಗ ಸಮಾನತೆ, ಪ್ರಾದೇಶಿಕ ಪ್ರಾತಿನಿಧ್ಯಕ್ಕೆ ವಿರೋಧವಾಗಿ ಪ್ರಸ್ತುತ ಪಠ್ಯ ಪರಿಷ್ಕರಣೆ ಮಾಡಲಾಗಿದೆ. 1 ರಿಂದ 10ನೇ ತರಗತಿ ವರೆಗೂ ಕೇವಲ ಒಂದೇ ಒಂದು ಅವಕಾಶವಿದ್ದ ಸುಮಾರು 28 ಕವಿ – ಲೇಖಕರನ್ನ ಕೈಬಿಡಲಾಗಿದೆ. 10ನೇ ತರಗತಿಯಲ್ಲಿ 4ಬಿಡಿ ಲೇಖನಗಳನ್ನು 7 ಪೂರಕ ಲೇಖನಗಳನ್ನ ಸೇರಿಸಿ ವಿದ್ಯಾರ್ಥಿಗಳಿಗೆ ನೂತನ ಸಮಿತಿ ಹೊರೆ ಮಾಡಿದೆ. ವಿದ್ಯಾರ್ಥಿಗಳ ಬ್ಯಾಗಿನ ಹೊರೆ ಕಡಿಮೆ ಮಾಡಬೇಕು ಎನ್ನುವ ನೀತಿಗೆ ವಿರುದ್ಧವಾದ ಪಠ್ಯ ಪುಸ್ತಕ ರಚನೆ ಮಾಡಿದೆ. ಹಂಸಲೇಖ, ಅರವಿಂದ ಮಾಲಗತ್ತಿ, ಸಾರಾ ಅಬೂಬಕರ್, ಲಂಕೇಶ್, ಜೋಗಿ, ರಂಜಾನ್ ದರ್ಗಾ, ನಾಗೇಶ್ ಹೆಗಡೆ, ಗಿರೀಶ್ ಕಾರ್ನಡ್ ಸೇರಿದಂತೆ 28 ಲೇಖಕರ ಪಠ್ಯ ಕೈಬಿಡಲಾಗಿದೆ ಎಂದು ಚಕ್ರತೀರ್ಥ ಪಠ್ಯ ಪರಿಷ್ಕರಣಾ ಸಮಿತಿಯ ಧೋರಣೆಯನ್ನು ವಿರೋಧಿಸಿ ಸಿಎಂಗೆ ಪತ್ರ ಬರೆಯಲಾಗಿದೆ. ಸಿಎಂ ಪಠ್ಯವನ್ನ ಪರಿಶೀಲನೆ ಮಾಡಿ, ಈ ಬಗ್ಗೆ ಚರ್ಚೆ ನಡೆಸಿ, ಸೂಕ್ತ ನ್ಯಾಯ ನೀಡುವಂತೆ ಹಳೆಯ ಪಠ್ಯ ಪುಸ್ತಕ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕೋಲಾರ ಬಸ್ ನಿಲ್ದಾಣ ನಾಯಿಗಳ ತಂಗುದಾಣವಾಗಿ ಮಾರ್ಪಟ್ಟಿದೆ, ಸಂಬಂಧಪಟ್ಟವರು ಸುಮ್ಮನಿದ್ದಾರೆ!
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:03 pm, Fri, 3 June 22