AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಕಾಲೇಜಿನಲ್ಲಿ ಭಾರೀ ಅಕ್ರಮ: ಅಭಿವೃದ್ಧಿ ಹೆಸರಲ್ಲಿ ಬಡ ವಿದ್ಯಾರ್ಥಿಗಳಿಂದ ಹಣ ಪಡೆದು ಕುಟುಂಬಸ್ಥರ ಖಾತೆಗೆ ಇಳಿಸ್ಕೊಂಡ್ರು

ಕಾಲೇಜು ಹೆಸರಿಗೆ ಜಮಾ ಆದ ಹಣವನ್ನು ತಮ್ಮ ಕುಟುಂಬದವರ ಖಾತೆಗೆ ಪ್ರಾಂಶುಪಾಲ ಅಲ್ಲಮ್ಮ ಪ್ರಭು ಹಾಗೂ ಎಫ್​ಡಿಎ ಸುನಿಲ್ ಕೂರ್ಗಿ ವರ್ಗಾಯಿಸಿಕೊಳ್ಳುತ್ತಿದ್ದು ದೊಡ್ಡಮಟ್ಟದ ಅಕ್ರಮ ನಡೆಯುತ್ತಿದೆ ಎಂಬ ಆರೋಪವಿದೆ. ಇಷ್ಟಾದರೂ ತುಮಕೂರು ಪಿಯು ಡಿಡಿಪಿಐ ನರಸಿಂಹ ಮೂರ್ತಿ ಮಾತ್ರ ಇದೆಲ್ಲವು ಆರೋಪ ಅಷ್ಟೇ ಎಂದಿದ್ದಾರೆ.

ಸರ್ಕಾರಿ ಕಾಲೇಜಿನಲ್ಲಿ ಭಾರೀ ಅಕ್ರಮ: ಅಭಿವೃದ್ಧಿ ಹೆಸರಲ್ಲಿ ಬಡ ವಿದ್ಯಾರ್ಥಿಗಳಿಂದ ಹಣ ಪಡೆದು ಕುಟುಂಬಸ್ಥರ ಖಾತೆಗೆ ಇಳಿಸ್ಕೊಂಡ್ರು
ಅಕ್ರಮದಲ್ಲಿ ಭಾಗಿಯಾದವರು
Skanda
| Edited By: ಆಯೇಷಾ ಬಾನು|

Updated on:Dec 20, 2020 | 10:13 AM

Share

ತುಮಕೂರು: ಸರ್ಕಾರಿ ಶಾಲಾ ಕಾಲೇಜುಗಳೆಂದರೆ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳೇ ಹೆಚ್ಚಾಗಿ ಬರೋದು. ಖಾಸಗಿ ವಿದ್ಯಾ ಸಂಸ್ಥೆಗಳ ಶುಲ್ಕ ಕಟ್ಟಲು ಹೋದರೆ ಬದುಕೇ ಹೈರಾಣಾಗಿ ಹೋಗುತ್ತದೆ ಎಂದು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ನೆಚ್ಚಿಕೊಳ್ಳತ್ತಾರೆ. ಆದರೆ, ಹೀಗೆ ನಂಬಿಕೊಂಡು ಬರುವ ವಿದ್ಯಾರ್ಥಿಗಳ ಅನಿವಾರ್ಯತೆಯನ್ನೇ ಬಂಡವಾಳ ಮಾಡಕೊಂಡು ಸರ್ಕಾರಿ ಕಾಲೇಜಿನ ಪ್ರಾಂಶುಪಾಲನೊಬ್ಬ ಕಾಲೇಜು ಅಭಿವೃದ್ದಿ ನೆಪದಲ್ಲಿ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಲೂಟಿ ಹೊಡೆದಿದ್ದಾನೆ.

ತುಮಕೂರು ಜಿಲ್ಲೆ ತಿಪಟೂರು ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ಐದಾರು ವರ್ಷಗಳಿಂದ ಕಾಲೇಜು ಅಭಿವೃದ್ಧಿ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿ ವಂಚಿಸಲಾಗುತ್ತಿದೆ. ಇಲ್ಲಿನ ಪ್ರಾಂಶುಪಾಲ ಅಲ್ಲಮ್ಮ ಪ್ರಭು ಮತ್ತು ಪ್ರಥಮ ದರ್ಜೆ ಗುಮಾಸ್ತ (FDA) ಸುನಿಲ್ ಕೂರ್ಗಿ ಇಬ್ಬರೂ ಜತೆಯಾಗಿ ಬಡ ವಿದ್ಯಾರ್ಥಿಗಳಿಂದ ಹಣ ಪೀಕಿ ತಮ್ಮ ಕುಟುಂಬದವರ ಖಾತೆಗೆ ಜಮಾ ಮಾಡುತಿದ್ದಾರೆ ಎನ್ನಲಾಗಿದೆ.

ಸರ್ಕಾರಿ ಕಾಲೇಜಿನಲ್ಲಿ ಭಾರೀ ಅಕ್ರಮ: ಹಣವನ್ನ ಅನ್ಯಮಾರ್ಗದಲ್ಲಿ ತಮ್ಮ ಕುಟುಂಬದವರ ಖಾತೆಗೆ ಜಮಾ ಮಾಡಿಸಿಕೊಂಡಿರುವ ಧನದಾಹಿ ಪ್ರಾಂಶುಪಾಲ ಮತ್ತು ಎಫ್​​ಡಿ‌ಎ ಇಬ್ಬರೂ ಈ ಕಾರ್ಯದಲ್ಲಿ ಪರಸ್ಪರ ಶಾಮೀಲಾಗಿದ್ದಾರೆ. ಜೊತೆಗೆ ಸರ್ಕಾರದಿಂದ ಅತಿಥಿ ಉಪನ್ಯಾಸಕರಿಗೆ ಸಂಬಳ ಬರುವಂತಿದ್ದರೂ ಕಾಲೇಜು ಅಭಿವೃದ್ಧಿ ಹೆಸರಲ್ಲಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿ  ಅದನ್ನು ಅಥಿತಿ ಉಪನ್ಯಾಸಕರಿಗೆ ಸಂಬಳವಾಗಿ ಕೊಡಲಾಗಿದೆ.

ಕಾಲೇಜಿನಲ್ಲಿ 2018 -19, 2019-20 ನೇ ಸಾಲಿನಲ್ಲಿ ಕಂಪ್ಯೂಟರ್ ಸೈನ್ಸ್, ಸಂಖ್ಯಾ ‌ಶಾಸ್ತ್ರ ಮತ್ತು ವಾಣಿಜ್ಯ ಶಾಸ್ತ್ರ ವಿಷಯಗಳಿಗೆ ಅಥಿತಿ ಉಪನ್ಯಾಸಕರನ್ನ ನೇಮಿಸಿಕೊಳ್ಳಲಾಗಿತ್ತು. ಅವರಿಗೆ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಹಣ ಮತ್ತು ಕಾಲೇಜು ಅಭಿವೃದ್ಧಿ ಖಾತೆಯ ಹಣವನ್ನು ಚೆಕ್ ಮೂಲಕ ನೀಡಲಾಗಿದೆ. ಆದರೆ, ಸರ್ಕಾರದ ಖಜಾನೆಯಿಂದ ಬಿಡುಗಡೆಯಾದ ಹಣವನ್ನು ಪ್ರಾಂಶುಪಾಲ ಹಾಗೂ ಎಫ್​​ಡಿ‌ಎ ತಮ್ಮ ಕುಟುಂಬದವರ ಖಾತೆಗೆ ಜಮಾ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪ್ರಾಂಶುಪಾಲನ ಪತ್ನಿ, ಬಾಮೈದ ಹಾಗೂ ಪ್ರಥಮ ದರ್ಜೆ ಗುಮಾಸ್ತನ ಸಂಬಂಧಿಕರ ಖಾತೆಗೆ ಸರ್ಕಾರದಿಂದ ಬಂದ ಹಣವನ್ನು ಜಮಾ ಮಾಡಿಕೊಂಡಿದ್ದಾರೆ. 2 ವರ್ಷದಲ್ಲಿ ಸುಮಾರು 20 ಲಕ್ಷ ರೂಪಾಯಿ ಲಪಟಾಯಿಸಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಸುಮಾರು 40 ಲಕ್ಷ ರೂಪಾಯಿಯನ್ನು ಸಹ ಇದೇ ರೀತಿ ಗೋಲ್​ಮಾಲ್ ಮಾಡಲಾಗಿದೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ.

ಈ ಅಕ್ರಮದಲ್ಲಿ ಪದವಿಪೂರ್ವ ಕಾಲೇಜುಗಳ ಉಪನಿರ್ದೇಶಕರ ಕೈವಾಡವೂ ಇದೆ ಎನ್ನಲಾಗಿದೆ. ಉಪನ್ಯಾಸಕರ ಸಂಬಳವನ್ನು ಅವರವರ ಖಾತೆಗೆ ನೇರವಾಗಿ ಹಾಕುವಂತೆ ಆದೇಶಿಸುವ ಬದಲು ಕಾಲೇಜುಗಳ ಹೆಸರಿಗೆ ಸಂದಾಯವಾಗುವಂತೆ ಆದೇಶ ಮಾಡಿದ್ದಾರೆ ಎನ್ನಲಾಗುತ್ತಿದೆ.

ಕಾಲೇಜು ಹೆಸರಿಗೆ ಜಮಾ ಆದ ಹಣವನ್ನು ತಮ್ಮ ಕುಟುಂಬದವರ ಖಾತೆಗೆ ಪ್ರಾಂಶುಪಾಲ ಅಲ್ಲಮ್ಮ ಪ್ರಭು ಹಾಗೂ ಎಫ್​ಡಿಎ ಸುನಿಲ್ ಕೂರ್ಗಿ ವರ್ಗಾಯಿಸಿಕೊಳ್ಳುತ್ತಿದ್ದು ದೊಡ್ಡಮಟ್ಟದ ಅಕ್ರಮ ನಡೆಸಲು ಅನುಕೂಲವಾಗಿದೆ ಎಂದು ಆರೋಪಿಸಲಾಗಿದೆ. ಸದ್ಯ ಇವರಿಬ್ಬರ ವಿರುದ್ದ ಎಸಿಬಿ ತನಿಖೆಗೆ ಸರ್ಕಾರ ಆದೇಶಿಸಿದೆ. ಆದರೆ, ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಇಷ್ಟಾದರೂ ತುಮಕೂರು ಪಿಯು ಡಿಡಿಪಿಐ ನರಸಿಂಹ ಮೂರ್ತಿ ಮಾತ್ರ ಇದೆಲ್ಲವು ಆರೋಪ ಅಷ್ಟೇ. ಇಲ್ಲಿ ಅಂತಹದ್ದೇನೂ ನಡೆದಿಲ್ಲ, ಸರ್ಕಾರದಿಂದ ಹಣ ಬರುವುದು ತಡವಾದರೆ ಈ ರೀತಿ ಮಾಡಬಹುದು ಅಂತಾ ಸಮಜಾಯಿಷಿ ನೀಡಿದ್ದಾರೆ.

ತುಮಕೂರು ಪಿಯು ಡಿಡಿಪಿಐ ನರಸಿಂಹ ಮೂರ್ತಿ

ಈ ಅಕ್ರಮದಲ್ಲಿ ಇನ್ನೂ ಯಾರು ಯಾರು ಪಾಲುದಾರರಿದ್ದಾರೆ, ಒಟ್ಟು ಎಷ್ಟು ಹಣ ಗುಳುಂ ಆಗಿದೆ ಎಂಬಿತ್ಯಾದಿ ವಿಚಾರಗಳು ತನಿಖೆಯಿಂದಲೇ ಬಯಲಾಗಬೇಕಿದೆ.

Published On - 10:12 am, Sun, 20 December 20

Follow Us
Skanda
Skanda
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ