AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇಂದಿನ ಪ್ರತಿಭಟನೆ ಬಗ್ಗೆ ನಮಗ್ಗೊತ್ತಿಲ್ಲ; ಆದ್ರೆ ಸೋಮವಾರ ಬಂದ್​ಗೆ ಸಿದ್ಧತೆ ಮಾಡಿಕೊಳ್ತೇವೆ’

ಬೆಂಗಳೂರು: APMC, ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗೆ ವಿರೋಧಿಸಿ ರೈತ ಪರ ಸಂಘಟನೆಗಳು ರಾಜ್ಯದಲ್ಲಿ ಇಂದು ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಆದರೆ, ಇಂದಿನ ಪ್ರತಿಭಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ. ಎರಡೆರಡು ಕಾರ್ಯಕ್ರಮಗಳನ್ನು ಮಾಡುವ ಅವಶ್ಯಕತೆ ಇಲ್ಲ. ಆದರೆ, ನಾವು ಇಂದಿನ ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇವೆ. ಕೇವಲ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಮಾತ್ರ ಭಾಗಿಯಾಗ್ತೇವೆ. ಈ ನಡುವೆ, ಸೋಮವಾರ ಬಂದ್‌ಗೆ ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಅಂತಾ ರೈತ […]

‘ಇಂದಿನ ಪ್ರತಿಭಟನೆ ಬಗ್ಗೆ ನಮಗ್ಗೊತ್ತಿಲ್ಲ; ಆದ್ರೆ ಸೋಮವಾರ ಬಂದ್​ಗೆ ಸಿದ್ಧತೆ ಮಾಡಿಕೊಳ್ತೇವೆ’
ಕೋಡಿಹಳ್ಳಿ ಚಂದ್ರಶೇಖರ್​ (ಸಾಂದರ್ಭಿಕ ಚಿತ್ರ)
KUSHAL V
|

Updated on:Sep 25, 2020 | 10:45 AM

Share

ಬೆಂಗಳೂರು: APMC, ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗೆ ವಿರೋಧಿಸಿ ರೈತ ಪರ ಸಂಘಟನೆಗಳು ರಾಜ್ಯದಲ್ಲಿ ಇಂದು ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಆದರೆ, ಇಂದಿನ ಪ್ರತಿಭಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ. ಎರಡೆರಡು ಕಾರ್ಯಕ್ರಮಗಳನ್ನು ಮಾಡುವ ಅವಶ್ಯಕತೆ ಇಲ್ಲ. ಆದರೆ, ನಾವು ಇಂದಿನ ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇವೆ. ಕೇವಲ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಮಾತ್ರ ಭಾಗಿಯಾಗ್ತೇವೆ. ಈ ನಡುವೆ, ಸೋಮವಾರ ಬಂದ್‌ಗೆ ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಅಂತಾ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ರಸ್ತೆ ತಡೆ ಕಾರ್ಯಕ್ರಮ ನಮ್ಮದಲ್ಲ. ನಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸೋದಿಲ್ಲ. ಇದು ನಮ್ಮ ಹೋರಾಟ ಅಲ್ಲ. ಹಾಗಾಗಿ ನಾವು ಭಾಗವಹಿಸೋದಿಲ್ಲ. ಇವತ್ತು ರಸ್ತೆ ತಡೆ ಮಾಡಿದ್ರೆ ಮತ್ತೆ ಅರ್ಧಕ್ಕೆ ಅರ್ಧ ಕರ್ನಾಟಕ ಬಂದ್ ಆಗತ್ತೆ. ಹಾಗಾಗಿ ನಾವು ರಸ್ತೆ ತಡೆ ಪ್ರತಿಭಟನೆಯಲ್ಲಿ ಭಾಗವಹಿಸೋದಿಲ್ಲ ಅಂತಾ ಹೇಳಿದ್ದಾರೆ.

ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ಇವತ್ತು ಎಲ್ಲಾ ರೈತ ಸಂಘಟನೆಗಳು ಸೇರಿ ಪ್ರತಿಭಟನೆ ಪಾಲ್ಗೊಳ್ಳಲು ನಿರ್ಧರಿಸಿದ್ದೇವೆ. ಆದರೆ, 28 ನೇ ತಾರೀಖು ಬಹಳ ದೊಡ್ಡ ಸಂಖ್ಯೆಯಲ್ಲಿ ಬಂದ್ ಮಾಡಲಾಗುತ್ತೆ. ಹಾಗಾಗಿ, ಅದಕ್ಕೆ, ಸಿದ್ಧತೆ ಮಾಡಿಕೊಳ್ತಾ ಇದ್ದೇವೆ ಎಂದು ಹೇಳಿದರು.

ಜೊತೆಗೆ, ರೈತರ ಹೋರಾಟವನ್ನು ನಿರ್ಲಕ್ಷ್ಯ ಮಾಡಿದ್ರೆ ಬಹಳ ಕೆಟ್ಟ ಪರಿಸ್ಥಿತಿಯನ್ನು ಸರ್ಕಾರ ಎದುರಿಸಬೇಕಾಗುತ್ತೆ. ಕನಿಷ್ಠ ಸೌಜನ್ಯಕ್ಕೆ ಆದರೂ ಸರ್ಕಾರ ರೈತರನ್ನು ಬಂದು ಮಾತನಾಡಿಸೋ ಪ್ರಯತ್ನ ಮಾಡಿಲ್ಲ ಅಂತಾ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Published On - 10:30 am, Fri, 25 September 20

Follow Us
KUSHAL V
KUSHAL V