PSI ಪರಶುರಾಮ ಸಾವು ಕೇಸ್​: ಶಾಸಕ ಚೆನ್ನಾರೆಡ್ಡಿ ವಿರುದ್ಧ ಕ್ರಮಕ್ಕೆ ಪೊಲೀಸರ ಹಿಂದೇಟು!

ಯಾದಗಿರಿ ಪಿಎಸ್​ಐ ಪರಶುರಾಮ ಅನುಮಾನಸ್ಪದವಾಗಿ ಮೃತಪಟ್ಟು ಒಂದು ವಾರ ಕಳೆದಿದೆ. ಪ್ರಕರಣದಲ್ಲಿ ಯಾದಗಿರಿ ಕಾಂಗ್ರೆಸ್​ ಶಾಸಕ ಚೆನ್ನಾರೆಡ್ಡಿ ಮತ್ತು ಪುತ್ರ ಪಂಪಾಗೌಡ ಹೆಸರು ಕೇಳಿಬಂದಿದೆ. ಪಿಎಸ್​ಐ ಪರಶುರಾಮ ಸಾವಿನ ಬಳಿಕ ಶಾಸಕ ಚೆನ್ನಾರೆಡ್ಡಿ ನಾಪತ್ತೆಯಾಗಿದ್ದಾರೆ ಎನ್ನಲಾಗಿತ್ತು. ಹಾಗಿದ್ದರೆ ಶಾಸಕ ಚೆನ್ನಾರೆಡ್ಡಿ ಎಲ್ಲಿದ್ದಾರೆ? ಇಲ್ಲಿದೆ ನೋಡಿ ಮಾಹಿತಿ

PSI ಪರಶುರಾಮ ಸಾವು ಕೇಸ್​: ಶಾಸಕ ಚೆನ್ನಾರೆಡ್ಡಿ ವಿರುದ್ಧ ಕ್ರಮಕ್ಕೆ ಪೊಲೀಸರ ಹಿಂದೇಟು!
ಪಿಎಸ್​ಐ ಪರಶುರಾಮ, ಶಾಸಕ ಚೆನ್ನಾರೆಡ್ಡಿ
Follow us
ವಿವೇಕ ಬಿರಾದಾರ
| Updated By: Ganapathi Sharma

Updated on:Aug 09, 2024 | 1:24 PM

ಯಾದಗಿರಿ ಪಿಎಸ್​ಐ ಪರಶುರಾಮ (PSI Parashuram) ಅನುಮಾನಸ್ಪದವಾಗಿ ಮೃತಪಟ್ಟು ಒಂದು ವಾರ ಕಳೆದಿದೆ. ಈ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಆಡಳಿತಾರೂಢ ಕಾಂಗ್ರೆಸ್​ ಮತ್ತು ವಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಪಿಎಸ್​ಐ ಪರಶುರಾಮ ಅವರ ಸಾವಿಗೆ ಯಾದಗಿರಿ ಕಾಂಗ್ರೆಸ್​ ಶಾಸಕ ಚೆನ್ನರೆಡ್ಡಿ ಮತ್ತು ಪುತ್ರ ಪಂಪನಗೌಡ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ಕೇಸ್​ಗೆ ಸಂಬಂಧಿಸಿದಂತೆ ಶಾಸಕ ಚೆನ್ನಾರೆಡ್ಡಿ ಮತ್ತು ಪುತ್ರ ಪಂಪಾಗೌಡ ವಿರುದ್ಧ ಜಾತಿ ನಿಂದನೆ ದೂರು ದಾಖಲಾಗಿದೆ. ಪ್ರಕರಣದಲ್ಲಿ ಶಾಸಕ ಚೆನ್ನಾರೆಡ್ಡಿ ಎ1 ಆಗಿದ್ದಾರೆ.

ಪಿಎಸ್​ಐ ಪರಶುರಾಮ ಅನುಮಾನಾಸ್ಪದ ಸಾವು ಪ್ರಕರಣ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಮತ್ತು ತಮ್ಮ ವಿರುದ್ಧ ಗಂಭೀರ ಆರೋಪ ಕೇಳಿಬರುತ್ತಿದ್ದಂತೆಯೇ ಶಾಸಕ ಚೆನ್ನಾರೆಡ್ಡಿ ಮತ್ತು ಪುತ್ರ ಪಂಪನಗೌಡ ನಾಪತ್ತೆಯಾಗಿದ್ದರು. ಅವರು ಈಗ ಎಲ್ಲಿದ್ದಾರೆ? ಶಾಸಕ ಚೆನ್ನಾರೆಡ್ಡಿ ವಿರುದ್ಧ ಜಾತಿನಿಂದನೆ ದೂರು ದಾಖಲಾಗಿದ್ದರೂ ಪೊಲೀಸರು ಇನ್ನೂವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲವೇಕೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಪಿಎಸ್​ಐ ಪರಶುರಾಮ ಅನುಮಾನಸ್ಪದ ಸಾವು ಚರ್ಚೆಗೀಡಾಗುತ್ತಿದ್ದಂತೆಯೇ ಪರಶುರಾಮ ಪತ್ನಿ ಶ್ವೇತಾ, ಪತಿಯ ಸಾವಿಗೆ ಶಾಸಕ ಚೆನ್ನಾರೆಡ್ಡಿ ಮತ್ತು ಅವರ ಪುತ್ರ ಪಂಪನಗೌಡ ಕಾರಣ ಎಂದು ಆರೋಪಿಸಿದ್ದರು.  ದೂರು ದಾಖಲಿಸಿಕೊಳ್ಳಲು ಯಾದಗಿರಿ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದು ಸರ್ಕಾರವನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡಿತು. ಕೊನೆಗೆ ಯಾದಗಿರಿ ನಗರ ಪೊಲೀಸ್​​ ಠಾಣೆಯಲ್ಲಿ ಶಾಸಕ ಚೆನ್ನಾರೆಡ್ಡಿ ಮತ್ತು ಪಂಪನಗೌಡ ವಿರುದ್ಧ ದೂರು ದಾಖಲಾಯ್ತು. ಇತ್ತ ದೂರು ದಾಖಲಾಗುತ್ತಿದ್ದಂತೆ ಶಾಸಕ ಚೆನ್ನಾರೆಡ್ಡಿ ಮತ್ತು ಪಂಪನಗೌಡ ಯಾದಗಿರಿಯಿಂದ ಕಾಲ್ಕಿತ್ತಿದ್ದು, ದೆಹಲಿಗೆ ತೆರಳಿದ್ದಾರೆ ಎಂಬ ವಂದತಿ ಹಬ್ಬಿತ್ತು.

ಇದನ್ನೂ ಓದಿ: ಪಿಎಸ್ಐ ಪರಶುರಾಮ ಮನೆಯಲ್ಲಿ ಶಾಸಕ ಚೆನ್ನಾರೆಡ್ಡಿ ಲೆಟರ್​ ಹೆಡ್​​ ಪತ್ತೆ!

ಆದರೆ ‘ಟಿವಿ9’ ಡಿಜಿಟಲ್​ಗೆ ಮೂಲಗಳಿಂದ ಮಾಹಿತಿ ದೊರೆತಿದ್ದು, ಶಾಸಕ ಚೆನ್ನಾರೆಡ್ಡಿ ಮತ್ತು ಪಂಪನಗೌಡ ಅಪ್ಪ-ಮಕ್ಕಳು ಬೆಂಗಳೂರಿನಲ್ಲೇ ಇದ್ದಾರೆ ಎಂದು ತಿಳಿದುಬಂದಿದೆ. ಇಷ್ಟೇ ಅಲ್ಲದೆ, ಪಿಎಸ್ಐ ಪರಶುರಾಮ ಅನುಮಾನಾಸ್ಪದ ಸಾವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಯಾದಗಿರಿಯಿಂದ ಕಾಲ್ಕಿತ್ತ ಶಾಸಕ ಚೆನ್ನಾರೆಡ್ಡಿ ಬೆಂಗಳೂರಿಗೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಘಟನೆ ಬಗ್ಗೆ ಸಂಪೂರ್ಣ ವಿವರ ನೀಡಿದ್ದಾರೆ ಎನ್ನಲಾಗಿತ್ತು. ಮುಖ್ಯಮಂತ್ರಿಗಳನ್ನು ಭೇಟಿಯಾದ ಬಳಿಕ ಶಾಸಕ ಚೆನ್ನಾರೆಡ್ಡಿ ಬೆಂಗಳೂರಿನಲ್ಲೇ ನೆಲಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.

ಕ್ರಮಕ್ಕೆ ಪೊಲೀಸರ ಹಿಂದೇಟು

ಪಿಎಸ್​ಐ ಪರಶುರಾಮ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಶಾಸಕ ಚೆನ್ನಾರೆಡ್ಡಿ ವಿರುದ್ಧ ಜಾತಿ ನಿಂದನೆ ಕೇಸ್​ ದಾಖಲಾದರೂ ಪೊಲೀಸರು ಯಾಕೆ ಇನ್ನೂ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ. ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದು, ಶಾಸಕ ಚೆನ್ನಾರೆಡ್ಡಿ ಎ1 ಇದ್ದರೂ ಪೊಲೀಸರು ಅವರನ್ನು ಇನ್ನೂವರೆಗೂ ವಿಚಾರಣೆಗೆ ಒಳಪಡಿಸಿಲ್ಲ. ಎಫ್​​ಎಸ್​ಎಲ್​ ವರದಿ ಬಂದ ಬಳಿಕ ಶಾಸಕ ಚೆನ್ನಾರೆಡ್ಡಿ ಅವರನ್ನು ವಿಚಾರಣೆಗೆ ಕರೆಯಲು ನಿರ್ಧರಿಸಲಾಗಿದೆ ಎಂದು ಪೊಲೀಸ್​​ ಮೂಲಗಳಿಂದ ಮಾಹಿತಿ ದೊರೆತಿದೆ.

ಪಿಎಸ್​ಐ ಪರಶುರಾಮ ಸಾವು

ಪಿಎಸ್​ಐ ಪರಶುರಾಮ ಯಾದಗಿರಿ ನಗರ ಠಾಣೆಗೆ ವರ್ಗಾವಣೆಯಾಗಿ ಒಂದು ವರ್ಷ ಕಳೆದಿರಲಿಲ್ಲ. ಏಳು ತಿಂಗಳಲ್ಲಿ ಮತ್ತೆ ಯಾದಗಿರಿ ಸೈಬರ್​ ಕ್ರೈಂ ಠಾಣೆಗೆ ವರ್ಗಾವಣೆಯಾಗಿದ್ದರು. ಯಾದಗಿರಿ ನಗರ ಪೊಲೀಸ್​ ಠಾಣೆಯಲ್ಲೇ ಮುಂದುವರೆಸಲು ಶಾಸಕ ಚೆನ್ನಾರೆಡ್ಡಿ 30 ಲಕ್ಷ ರೂ. ಬೆಡಿಕೆ ಇಟ್ಟಿದ್ದರು. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಪಿಎಸ್​ಐ ಶುಕ್ರವಾರ (ಆಗಸ್ಟ್​.02) ಮಧ್ಯಾಹನ್ನ ವಸತಿ ಗೃಹದಲ್ಲಿ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ. ಮೂಗಿನಲ್ಲಿ ಹಾಗೂ ಬಾಯಯಲ್ಲಿ ರಕ್ತ ಬಂದಿತ್ತು. ಈ ಸಾವಿಗೆ ಶಾಸಕ ಚೆನ್ನಾರೆಡ್ಡಿ ಮತ್ತು ಪಂಪನಗೌಡ ಕಾರಣ. ಶಾಸಕ ಚೆನ್ನಾರೆಡ್ಡಿ ನಮಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಪರಶುರಾಮ ಪತ್ನಿ ಶ್ವೇತಾ ಆರೋಪಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:33 pm, Fri, 9 August 24