ಬೆಂಗಳೂರು: ಭಾನುವಾರ (Sunday) (ಜೂನ್ 26) ರಂದು 17 ವರ್ಷದ ಪಿಯು ವಿದ್ಯಾರ್ಥಿಯೊಬ್ಬ (PU Student) ನೀರಿನ ಹೊಂಡದಲ್ಲಿ (Pond) ಬಿದ್ದು ಸಾವನ್ನಪ್ಪಿರುವ (Died) ಘಟನೆ ದೇವನಹಳ್ಳಿಯ (Devanhalli) ಕನಕಶ್ರೀ ಜ್ಞಾನದೀಪ ಪಿಯು ಕಾಲೇಜು (PU College) ಆವರಣದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿ ಹನುಮಂತ ಎಂದು ತಿಳಿದು ಬಂದಿದ್ದು, ಹನುಮಂತ ಕೊಪ್ಪಳ ಜಿಲ್ಲೆಯ ಸವಣೂರಿನ ನಿವಾಸಿಯಾಗಿದ್ದಾನೆ. ಹನುಮಂತ 20 ದಿನಗಳ ಹಿಂದ ಕಾಲೇಜಿಗೆ ದಾಖಲಾಗಿದ್ದು, ಕಾಲೇಜು ಹಾಸ್ಟೆಲ್‌ನಲ್ಲಿ ವಾಸವಾಗಿದ್ದನು.
ಇದನ್ನು ಓದಿ: ಸ್ನಾತಕೋತ್ತರ ಮತ್ತು ಕಾನೂನು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ವಿಸ್ತರಿಸಿದ ಕೆಎಸ್ಆರ್ಟಿಸಿ – ಏನಿದರ ವಿವರ?
ಪೊಲೀಸ್ ಮಾಹಿತಿ ಪ್ರಕಾರ ಹನುಮಂತ ಜೂನ್ 26 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಬಟ್ಟೆ ತೊಳೆಯಲು ಹೊಂಡದ ಬಳಿ ಬಂದಾಗ ಆಯ ತಪ್ಪಿ ಹೊಂಡದಲ್ಲಿ ಬಿದ್ದಿದ್ದಾನೆ. ಕೂಡಲೆ ಸ್ಥಳದಲ್ಲಿದ್ದ ಇತರೆ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಹನುಮಂತನನ್ನು ರಕ್ಷಿಸುವಲ್ಲಿ ಮುಂದಾದರೂ, ಅಷ್ಟೊತ್ತಿಗಾಗಲೇ ಹನುಮಂತನ ಪ್ರಾಣಪಕ್ಷಿ ಹಾರಿಹೋಗಿತ್ತು. ದೇವನಹಳ್ಳಿ ಪೊಲೀಸರು ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದ್ದಾರೆ.
ಇದನ್ನು ಓದಿ: ಬಿಬಿಎಂಪಿ ‘ಬಂಡಲ್’ ರಸ್ತೆ! ಏನಿದರ ಆಳ ಅಗಲ? ಟಿವಿ9 ಡಿಜಿಟಲ್ ಲೈವ್ನಲ್ಲಿ ಚರ್ಚೆ
ಹನುಮಂತನ ಸಂಬಂಧಿಕರು ಸೋಮವಾರ ದೇವನಹಳ್ಳಿ ಕಾಲೇಜು ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಹನುಮಂತನ ಪೋಷಕರು ಇನ್ನೂ ಔಪಚಾರಿಕವಾಗಿ ದೂರು ದಾಖಲಿಸಿಲ್ಲ. ಆದರೆ ಯಾರ ವಿರುದ್ಧವೂ ಯಾವುದೇ ಆರೋಪಗಳಿಲ್ಲದಿದ್ದರೆ ನಾವು ಅಸ್ವಾಭಾವಿಕ ಸಾವು ಎಂದು ಪ್ರಕರಣವನ್ನು ದಾಖಲಿಸಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗೋಕರ್ಣದ ಕೋಟಿತೀರ್ಥ ಪುಷ್ಕರಣಿಯಲ್ಲಿ ಮುಳುಗಿ ವ್ಯಕ್ತಿ ಸಾವು
ಉತ್ತರ ಕನ್ನಡ: ಗೋಕರ್ಣದ ಕೋಟಿತೀರ್ಥ ಪುಷ್ಕರಣಿಯಲ್ಲಿ ಮುಳುಗಿ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ. ಗೋಕರ್ಣದ ನಿವಾಸಿಯಾದ ಸಂತೋಷ್ ರೆಬೆಲ್ಲೋ (45) ಮೃತ ದುರ್ದೈವಿ. ಸಂತೋಷ್ ಕೋಟಿತೀರ್ಥ ಪುಷ್ಕರಣಿಯಲ್ಲಿ ಈಜಲೆಂದು ಹೋಗಿದ್ದನು. ಈ ವೇಳೆ ಪುಷ್ಕರಣಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಗೋಕರ್ಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯರ ಸಹಕಾರದಿಂದ ಪೊಲೀಸರು ಮೃತದೇಹವನ್ನು ದಡಕ್ಕೆಳೆದು ತಂದಿದ್ದಾರೆ.
ಸಿಮೆಂಟ್ ಕಾರ್ಖಾನೆಯ ಬೆಲ್ಟ್ ನಲ್ಲಿ ಸಿಲುಕಿ ಕಾರ್ಮಿಕ ಸಾವು
ಕಲಬುರಗಿ: ಸಿಮೆಂಟ್ ಕಾರ್ಖಾನೆಯ ಬೆಲ್ಟ್ ನಲ್ಲಿ ಸಿಲುಕಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದ ಅಲ್ಟ್ರಾಟೆಕ್ ಕಂಪನಿಯ ರಾಜಶ್ರೀ ಸಿಮೆಂಟ್ ಘಟಕದಲ್ಲಿ ನಡೆದಿದೆ. ಕಾರ್ಮಿಕ ಸಂಜಯ್ (28) ಮೃತ ದುರ್ದೈವಿ. ಸಂಜಯ್, ಸೇಡಂ ತಾಲೂಕಿನ ಹಂಗನಳ್ಳಿ ಗ್ರಾಮದ ನಿವಾಸಿಯಾಗಿದ್ದು, ಅಲ್ಟ್ರಾಟೆಕ್ ಕಂಪನಿಯಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಇಂದು ಜೂನ್ 28 ನಸುಕಿವ ಜಾವ ಕೆಲಸ ಮಾಡುತ್ತಿದ್ದಾಗ ಬೆಲ್ಟ್ ನಲ್ಲಿ ಸಿಲುಕಿ ಸಾವನ್ನಪ್ಪಿದ್ದಾನೆ. ಪ್ಯಾಕ್ಟರಿ ಮೇಲಾಧಿಕಾರಿಗಳ ನಿರ್ಲಕ್ಷ್ಯ ವೇ ಸಾವಿಗೆ ಕಾರಣ ಅಂತ ಕಾರ್ಮಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಳಖೇಡ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 4:09 pm, Tue, 28 June 22