‘ಸುರೇಶ್ ಸರ್.. ಕೊರೊನಾ ನಡುವೆ CET ಬರೆಯೋಕೆ ಭಯವಾಗುತ್ತೆ’
ಬೆಂಗಳೂರು: ಕೊರೊನಾ ನಡುವೆ PUC ಪರೀಕ್ಷೆಯನ್ನ ಮುಗಿಸಿದ ವಿದ್ಯಾರ್ಥಿಗಳಿಗೆ ಈಗ CET ಪರೀಕ್ಷೆ ತಲೆಬಿಸಿಯಾಗಿ ಪರಿಣಮಿಸಿದೆ. ಮಹಾಮಾರಿಯ ಅಬ್ಬರ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ CET ಬರೆಯೋಕೆ ಭಯವಾಗುತ್ತಿದೆ. ಹೀಗಾಗಿ, CET ಪರೀಕ್ಷೆಯನ್ನ ಮುಂದೂಡುವಂತೆ ಕೆಲ ವಿದ್ಯಾರ್ಥಿಗಳು ವಿಡಿಯೋ ಮಾಡುವ ಮೂಲಕ ಶಿಕ್ಷಣ ಸಚಿವ ಸುರೇಶ್ ಕುಮಾರ್ಗೆ ಮನವಿ ಮಾಡಿಕೊಂಡಿದ್ದಾರೆ. ಜುಲೈ 30ರಿಂದ CET ಪರೀಕ್ಷೆ ಪ್ರಾರಂಭವಾಗಲಿದೆ. ಹೀಗಾಗಿ, ವಿದ್ಯಾರ್ಥಿಗಳು ಶಿಕ್ಷಣ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ. ಪಿಯು ಪರೀಕ್ಷೆ ಬರೆಯುವಾಗಲೂ ಆತಂಕ ಹೆಚ್ಚಾಗಿತ್ತು. ಈಗ ಮತ್ತಷ್ಟು ಭಯ ಹಾಗೂ ಗಾಬರಿ […]

ಬೆಂಗಳೂರು: ಕೊರೊನಾ ನಡುವೆ PUC ಪರೀಕ್ಷೆಯನ್ನ ಮುಗಿಸಿದ ವಿದ್ಯಾರ್ಥಿಗಳಿಗೆ ಈಗ CET ಪರೀಕ್ಷೆ ತಲೆಬಿಸಿಯಾಗಿ ಪರಿಣಮಿಸಿದೆ. ಮಹಾಮಾರಿಯ ಅಬ್ಬರ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ CET ಬರೆಯೋಕೆ ಭಯವಾಗುತ್ತಿದೆ. ಹೀಗಾಗಿ, CET ಪರೀಕ್ಷೆಯನ್ನ ಮುಂದೂಡುವಂತೆ ಕೆಲ ವಿದ್ಯಾರ್ಥಿಗಳು ವಿಡಿಯೋ ಮಾಡುವ ಮೂಲಕ ಶಿಕ್ಷಣ ಸಚಿವ ಸುರೇಶ್ ಕುಮಾರ್ಗೆ ಮನವಿ ಮಾಡಿಕೊಂಡಿದ್ದಾರೆ.
ಜುಲೈ 30ರಿಂದ CET ಪರೀಕ್ಷೆ ಪ್ರಾರಂಭವಾಗಲಿದೆ. ಹೀಗಾಗಿ, ವಿದ್ಯಾರ್ಥಿಗಳು ಶಿಕ್ಷಣ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ. ಪಿಯು ಪರೀಕ್ಷೆ ಬರೆಯುವಾಗಲೂ ಆತಂಕ ಹೆಚ್ಚಾಗಿತ್ತು. ಈಗ ಮತ್ತಷ್ಟು ಭಯ ಹಾಗೂ ಗಾಬರಿ ಶುರುವಾಗಿದೆ. ಹಾಗಾಗಿ ಮುಕ್ತ ವಾತಾವರಣ ಸೃಷ್ಟಿಯಾದ ಬಳಿಕ CET ನಡೆಸುವಂತೆ ವಿಡಿಯೋ ಮುಖಾಂತರ ಮನವಿ ಮಾಡಿಕೊಂಡಿದ್ದಾರೆ.
Follow Us



