KERC -ESCOMs: ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಿಸ ಬೇಕಾ, ಬೇಡವಾ? ಇಂದಿನಿಂದ ಗ್ರಾಹಕರ ಅಹವಾಲು ಸ್ವೀಕಾರ, ನೀವೇನಂತೀರಿ?

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕ ಕಂಗಾಲು ಆಗಿದ್ದಾನೆ. ಇದರ ಬೆನ್ನಲ್ಲೇ ಇದೀಗ ವಿದ್ಯುತ್ ಗ್ರಾಹಕರಿಗೆ ಮತ್ತೊಂದು ಶಾಕ್ ಆಗಲಿದೆ. ವಿದ್ಯುತ್‌ ಕಂಪನಿಗಳು ದರ ಹೆಚ್ಚಳಕ್ಕೆ ನಷ್ಟದ ಕಾರಣ ಹೇಳುತ್ತಿವೆ. ಯಾವೆಲ್ಲಾ ವರ್ಷದಲ್ಲಿ ಎಷ್ಟೆಷ್ಟು ದರ ಪರಿಷ್ಕರಣೆಯಾಗಿತ್ತು? ಇಲ್ಲಿದೆ ಪಟ್ಟಿ:

KERC -ESCOMs: ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಿಸ ಬೇಕಾ, ಬೇಡವಾ? ಇಂದಿನಿಂದ ಗ್ರಾಹಕರ ಅಹವಾಲು ಸ್ವೀಕಾರ, ನೀವೇನಂತೀರಿ?
ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಿಸ ಬೇಕಾ, ಬೇಡವಾ? ಇಂದಿನಿಂದ ಗ್ರಾಹಕರ ಅಹವಾಲು ಸ್ವೀಕರಿಸಲಿದೆ KERC
TV9kannada Web Team

| Edited By: sadhu srinath

Feb 14, 2022 | 8:11 AM

ಬೆಂಗಳೂರು: ರಾಜ್ಯದ ಜನರಿಗೆ ಕರೆಂಟ್ ಶಾಕ್ ಫಿಕ್ಸ್ ಆದಂತಿದೆ. ಪ್ರತಿ ಯೂನಿಟ್ ದರ ಹೆಚ್ಚಿಸುವಂತೆ ವಿದ್ಯುತ್ ದರ ಪರಿಷ್ಕರಣೆ ಕೋರಿ ಎಸ್ಕಾಂಗಳಿಂದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (KERC) ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇಂದಿನಿಂದ ಗ್ರಾಹಕರ ಅಹವಾಲು ಸ್ವೀಕರಿಸಲಿರುವ KERC ಇಂದು ಬೆಸ್ಕಾಂ (Bangalore Electricity Supply Company -Bescom) ) ವಿದ್ಯುತ್ ದರ ಪರಿಷ್ಕರಣೆ ಪರಿಶೀಲನೆ ನಡೆಸಲಿದೆ. ಇಂದಿನಿಂದ 3 ದಿನಗ ಕಾಲ ಎಲ್ಲ ಎಸ್ಕಾಂಗಳ ದರ ಪರಿಷ್ಕರಣೆಯ ಪರಿಶೀಲನಾ ಕಾರ್ಯವೂ ಆರಂಭವಾಗಲಿದೆ. ವಸಂತನಗರದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಲ್ಲಿ ಅಹವಾಲು ಸ್ವೀಕರಣಾ ಕಾರ್ಯ ನಡೆಯಲಿದೆ.

ರಾಜ್ಯದಾದ್ಯಂತ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ದರ ಹೆಚ್ಚಳ ಬಹುತೇಕ ಖಚಿತವಾಗಿದೆ. ಕಳೆದ ವರ್ಷ 1.39 ಪೈಸೆಗೆ ದರ ಪರಿಷ್ಕರಣೆಗೆ ಪ್ರಸ್ತಾಪ ಬಂದಿತ್ತಾದರೂ KERC ಪರಿಷ್ಕರಣೆ ಮಾಡಿದ್ದು ಕೇವಲ 30 ಪೈಸೆ ಎಂಬುದು ತುಸು ಸಮಾಧಾನಕರವಾಗಿತ್ತು. ಅದು ಕೊರೊನಾ ಸೋಂಕಿನ ಕಾಲವಾಗಿತ್ತು. ಆದರೆ ಈಗ ಹಳೆಯ ಬಾಕಿ ಸೇರಿದಂತೆ ಕೊರೊನಾ ದೂರವಾಗಿರುವುದನ್ನೂ ಪರಿಗಣಿಸಿದಾಗ ವಿದ್ಯುತ್ ಬೆಲೆಯೇರಿಕೆ ಬರೆ ಬೇಸಿಗೆ ವೇಳೆಗೆ ಚುರುಗುಟ್ಟುವುದು ಖಚಿತ ಎಂದು ವಿಶ್ಲೇಷಿಸಲಾಗಿದೆ. ಗಮನಾರ್ಹವೆಂದರೆ ಈ ವರ್ಷವೂ 1.50 ಪೈಸೆ ದರ ಏರಿಕೆಗೆ ಪ್ರಸ್ತಾವ ಮುಂದಿಟ್ಟಿವೆ ಎಸ್ಕಾಂಗಳು.

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕ ಕಂಗಾಲು ಆಗಿದ್ದಾನೆ. ಇದರ ಬೆನ್ನಲ್ಲೇ ಇದೀಗ ವಿದ್ಯುತ್ ಗ್ರಾಹಕರಿಗೆ ಮತ್ತೊಂದು ಶಾಕ್ ಆಗಲಿದೆ. ವಿದ್ಯುತ್‌ ಕಂಪನಿಗಳು ದರ ಹೆಚ್ಚಳಕ್ಕೆ ನಷ್ಟದ ಕಾರಣ ಹೇಳುತ್ತಿವೆ. ಯಾವೆಲ್ಲಾ ವರ್ಷದಲ್ಲಿ ಎಷ್ಟೆಷ್ಟು ದರ ಪರಿಷ್ಕರಣೆಯಾಗಿತ್ತು? ಇಲ್ಲಿದೆ ಪಟ್ಟಿ:

– 2009ರಲ್ಲಿ ಪ್ರತಿ ಯೂನಿಟ್ ಗೆ 34 ಪೈಸೆ ಹೆಚ್ಚಳ – 2010 ಪ್ರತಿ ಯೂನಿಟ್ ಗೆ 30 ಪೈಸೆ ಹೈಕ್ – 2011 ಪ್ರತಿ ಯೂನಿಟ್ ಗೆ 28 ಪೈಸೆ ಹೈಕ್ – 2012 ಪ್ರತಿ ಯೂನಿಟ್ ಗೆ 13 ಪೈಸೆ ಹೈಕ್ – 2013 ಪ್ರತಿ ಯೂನಿಟ್ ಗೆ 13 ಪೈಸೆ ಹೈಕ್ – 2017 ಪ್ರತಿ ಯೂನಿಟ್ಗೆ 48 ಪೈಸೆ ಹೆಚ್ಚಳ – 2019 ರಲ್ಲಿ ಪ್ರತಿ ಯೂನಿಟ್ ಗೆ 35 ಪೈಸೆ ಹೆಚ್ಚಳ – 2020 ರಲ್ಲಿ ಪ್ರತಿ ಯೂನಿಟ್ ಗೆ 30 ಪೈಸೆ ಹೆಚ್ಚಳ

ಯಾವ ವರ್ಷದಲ್ಲಿ ಎಷ್ಟು ದರ ಪರಿಷ್ಕರಣೆಯಾಗಿತ್ತು? ಇಲ್ಲಿದೆ ಪಟ್ಟಿ: ವಿಡಿಯೋ ನೋಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada