ಗೌರಿಬಿದನೂರು ರಸ್ತೆಯಲ್ಲಿ ಮದ್ಯದ ಹೊಳೆ: ಇಷ್ಟವಾದ ಎಣ್ಣೆ ಬ್ರ್ಯಾಂಡ್​ ಕದಿಯಲು ಮದ್ಯಪ್ರಿಯರ ನೂಕುನುಗ್ಗಲು!

Liquor ಬಾರ್‌ಗಳಿಗೆ ಮದ್ಯ ಸಾಗಿಸುತ್ತಿದ್ದ ಟೆಂಪೋ ಪಲ್ಟಿಯಾದ ಪರಿಣಾಮ 10 ಲಕ್ಷ ರೂಪಾಯಿ ಮೌಲ್ಯದ ಮದ್ಯ ರಸ್ತೆ ಪಾಲಾದ ಘಟನೆ ಚಿಕ್ಕಬಳ್ಳಾಪುರ-ಗೌರಿಬಿದನೂರು ರಸ್ತೆಯ ಕಣಿವೆಯಲ್ಲಿ ನಡೆದಿದೆ. ಟೆಂಪೋನಲ್ಲಿ ಚಿಕ್ಕಬಳ್ಳಾಪುರದಿಂದ ಮಂಚೇನಹಳ್ಳಿಗೆ ಮದ್ಯ ಸಾಗಿಸಲಾಗುತ್ತಿತ್ತು.

ಗೌರಿಬಿದನೂರು ರಸ್ತೆಯಲ್ಲಿ ಮದ್ಯದ ಹೊಳೆ: ಇಷ್ಟವಾದ ಎಣ್ಣೆ ಬ್ರ್ಯಾಂಡ್​ ಕದಿಯಲು ಮದ್ಯಪ್ರಿಯರ ನೂಕುನುಗ್ಗಲು!
ಇಷ್ಟವಾದ ಎಣ್ಣೆ ಬ್ರ್ಯಾಂಡ್​ ಕದಿಯಲು ಮದ್ಯಪ್ರಿಯರ ನೂಕುನುಗ್ಗಲು!
Follow us
KUSHAL V
|

Updated on:Feb 15, 2021 | 11:45 PM

ಚಿಕ್ಕಬಳ್ಳಾಪುರ: ಬಾರ್‌ಗಳಿಗೆ ಮದ್ಯ ಸಾಗಿಸುತ್ತಿದ್ದ ಟೆಂಪೋ ಪಲ್ಟಿಯಾದ ಪರಿಣಾಮ 10 ಲಕ್ಷ ರೂಪಾಯಿ ಮೌಲ್ಯದ ಮದ್ಯ ರಸ್ತೆ ಪಾಲಾದ ಘಟನೆ ಚಿಕ್ಕಬಳ್ಳಾಪುರ-ಗೌರಿಬಿದನೂರು ರಸ್ತೆಯ ಕಣಿವೆಯಲ್ಲಿ ನಡೆದಿದೆ. ಟೆಂಪೋನಲ್ಲಿ ಚಿಕ್ಕಬಳ್ಳಾಪುರದಿಂದ ಮಂಚೇನಹಳ್ಳಿಗೆ ಮದ್ಯ ಸಾಗಿಸಲಾಗುತ್ತಿತ್ತು. ಈ ವೇಳೆ, ವಾಹನ ಪಲ್ಟಿಯಾಗಿ ಮದ್ಯದ ಬಾಟಲಿಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದವು.

ಈ ನಡುವೆ, ಹಲವು ಬಾಟಲಿಗಳು ಒಡೆದು ರಸ್ತೆಯಲ್ಲಿ ಮದ್ಯದ ಹೊಳೆಯೇ ಹರಿಯಿತು. ಇನ್ನು, ಸುದ್ದಿ ತಿಳಿಯುತ್ತಿದ್ದಂತೆ ಅಧಿಕಾರಿಗಳಿಗೂ ಮುಂಚೆ ಸ್ಪಾಟ್​ಗೆ ಬಂದ ಮದ್ಯಪ್ರಿಯರು ಅವಘಡದಲ್ಲಿ ಒಡೆಯದೇ ಬಿದ್ದಿದ್ದ ಮದ್ಯದ ಬಾಟಲಿಗಳನ್ನು ಚೀಲದಲ್ಲಿ ತುಂಬಿಸಿಕೊಂಡರು. ಈ ಮಧ್ಯೆ, ಸ್ಥಳಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲನೆ ನಡೆಸಿದರು.

ಇದನ್ನೂ ಓದಿ:Mishaps ಕರ್ನಾಟಕಕ್ಕೆ ಇಂದು ಕರಾಳ ಸೋಮವಾರ: ರಾಜ್ಯದ 4 ಜಿಲ್ಲೆಗಳಲ್ಲಿ ಅವಘಡ, ಅಪಘಾತ, ದುರಂತ..

Published On - 11:09 pm, Mon, 15 February 21