ಮೂಲ-ವಲಸಿಗ ಗ್ಯಾಪ್: BJP ಸಚಿವರು-ಶಾಸಕರ ಮಧ್ಯೆ ಏರ್ಪಟ್ಟಿದೆ ಆಳ ಕಂದಕ!
ಬೆಂಗಳೂರು: ಇಂದು ವಿಧಾನಸೌದದ ಕ್ಯಾಂಟೀನ್ನಲ್ಲಿ ನಾರಾಯಣಗೌಡ ಮತ್ತು ಬೆಳ್ಳಿ ಪ್ರಕಾಶ್ ನಡುವೆ ಗಲಾಟೆ ನಡೆಯಿತು. ಈ ವಿಚಾರವನ್ನು ಗಮನಿಸಿದ್ರೆ ಸಚಿವರು ಮತ್ತು ಆಡಳಿತ ಪಕ್ಷದ ಶಾಸಕರ ಮಧ್ಯೆ ಕಂದಕ ಏರ್ಪಟ್ಟಿರುವಂತೆ ತೋರುತ್ತದೆ. ಸಚಿವರು ಹಾಗೂ ಶಾಸಕರ ಮಧ್ಯೆ ಆಳ ಕಂದಕ ಏರ್ಪಟ್ಟಿದೆ. ಸಚಿವರು ಕೈಗೆ ಸಿಗುತ್ತಿಲ್ಲವೆಂದು ಬಿಜೆಪಿ ಶಾಸಕರ ಆರೋಪ ಮಾಡಿದ್ದಾರೆ. ಶಾಸಕರ ಈ ಆರೋಪಕ್ಕೆ ಇಂದಿನ ಗಲಾಟೆ ನೇರ ಸಾಕ್ಷಿಯಂತಿದೆ. ಸಚಿವರ ಕಾರ್ಯವೈಖರಿ ಬಗ್ಗೆ ಬಿಜೆಪಿಯ ಶಾಸಕರು ತೀವ್ರ ಅಸಮಾಧಾನ ಹೊಂದಿದ್ದಾರೆ. ಶಾಸಕಾಂಗ ಪಕ್ಷದ ಸಭೆ […]
ಬೆಂಗಳೂರು: ಇಂದು ವಿಧಾನಸೌದದ ಕ್ಯಾಂಟೀನ್ನಲ್ಲಿ ನಾರಾಯಣಗೌಡ ಮತ್ತು ಬೆಳ್ಳಿ ಪ್ರಕಾಶ್ ನಡುವೆ ಗಲಾಟೆ ನಡೆಯಿತು. ಈ ವಿಚಾರವನ್ನು ಗಮನಿಸಿದ್ರೆ ಸಚಿವರು ಮತ್ತು ಆಡಳಿತ ಪಕ್ಷದ ಶಾಸಕರ ಮಧ್ಯೆ ಕಂದಕ ಏರ್ಪಟ್ಟಿರುವಂತೆ ತೋರುತ್ತದೆ.
ಸಚಿವರು ಹಾಗೂ ಶಾಸಕರ ಮಧ್ಯೆ ಆಳ ಕಂದಕ ಏರ್ಪಟ್ಟಿದೆ. ಸಚಿವರು ಕೈಗೆ ಸಿಗುತ್ತಿಲ್ಲವೆಂದು ಬಿಜೆಪಿ ಶಾಸಕರ ಆರೋಪ ಮಾಡಿದ್ದಾರೆ. ಶಾಸಕರ ಈ ಆರೋಪಕ್ಕೆ ಇಂದಿನ ಗಲಾಟೆ ನೇರ ಸಾಕ್ಷಿಯಂತಿದೆ. ಸಚಿವರ ಕಾರ್ಯವೈಖರಿ ಬಗ್ಗೆ ಬಿಜೆಪಿಯ ಶಾಸಕರು ತೀವ್ರ ಅಸಮಾಧಾನ ಹೊಂದಿದ್ದಾರೆ. ಶಾಸಕಾಂಗ ಪಕ್ಷದ ಸಭೆ ಕರೆಯಲು ಸಾಧ್ಯವಾಗದಷ್ಟೂ ಅತೃಪ್ತಿ ಇದೆ. ಆಡಳಿತ ಪಕ್ಷದಲ್ಲಿ ಮಡುಗಟ್ಟಿದ್ಯಾ ಅಸಮಾಧಾನ? ಎಂಬಂತಾಗಿದೆ. ಹೀಗಾಗಿ ಮುಂಗಾರು ಅಧಿವೇಶನಕ್ಕೂ ಮುಂಚೆ ನಡೆಯ ಬೇಕಿದ್ದ ಆಡಳಿತ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಯಲೇ ಇಲ್ಲ.
ಅಧಿವೇಶನದಲ್ಲಿ ಕೊವಿಡ್, ಮಳೆ ಹಾನಿ, ಡ್ರಗ್ಸ್ ಮಾಫಿಯಾ ಡಿ.ಜೆ.ಹಳ್ಳಿ ಗಲಾಟೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳು ಸಮರಕ್ಕೆ ಸಜ್ಜಾಗಿವೆ. ಆದರೆ ಸದನದಲ್ಲಿ ಸರ್ಕಾರದ ನಿಲುವಿನ ಬಗ್ಗೆ ಚರ್ಚಿಸಲು ಸದನಕ್ಕೂ ಮುಂಚೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸ ಬೇಕಿತ್ತು. ಆ ಸಭೆಯನ್ನೂ ನಡೆಸಿಲ್ಲ. ಮತ್ತೊಂದೆಡೆ ಬಿಜೆಪಿಯಲ್ಲಿ ಮೂಲ, ವಲಸಿಗ ಎಂಬ ಗ್ಯಾಪ್ ಸೃಷ್ಟಿಯಾಗಲು ಇಂದಿನ ಗಲಾಟೆ ವೇದಿಕೆಯಾದಂತಿದೆ.