ರಾಯಚೂರು: ಹೃದಯ ಸಂಬಂಧಿ ಸಮಸ್ಯೆಯಿಂದ 14 ವರ್ಷದ ಬಾಲಕ ಸಾವು

| Updated By: ವಿವೇಕ ಬಿರಾದಾರ

Updated on: Sep 11, 2024 | 1:32 PM

ಬೆಳಿಗ್ಗೆ ಶಾಲೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ಮಗ ಮರಳಿ ಮನೆಗೆ ಬರಲಿಲ್ಲ. ಶಾಲೆಗೆ ಹೋದ ಬಾಲಕ ಮಸಣ ಸೇರಿದ್ದಾನೆ. ಹೌದು, ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಅತ್ತನೂರು ಗ್ರಾಮದ 14 ವರ್ಷದ ತರುಣ್ ಶಾಲೆಯಲ್ಲಿ ಲೋ ಕುಸಿದು ಬಿದ್ದಿದ್ದಾನೆ. ಮುಂದೇನಾಯ್ತು ಈ ಸ್ಟೋರಿ ಓದಿ

ರಾಯಚೂರು: ಹೃದಯ ಸಂಬಂಧಿ ಸಮಸ್ಯೆಯಿಂದ 14 ವರ್ಷದ ಬಾಲಕ ಸಾವು
ಮೃತ ತರುಣ್​
Follow us on

ರಾಯಚೂರು, ಸೆಪ್ಟೆಂಬರ್​ 11: ಸಿರವಾರ (Sirwar) ತಾಲೂಕಿನ ಅತ್ತನೂರು ಗ್ರಾಮದ 14 ವರ್ಷದ ತರುಣ್ ಹೃದಯ ಸಂಬಂಧಿ ಸಮಸ್ಯೆಯಿಂದ ಮೃತಪಟ್ಟಿದ್ದಾನೆ. ತರುಣ್​ ಸಿರವಾರ ಪಟ್ಟಣದ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದನು. ಎಂದಿನಂತೆ ತರುಣ ಬುಧವಾರ ಶಾಲೆಗೆ ಹೋಗಿದ್ದಾನೆ.

ತರಗತಿಯಲ್ಲಿ ಪಾಠ ಕೇಳುವಾಗ, ತಲೆ ಸುತ್ತು ಎನ್ನುತ್ತಾ ತರುಣ ಕುಸಿದು ಬಿದ್ದಿದ್ದಾನೆ. ಕೂಡಲೇ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ವಿದ್ಯಾರ್ಥಿ ತರುಣ್​ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಚಾರ ತಿಳಿದು ತರುಣ್​ ಪೋಷಕರು ಆಸ್ಪತ್ರೆಗ ದೌಡಾಯಿಸಿದ್ದಾರೆ. ವೈದ್ಯರು ತರುಣ್​ಗೆ ಲೋ ಬಿಪಿ ಆಗಿದೆ ಅಂತ ಹೇಳಿದ್ದಾರೆ.

ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಗಲಾಟೆ: ಜಗಳ ಬಿಡಿಸಲು ಹೋಗಿದ್ದ ವೃದ್ಧ ದುರಂತ ಸಾವು

ಬಳಿಕ, ವೈದ್ಯರು ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಪೋಷಕರು ತರುಣ್​ನನ್ನು ರಾಯಚೂರಿಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಮಾರ್ಗ ಮಧ್ಯೆ ತರುಣ್​ ಮೃತಪಟ್ಟಿದ್ದಾನೆ. ರಾಯಚೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಹೃದಯ ಸಂಬಂಧಿ ಸಮಸ್ಯೆಯಿಂದ ಸಾವಾಗಿದೆ ಎಂದು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿ ನೀರುಪಾಲು

ಕಾರವಾರ: ಗೋಕರ್ಣ ಪ್ರವಾಸಕ್ಕೆ ತೆರಳಿದ್ದ ಬೆಂಗಳೂರು ಮೂಲದ ವಿದ್ಯಾರ್ಥಿ ನೀರುಪಾಲಾಗಿದ್ದಾನೆ. ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಕರ್ಣದ ಬಾವಿ ಕೊಡ್ಲ ಕಡಲ ತೀರದಲ್ಲಿ ಘಟನೆ ನಡೆದಿದೆ. ಬೆಂಗಳೂರಿನ ಹಿಲ್ ಸೈಡ್ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಕುಮಟಾ ತಾಲೂಕಿನ ಗೋಕರ್ಣಕ್ಕೆ ತೆರಳಿದ್ದರು.

ಬುಧವಾರ ಬೆಳಗ್ಗೆ ಸಮುದ್ರಕ್ಕಿಳಿದು ಆಟ ಆಡುವಾಗ, ನಾಲ್ವರು ಅಲೆಗೆ ಕೊಚ್ಚಿ ಹೋಗಿದ್ದಾರೆ. ಕೂಡಲೆ ಸಮುದ್ರಕ್ಕೆ ಇಳಿದ ಗೋಕರ್ಣ ಪೊಲೀಸರು ಮತ್ತು ಕೊಸ್ಟಲ್ ಗಾರ್ಡ್​ ಮೂವರನ್ನು ರಕ್ಷಣೆ ಮಾಡಿದ್ದಾರೆ. ಓರ್ವ ನೀರುಪಾಲಾಗಿದ್ದಾನೆ. ಮೂವರ ಸ್ಥಿತಿ ಚಿಂತಾಜನಕವಾಗಿದ್ದು ಕುಮಟಾ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ನೀರುಪಾಲಾದ ವಿದ್ಯಾರ್ಥಿಗಾಗಿ ಶೋಧ ಕಾರ್ಯ ನಡೆದಿದೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:20 pm, Wed, 11 September 24