ಪ್ರವೇಶ ಪತ್ರ ಸಿಗದೆ ಬಿಪಿಎಡ್ ಪರೀಕ್ಷೆಯಿಂದ ವಂಚಿತರಾದ 26 ವಿದ್ಯಾರ್ಥಿಗಳು; ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ

TV9 Digital Desk

| Edited By: preethi shettigar

Updated on: Sep 12, 2021 | 10:28 AM

ಸ್ವಾಮಿ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ನಡೆದ ಬಿಪಿಎಡ್ ಪರೀಕ್ಷೆಗೆ ಹಾಜರಾಗದೆ ವಂಚಿತರಾದ ವಿದ್ಯಾರ್ಥಿಗಳು ಇಂದು ಕಾಲೇಜು ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಪ್ರವೇಶ ಪತ್ರ ಸಿಗದೆ ಬಿಪಿಎಡ್ ಪರೀಕ್ಷೆಯಿಂದ ವಂಚಿತರಾದ 26 ವಿದ್ಯಾರ್ಥಿಗಳು; ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ
ಪ್ರವೇಶ ಪತ್ರ ಸಿಗದೆ ಬಿಪಿಎಡ್ ಪರೀಕ್ಷೆಯಿಂದ ವಂಚಿತರಾದ 26 ವಿದ್ಯಾರ್ಥಿಗಳು

Follow us on

ರಾಯಚೂರು: ಪ್ರವೇಶಪತ್ರ ಸಿಗದೇ 26 ವಿದ್ಯಾರ್ಥಿಗಳು ಬಿಪಿಎಡ್ ಪರೀಕ್ಷೆಯಿಂದ ವಂಚಿತರಾದ ಘಟನೆ ರಾಯಚೂರಿನ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ನಡೆದಿದೆ. ಗುಲ್ಬರ್ಗ ವಿಶ್ವ ವಿದ್ಯಾಲಯ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ನೀಡದೆ ವಂಚಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಕಾಲೇಜು ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಾಮಿ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ನಡೆದ ಬಿಪಿಎಡ್ ಪರೀಕ್ಷೆಗೆ ಹಾಜರಾಗದೆ ವಂಚಿತರಾದ ವಿದ್ಯಾರ್ಥಿಗಳು ಇಂದು ಕಾಲೇಜು ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಒಂದೇ ಕಂತಿನಲ್ಲಿ ಪೂರ್ಣ ಶುಲ್ಕ ಪಾವತಿಸುವಂತೆ ಬೆಂಗಳೂರು ಬಿಎನ್ಎಂ ಶಾಲೆ ಒತ್ತಡ ಕೊರೊನಾದಿಂದ ಬಹುತೇಕ ಜನರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಲಾಕ್​ಡೌನ್​ ಜಾರಿಯಿದ್ದ ಕಾರಣ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಈ ಮಧ್ಯೆ ಖಾಸಗಿ ಶಾಲೆಗಳು ಅಮಾನವೀಯವಾಗಿ ವರ್ತಿಸುತ್ತಿವೆ. ಈಗಾಗಲೇ ಸರ್ಕಾರ ಮತ್ತು ಖಾಸಗಿ ಶಾಲೆಗಳ ನಡುವಿನ ಫೀಸ್ ಸಮರ ಕೋರ್ಟ್ ಅಂಗಳಕ್ಕೆ ತಲುಪಿದ್ದು, ಇಂದು ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದೆ. ಈ ನಡುವೆ ಒಂದೇ ಕಂತಿನಲ್ಲಿ ಪೂರ್ಣ ಶುಲ್ಕವನ್ನು ಪಾವತಿಸುವಂತೆ ಬೆಂಗಳೂರಿನ ಬನಶಂಕರಿಯ ಬಿಎನ್ಎಂ ಶಾಲೆ ಕಿರುಕುಳ ನೀಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಒಂದೇ ಕಂತಿನಲ್ಲಿ ಪೂರ್ಣ ಶುಲ್ಕವನ್ನು ಕಟ್ಟಬೇಕು. ಶುಲ್ಕ ಪಾವತಿಸದಿದ್ದರೆ ಆನ್​ಲೈನ್​ ಕ್ಲಾಸ್ ಬಂದ್ ಮಾಡುತ್ತೇವೆ ಎಂದು ಬಿಎನ್ಎಂ ಶಾಲೆ ಎಚ್ಚರಿಕೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ ವರ್ಷ ಲಕ್ಷ ಲಕ್ಷ ಫೀಸ್ ತಗೊಂಡ್ರು. ಆದರೆ ಆನ್​ಲೈನ್​ ಕ್ಲಾಸ್ ಮಾತ್ರ ಮಾಡಿಲ್ಲ. ಯೂಟ್ಯೂಬ್ ಮೂಲಕ ವೀಡಿಯೋ ಮಾಡಿ ಕಳುಹಿಸಿದ್ದರು. ಮನೆಯಲ್ಲೇ ಪೋಷಕರಿಗೆ ಹೆಚ್ಚು ತೊಂದರೆಯಾಗ್ತಿದೆ. ಟೀಚರ್ಸ್​ಗಿಂತ ಮಕ್ಕಳ ಜೊತೆ ಕೂತು ನಾವೇ ಪಾಠ ಹೇಳಿ ಕೊಡುತ್ತಿದ್ದೇವೆ. ನಾವ್ಯಾಕೆ ಫುಲ್ ಫೀಸ್ ಕಟ್ಟಬೇಕು? ಎರಡೇ ಕಂತಿನಲ್ಲಿ 70 ಸಾವಿರ ಕಟ್ಟಿ ಅಂತ ಹೇಳುತ್ತಿದ್ದಾರೆ. ಇಬ್ಬರು ಮಕ್ಕಳು ಒಂದೇ ಶಾಲೆಯಲ್ಲಿ ಓದುತ್ತಿದ್ದಾರೆ. ಅಷ್ಟೊಂದು ಹಣವನ್ನು ಎಲ್ಲಿಂದ ತರೋದು ಅಂತ ಪೋಷಕರೊಬ್ಬರು ಪ್ರಶ್ನಿಸಿದ್ದಾರೆ.

ನೀವು ಏನಾದ್ರೂ ಮಾಡಿ ಫೀಸ್ ತನ್ನಿ ಅಷ್ಟೆ ಅಂತ ಟಾರ್ಚರ್ ಮಾಡುತ್ತಿದ್ದಾರೆ. ಕೆಲಸ ಕಳೆದುಕೊಂಡು ಕಷ್ಟದಲ್ಲಿರುವಾಗ ಶುಲ್ಕ ಎಲ್ಲಿಂದ ಕಟ್ಟೋದು? ಶೇ.50ರಷ್ಟು ಸಂಬಳ ತೆಗೆದುಕೊಳ್ಳುತ್ತಿದ್ದೇವೆ. ಶೇ.100ರಷ್ಟು ಫೀಸ್ ಕಟ್ಟುವುದು ಹೇಗೆ? ಎಂದು ಖಾಸಗಿ ಶಾಲೆಗಳ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ:

ಸ್ಕೈವಾಕ್ ನಿರ್ಮಾಣಕ್ಕೆ ಆಗ್ರಹಿಸಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಂದ ಧರಣಿ: ಸ್ಥಳಕ್ಕೆ ಪೊಲೀಸರು, ತಹಶೀಲ್ದಾರ್ ಭೇಟಿ

ಶುಲ್ಕದ ಲೆಕ್ಕದಲ್ಲಿ ಶಾಲೆ ಕಳ್ಳಾಟ; ಫುಲ್ ಫೀಸ್ ಕಟ್ಟಿದ ಸಿಬಿಎಸ್​ಇ 10ನೇ ತರಗತಿ ವಿದ್ಯಾರ್ಥಿಗಳಿಗೆ ಫುಲ್ ಮಾರ್ಕ್ಸ್

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada