AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಂಗಲ್ಯ ಧಾರಣೆಗೂ ಮುನ್ನ ವರನ ತಂದೆ ಸಾವು: ಮಗನ ಮದ್ವೆ ಕಣ್ತುಂಬಿಕೊಳ್ಳುವ ಮುನ್ನವೇ ದುರಂತ ಅಂತ್ಯ

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎನ್ನುವ ಗಾದೆಯಂತೆ ವ್ಯಕ್ತಿಯೋರ್ವ, ಮಗನ ಮದುವೆಗಾಗಿ ಓಡಾಡಿ ಎಲ್ಲಾ ಸಿದ್ಧತೆ ಮಾಡಿದ್ದ. ಕಳೆದ ಹಲವು ದಿನಗಳಿಂದ ಲವಲವಿಕೆಯಿಂದಲೇ ಓಡಾಡಿಕೊಂಡಿಕೊಂಡು ಮಗನ ಮದ್ವೆಯ ಕಾರ್ಯಗಳನ್ನ ಮಾಡಿ ಮುಗಿಸಿದ್ದ. ಇನ್ನೇನು ಮಗ ವಧುವಿಗೆ ತಾಳಿ ಕಟ್ಟಬೇಕು ಎನ್ನುವಾಗಲೇ ತಂದೆ ದುರಂತ ಸಾವು ಕಂಡಿದ್ದಾನೆ. ಇದರಿಂದ ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಮಾಂಗಲ್ಯ ಧಾರಣೆಗೂ ಮುನ್ನ ವರನ ತಂದೆ ಸಾವು: ಮಗನ ಮದ್ವೆ ಕಣ್ತುಂಬಿಕೊಳ್ಳುವ ಮುನ್ನವೇ ದುರಂತ ಅಂತ್ಯ
Sharanayya Swami
ಭೀಮೇಶ್​​ ಪೂಜಾರ್
| Updated By: ರಮೇಶ್ ಬಿ. ಜವಳಗೇರಾ|

Updated on:Nov 30, 2025 | 8:15 PM

Share

ರಾಯುಚೂರು, (ನವೆಂಬರ್ 30): ಮಾಂಗಲ್ಯ ಧಾರಣೆಗೆ (wedding) ಕೆಲವೇ ಗಂಟೆಗಳಿರುವಾಗ ವರನ ತಂದೆ ಹೃದಯಾಘಾತದಿಂದ (heart attack ) ನಿಧನರಾಗಿರುವ ಘಟನೆ ರಾಯಚೂರಿನ (Raichur) ಸಿಂಧನೂರಿನಲ್ಲಿ ನಡೆದಿದೆ.  ಸಿಂಧನೂರಿನ (Sindhanur) ಗಂಗಾನಗರದ 55 ವರ್ಷದ ಶರಣಯ್ಯಸ್ವಾಮಿ, ಲವಲವಿಕೆಯಿಂದ ಓಡಾಡಿ ಎಲ್ಲಾ ಓಡಾಡಿ ಮದ್ವೆ ಕಾರ್ಯಗಳನ್ನ ಮಾಡಿ ಮುಗಿಸಿದ್ದರು. ಇನ್ನೇನು ವರ (ಪುತ್ರ) ತಾಳಿ ಕಟ್ಟುವ ಎರಡು ಗಂಟೆಗಳ ಹಿಂದೆಯೇ ಶರಣಯ್ಯಸ್ವಾಮಿ ಮೃತಪಟ್ಟಿದ್ದಾರೆ.  ಇದರೊಂದಿಗೆ ಮಗನ ಮದುವೆಯನ್ನು ಕಣ್ತುಂಬಿಕೊಳ್ಳುವ ಆಸೆ ಈಡೇರದೆಯೇ ಶರಣಯ್ಯಸ್ವಾಮಿ ಇಹಲೋಕ ತ್ಯಜಿಸಿದ್ದು, ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಮಾಂಗಲ್ಯ ಧಾರಣೆಗೆ ಎರಡು ಗಂಟೆ ಬಾಕಿ ಇರುವಾಗಲೇ ದುರಂತ

ಮೃತ ಶರಣಯ್ಯಸ್ವಾಮಿ ಪುತ್ರನ ಮದುವೆಯನ್ನು ಸಿಂಧನೂರು ನಗರದ ಜೈನ್ ಕಲ್ಯಾಣ ಮಂಟಪದಲ್ಲಿ ಮದುವೆ ನಿಯೋಜಿಸಿದ್ದರು. ಅದರಂತೆ ಶರಣಯ್ಯಸ್ವಾಮಿ ಲವಲವಿಕೆಯಿಂದ ಓಡಾಡಿ ಮದುವೆ ಕಾರ್ಯಕಗಳನ್ನು ಮಾಡಿ ಮುಗಿಸಿದ್ದ. ಇಂದು (ನವೆಂಬರ್ 30) ಬೆಳಗ್ಗೆ 5 ಗಂಟೆಗೆ ಮಾಂಗಲ್ಯ ಧಾರಣೆ ಮುಹೂರ್ತ ಫಿಕ್ಸ್ ಆಗಿತ್ತು. ಆದ್ರೆ, ದುರ್ವೈವ ಮಾಂಗಲ್ಯ ಧಾರಣೆಗೆ ಎರಡು ಗಂಟೆ ಬಾಕಿ ಇರುವಾಗಲೇ ಶರಣಯ್ಯಸ್ವಾಮಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: 60 ಲಕ್ಷ ಕೊಟ್ಟು ಮದ್ವೆ ಮಾಡಿದ್ರೂ ತಪ್ಪದ ಕಿರುಕುಳ: ಚೆಲುವೆ ಕನಸಿಗೆ ಕೊಳ್ಳಿಯಿಟ್ಟ ಪತಿ

ಒಂದೆಡೆ ಮದುವೆಯ ಸಂಭ್ರಮದ ಸಡಗರ, ಮತ್ತೊಂದೆಡೆ ಮನೆಯ ಯಜಮಾನನ ಅಕಾಲಿಕ ಸಾವು ಈ ಪರಿಸ್ಥಿತಿಯನ್ನು ಎದುರಿಸಲಾಗದೆ ಕುಟುಂಬ ಸದಸ್ಯರು ಆಘಾತಕ್ಕೆ ಒಳಗಾಗಿದೆ.  ಬಳಿಕ ಜೈನ್ ಕಲ್ಯಾಣ ಮಂಟಪದಲ್ಲಿ ನೆರವೇರಬೇಕಿದ್ದ ಮದುವೆಯನ್ನೇ ರದ್ದುಗೊಳಿಸಿದ್ದು,. ಮದುವೆ ಸಂಭ್ರಮದಲ್ಲಿ ಮದುವೆ ಮನೆಯಲ್ಲಿ ಸೂತಕ ಛಾಯೆ ಆವರಿಸಿದೆ.

ಇನ್ನು ಇಂದು (ನವೆಂಬರ್ 3) ಸಂಜೆ ಸಿಂಧನೂರಿನ ವೀರಶೈವ ರುದ್ರಭೂಮಿಯಲ್ಲಿ ಶರಣಯ್ಯಸ್ವಾಮಿ  ಅಂತ್ಯಕ್ರಿಯೆ ನೆರವೇರಿಸಲಾಗಿದ್ದು.  ಮದುವೆಗೆಂದು ಬಂದಿದ್ದ ಬಂಧು ಬಳಗ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವಂತಾಯ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:10 pm, Sun, 30 November 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ