ರಾಯಚೂರು: ಕಾಂಗ್ರೆಸ್ ಮಾಜಿ ಶಾಸಕ ಅಳಿಯನ ಕಾರು ಡಿಕ್ಕಿ, ಸ್ಥಳದಲ್ಲೇ ಕುರಿಗಾಹಿ ದುರ್ಮರಣ
ಕಾಂಗ್ರೆಸ್ ಮಾಜಿ ಶಾಸಕರೊಬ್ಬರ ಅಳಿಯ ಕಾರು ಕುರಿಗಾಹಿಗೆ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಕುರಿಗಾಹಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸುದ್ದಿ ಜೊತೆ ಮೈಸೂರು ಹಾಗು ಬೆಂಗಳೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತದ ಸುದ್ದಿ ವಿವರ ಇಲ್ಲಿದೆ ನೋಡಿ.
ರಾಯಚೂರು, (ಆಗಸ್ಟ್ 27): ಕುಷ್ಟಗಿ ಕ್ಷೇತ್ರದ ಕಾಂಗ್ರೆಸ್(Congress) ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ಅಳಿಯನ ಕಾರು ಡಿಕ್ಕಿ ಹೊಡೆದ ಪರಿಣಾಮ ಕುರಿಗಾಹಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ರಾಯಚೂರು(Raichur) ಜಿಲ್ಲೆ ಲಿಂಗಸುಗೂರು ತಾಲೂಕಿನ ಪಿಕಳಿಹಾಳ ಬಳಿ ಘಟನೆ ಸಂಭವಿಸಿದೆ. ಬಸವರಾಜ್(20) ಮೃತ ಕುರಿಗಾಹಿ. ಅಮರೇಗೌಡ ಬಯ್ಯಾಪುರ ಅವರ ಅಳಿಯ ಶರಣಬಸವ ವ್ಯಾಕರನಾಳಗೆ ಸೇರಿದ ಎರ್ಟಿಗಾ ಕಾರು ಮುದ್ಗಲ್ನಿಂದ ತಾವರಗೇರಾ ಕಡೆ ವೇಗವಾಗಿ ಹೊರಟ್ಟಿತ್ತು. ಆ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕುರಿಗಾಹಿ ಬಸವರಾಜ್ಗೆ ಡಿಕ್ಕಿ ಹೊಡೆದಿದ್ದು, ಆತ ಸ್ಥಳದ್ಲಲೇ ಅಸುನೀಗಿದ್ದಾನೆ.
ಮೈಸೂರಿನಲ್ಲಿ ಕಾರು ಡಿಕ್ಕಿಯಾಗಿ ಪೌರ ಕಾರ್ಮಿಕನಿಗೆ ಗಂಭೀರ ಗಾಯ
ಮೈಸೂರು: ಮೈಸೂರಿನಲ್ಲಿ ಕಾರು ಡಿಕ್ಕಿಯಾಗಿ ಪೌರ ಕಾರ್ಮಿಕನಿಗೆ ಗಂಭೀರ ಗಾಯವಾಗಿರುವ ಘಟನೆ ಮೈಸೂರು ನಗರದ ದೇವರಾಜ ಅರಸು ರಸ್ತೆಯಲ್ಲಿ ನಡೆದದೆ. ಗಾಯಾಳು ಪೌರ ಕಾರ್ಮಿಕ ಮಹದೇವ ಅವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅತಿ ವೇಗ ಮತ್ತು ಚಾಲಕ ಮೊಬೈಲ್ ಬಳಕೆ ಅಪಘಾತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಘಟನೆ ನಡೆದ ಬಳಿಕ ದೇವರಾಜ ಸಂಚಾರ ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಬೈಕ್ಗೆ ಡಿಕ್ಕಿ ಹೊಡೆದ ಕಾರು
ಬೆಂಗಳೂರು: ಬೈಕ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿ ದಂಪತಿಗೆ ಗಾಯಗಳಾಗಿವೆ. ನಿನ್ನೆ(ಆಗಸ್ಟ್ 26) ಸಂಜೆ ನಾಲ್ಕು ಗಂಟೆ ಸುಮಾರಿಗೆ ಚಿಕ್ಕಜಾಲದಿಂದ ಏರ್ಪೋರ್ಟ್ ರಸ್ತೆ ಸಂಪರ್ಕಿಸುವ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಅಪಘಾತದ ದೃಶ್ಯ ಮತ್ತೊಂದು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೈಕ್ನಲ್ಲಿ ದಂಪತಿ ತನ್ನಿಬ್ಬರ ಇಬ್ಬರು ಮಕ್ಕಳುನ್ನು ಕೂರಿಡಿಕೊಂಡು ಹೊರಟ್ಟಿತ್ತು. ಆದ್ರೆ, ಸವಾರ ಬೈಕ್ ಅನ್ನು ರಸ್ತೆ ಮಧ್ಯದ ಟ್ರ್ಯಾಕ್ ನಿಂದ ಬಲಗಡೆಗೆ ತೆಗೆದುಕೊಂಡಿದ್ದಾನೆ. ಈ ವೇಳೆ ವೇಗವಾಗಿ ತೆರಳುತ್ತಿದ್ದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಬೈಕ್ನಲ್ಲಿದ್ದ ದಂಪತಿ ಹಾಗೂ ಇಬ್ಬರು ಮಕ್ಕಳು ರಸ್ತೆಗೆ ಬಿದ್ದಿದ್ದಾರೆ. ಕೂಡಲೇ ಇತರೆ ಸವಾರರು ರಸ್ತೆ ಮೇಲೆ ಬಿದ್ದ ಮಕ್ಕಳನ್ನ ರಕ್ಷಿಸಿದ್ದಾರೆ. ಅದೃಷ್ಟವಶಾತ್ ಮಕ್ಕಳು ಹಾಗೂ ಪೋಷಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ