ಜಿಲ್ಲಾಡಳಿತ ಮೂಲಸೌಕರ್ಯ ನೀಡದ ಆರೋಪ; ಚರಂಡಿಯಲ್ಲಿದ್ದ ಕಸ ಸುರಿದುಕೊಂಡು ಪ್ರತಿಭಟನೆಗೆ ಯತ್ನಿಸಿದ ಸಫಾಯಿ ಕರ್ಮಚಾರಿ
ಜಿಲ್ಲಾಡಳಿತ ಮೂಲಸೌಕರ್ಯ ನೀಡದ ಆರೋಪ ಮಾಡಿದ್ದು, ಇಂದು (ಮಾರ್ಚ್ 24) ಏಕಾಂಗಿಯಾಗಿ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಬೇರೊಬ್ಬರ ಮೂಲಕ ಸಫಾಯಿ ಕರ್ಮಚಾರಿ ಗೀತಾಸಿಂಗ್ ಚರಂಡಿ ವೇಸ್ಟೇಜ್ ತರಿಸಿಕೊಂಡಿದ್ದು, ಮೈ ಮೇಲೆ ಸುರಿದುಕೊಳ್ಳಲು ಯತ್ನಿಸಿದ್ದಾರೆ.
ರಾಯಚೂರು: ವಿವಿಧ ಬೇಡಿಕೆ ಈಡೇರಿಸಲು ಜಿಲ್ಲಾಡಳಿತ (District Administration) ವೈಫಲ್ಯವಾದ ಹಿನ್ನೆಲೆಯಲ್ಲಿ ಡಿಸಿ ಕಚೇರಿ ಬಳಿ ಪ್ರತಿಭಟನೆ(Protest) ವೇಳೆ ಸಫಾಯಿ ಕರ್ಮಚಾರಿ ಗೀತಾಸಿಂಗ್ ಚರಂಡಿಯಲ್ಲಿದ್ದ ಕಸ (Garbage) ಸುರಿದುಕೊಂಡು ಪ್ರತಿಭಟನೆಗೆ ಯತ್ನಿಸಿದ್ದಾರೆ. ಜಿಲ್ಲಾಡಳಿತ ಮೂಲಸೌಕರ್ಯ ನೀಡದ ಆರೋಪ ಮಾಡಿದ್ದು, ಇಂದು (ಮಾರ್ಚ್ 24) ಏಕಾಂಗಿಯಾಗಿ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಬೇರೊಬ್ಬರ ಮೂಲಕ ಸಫಾಯಿ ಕರ್ಮಚಾರಿ ಗೀತಾಸಿಂಗ್ ಚರಂಡಿ ವೇಸ್ಟೇಜ್ ತರಿಸಿಕೊಂಡಿದ್ದು, ಮೈ ಮೇಲೆ ಸುರಿದುಕೊಳ್ಳಲು ಯತ್ನಿಸಿದ್ದಾರೆ.
ಕಸವನ್ನು ಮೈಮೇಲೆ ಸುರಿದುಕೊಳ್ಳುವ ವೇಳೆ ಸಫಾಯ ಕರ್ಮಚಾರಿ ಗೀತಾಸಿಂಗ್ ಅವರನ್ನು ಪೊಲೀಸರು ತಡೆದಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಸದ್ಯ ಸದರ್ ಬಜಾರ್ ಠಾಣೆ ಪೊಲೀಸರು ಸಂಗ್ರಹಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಶಿಕ್ಷಕಿ ಬೈದಿದ್ದಕ್ಕೆ ನೊಂದು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು, ಶಾಲೆ ಮುಂದೆ ಪೋಷಕರ ಪ್ರತಿಭಟನೆ
ಶಿಕ್ಷಕಿ ಬೈದಿದ್ದಕ್ಕೆ ನೊಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರಿನ R.R.ನಗರದಲ್ಲಿರುವ ಸ್ವರ್ಗ ರಾಣಿ ಸ್ಕೂಲ್ನಲ್ಲಿ ಎಂಟನೇ ತರಗತಿ ಮುಖ್ಯ ಪರೀಕ್ಷೆ ನಡೆಯುತ್ತಿದ್ದ ವೇಳೆ 8ನೇ ತರಗತಿಯ ವಿದ್ಯಾರ್ಥಿ ಧೀರಜ್ ಕಾಪಿ ಹೊಡೆಯುತ್ತಿದ್ದ ಅಂತ ಟೀಚರ್ ಪ್ರಿನ್ಸಿಪಾಲ್ ರೂಮ್ಗೆ ಕರೆದುಕೊಂಡು ಹೋಗಿ ಧೀರಜ್ ಪೋಷಕರನ್ನು ಶಾಲೆಗೆ ಕರೆಸಿ ಈ ಬಗ್ಗೆ ತಿಳಿಸಿದ್ದಾರೆ. ಹೀಗಾಗಿ ಮನ ನೊಂದ ವಿದ್ಯಾರ್ಥಿ ಮನೆಯಲ್ಲಿ ನಿನ್ನೆ ಸಂಜೆ ನೇಣಿಗೆ ಶರಣಾಗಿದ್ದಾನೆ. ಸ್ವರ್ಗ ರಾಣಿ ಶಾಲೆಯ ಮುಂದೆ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.
ನಿನ್ನೆ ಸಂಜೆ ಧೀರಜ್ ಪೋಷಕರು ಸ್ಕೂಲ್ಗೆ ಬಂದು ಮಗ ಮಾಡಿದ್ದ ತಪ್ಪಿಗೆ ಅಪೋಲಜಿ ಲೆಟರ್ ಬರೆದುಕೊಟ್ಟ ಹೋಗಿದ್ದರು. ಇದಾದ ಬಳಿಕ ಧೀರಜ್ನನ್ನು ಮನೆಗೆ ಕಳಿಸದೆ ಅವನ ಸ್ನೇಹಿತರ ಮುಂದೆ ಅವಮಾನ ಮಾಡಿದ್ದರಂತೆ. ಇದರಿಂದ ನೊಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸದ್ಯ ಇತರೆ ವಿದ್ಯಾರ್ಥಿಗಳ ಪೋಷಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದು ಶಾಲಾ ಆಡಳಿತ ಮಂಡಳಿ ಬಂದು ನಿನ್ನೆ ಏನಾಯ್ತು? ಯಾಕೆ ಧೀರಜ್ ಆತ್ಮಹತ್ಯೆ ಮಾಡಿಕೊಂಡ ಎಂಬ ಬಗ್ಗೆ ಮಾಹಿತಿ ನೀಡಬೇಕು ಇಲ್ಲಾಂದ್ರೆ ನಾವು ಇಲ್ಲಿಂದ ಹೋಗಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಧೀರಜ್ ಪೋಷಕರು ನಾವು ಇದರಲ್ಲಿ ಭಾಗಿಯಾಗಲ್ಲ ಎಂದು ಆರ್.ಆರ್. ನಗರದ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಧೀರಜ್ ಮೃತದೇಹ ಮನೆಯಲ್ಲಿ ಇಡಲಾಗಿದೆ.
ಇದನ್ನೂ ಓದಿ: ದಾವಣಗೆರೆ: ರಾತ್ರೋರಾತ್ರಿ ಗುಡಿಸಲು ತೆರವುಗೊಳಿಸಿದ ಜಿಲ್ಲಾಡಳಿತ; ಸ್ಥಳೀಯರ ತೀವ್ರ ಆಕ್ರೋಶ
ಕೆಂಪು ಕ್ರಾಂತಿ ಭ್ರಮೆಯಿಂದ ಹೊರಬಂದು ಆಧ್ಯಾತ್ಮಿಕ ವಿಕಸನದತ್ತ.. ನಿವೃತ್ತ IAS ಅಧಿಕಾರಿಯ ರಾಜಕೀಯ ಆದರ್ಶವಾದದ ಕಥಾನಕ
Published On - 2:51 pm, Thu, 24 March 22