AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮಿತ್ ಶಾ ಕಾರ್ಯಕ್ರಮಕ್ಕೆ ಬಿಸಿ ಮುಟ್ಟಿಸಲು ರಾಯಚೂರು ಬಂದ್, 66 ದಿನಗಳಿಂದ ಪ್ರತಿದಿನ ಇಬ್ಬರಂತೆ ಉಪವಾಸ ಸತ್ಯಾಗ್ರಹ

ಏಮ್ಸ್ ಗಾಗಿ 316 ದಿನಗಳು ನಿರಂತರವಾಗಿ ಹೋರಾಟ ನಡೆಸಲು ಏಮ್ಸ್ ಹೋರಾಟ ಸಮಿತಿ ನಿರ್ಧರಿಸಿದ್ದು ಕಳೆದ 66 ದಿನಗಳಿಂದ ಪ್ರತಿದಿನ ಇಬ್ಬರಂತೆ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.

ಅಮಿತ್ ಶಾ ಕಾರ್ಯಕ್ರಮಕ್ಕೆ ಬಿಸಿ ಮುಟ್ಟಿಸಲು ರಾಯಚೂರು ಬಂದ್, 66 ದಿನಗಳಿಂದ ಪ್ರತಿದಿನ ಇಬ್ಬರಂತೆ ಉಪವಾಸ ಸತ್ಯಾಗ್ರಹ
ರಾಯಚೂರು ಬಂದ್
ಆಯೇಷಾ ಬಾನು
|

Updated on: Mar 24, 2023 | 2:53 PM

Share

ರಾಯಚೂರು: ರಾಯಚೂರಿಗೆ ಕೇಂದ್ರ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆ ಅಮಿತ್ ಶಾ ಕಾರ್ಯಕ್ರಮಕ್ಕೆ ಬಿಸಿ ಮುಟ್ಟಿಸಲು ಇಂದು(ಮಾರ್ಚ್ 24) ರಾಯಚೂರು ಬಂದ್ ಮಾಡಲಾಗಿತ್ತು. ಏಮ್ಸ್ ಹೋರಾಟ ಸಮಿತಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿ ಇಂದು ರಾಯಚೂರು ಬಂದ್ ನಡೆಸಿತು. ವಿವಿಧ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿದ್ದವು. ಬಸ್, ಆಟೋ ಸಂಚಾರ ಹೊರತು ಪಡಿಸಿ ವ್ಯಾಪಾರ-ವಹಿವಾಟುಗಳೆಲ್ಲಾ ಬಂದ್ ಆಗಿದ್ದವು.

ಏಮ್ಸ್ ಗಾಗಿ 316 ದಿನಗಳು ನಿರಂತರವಾಗಿ ಹೋರಾಟ ನಡೆಸಲು ಏಮ್ಸ್ ಹೋರಾಟ ಸಮಿತಿ ನಿರ್ಧರಿಸಿದ್ದು ಕಳೆದ 66 ದಿನಗಳಿಂದ ಪ್ರತಿದಿನ ಇಬ್ಬರಂತೆ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಆದರೂ ರಾಯಚೂರಿಗೆ ‌ಮಾತ್ರ ಏಮ್ಸ್ ಆಸ್ಪತ್ರೆ‌ ನೀಡಿಲ್ಲ. ಈ ಹಿನ್ನೆಲೆ ಇಂದು ರಾಯಚೂರು ಬಂದ್ ಗೆ ಕರೆ ನೀಡಲಾಗಿತ್ತು. ಇದೇ ಮಾರ್ಚ್ 26ಕ್ಕೆ ರಾಯಚೂರು ಜಿಲ್ಲೆಗೆ ಅಮಿತ್ ಶಾ ಆಗಮಿಸಲಿದ್ದಾರೆ. ಕೇಂದ್ರ ಸಚಿವರಿಗೆ ಬಿಸಿ‌ ಮುಟ್ಟಿಸಲು ಬಂದ್ ಮಾಡಲಾಗಿದ್ದು ಬಂದ್ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಇದನ್ನೂ ಓದಿ: ಏಮ್ಸ್ ಸ್ಥಾಪನೆಗೆ ಮಾತು ತಪ್ಪಿದ ಬೊಮ್ಮಾಯಿ ಸರ್ಕಾರ, ಕೊತ ಕೊತ ಕುದಿಯುತ್ತಿರುವ ಸ್ಥಳೀಯರು, ಮಾ 24 ರಂದು ಅಮಿತ್​ ಶಾಗೆ ರಾಯಚೂರು ಬಂದ್ ಬಿಸಿ

ಏಮ್ಸ್ ಸ್ಥಾಪನೆಗೆ ಮಾತು ತಪ್ಪಿದ ಬೊಮ್ಮಾಯಿ ಸರ್ಕಾರ

ನಟ ಶಿವಣ್ಣ ರಾಯಚೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಕುರಿತು ಸಿಎಂ ಜೊತೆ ಮಾತನಾಡುತ್ತೇನೆ. ನಿಮ್ಮ ಹೋರಾಟಗಳಿಗೆ ಸಹಕಾರ ಇದೆ ಅಂತ ಬಹಿರಂಗವಾಗಿ ಹೇಳಿದ್ರು. ಇದನ್ನೆಲ್ಲಾ ಗಮನಿಸುತ್ತಿದ್ದರೂ ಸಿಎಂ ಬೊಮ್ಮಾಯಿ ಸರ್ಕಾರ ಕೊನೆಗೂ ರಾಯಚೂರಿಗೆ ಏಮ್ಸ್ ನೀಡಲೇ ಇಲ್ಲ.

ಹೀಗಾಗಿ ಏಮ್ಸ್ ಹೋರಾಟ ಸಮಿತಿ ಸರ್ಕಾರಕ್ಕೆ ಬುದ್ದಿ ಕಲಿಸಲು ಮುಂದಾಗಿದೆ‌‌. ಇದೇ ಮಾರ್ಚ್ 24 ರಂದು ಕೇಂದ್ರ ಸಚಿವ ಅಮಿತ್ ಶಾ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಗಬ್ಬೂರಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಇಂದು ರಾಯಚೂರು ಬಂದ್ ಮಾಡೋ ಮೂಲಕ ಅಮಿತ್ ಶಾಗೆ ಬಿಸಿ ಮುಟ್ಟಿಸೋಕೆ ಹೋರಾಟಗಾರರು ಮುಂದಾಗಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ