ಜನರಿಗೆ ಹಣ ನೀಡಿ ಕಾಂಗ್ರೆಸ್ ಗಿಮಿಕ್ ಮಾಡುತ್ತಿದೆ; ಬಸನಗೌಡ ವಿರುದ್ಧ ಪ್ರತಾಪಗೌಡ ಪಾಟೀಲ್ ಆರೋಪ

ಮಸ್ಕಿ ಕ್ಚೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಆಣೆ ಪ್ರಮಾಣದ ರಾಜಕೀಯ ಶುರುವಾದಂತಿದೆ.

ಜನರಿಗೆ ಹಣ ನೀಡಿ ಕಾಂಗ್ರೆಸ್ ಗಿಮಿಕ್ ಮಾಡುತ್ತಿದೆ; ಬಸನಗೌಡ ವಿರುದ್ಧ ಪ್ರತಾಪಗೌಡ ಪಾಟೀಲ್ ಆರೋಪ
ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ

Updated on: Mar 30, 2021 | 4:21 PM

ರಾಯಚೂರು: ಮಸ್ಕಿ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಆಣೆ ಪ್ರಮಾಣದ ರಾಜಕೀಯ ಶುರುವಾದಂತಿದೆ. ಕಾಂಗ್ರೆಸ್ ಅಭ್ಯರ್ಥಿ ಬಸನಗೌಡರು ಹಳ್ಳಿಗಳಲ್ಲಿ ಹಣ ಸಂಗ್ರಹಿಸಿ ನೀಡುತ್ತಿರುವ ವಿಚಾರ ಮಾತು ಕೇಳಿಬರುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಚುನಾವಣಾ ಗಿಮಿಕ್ ಎಂದು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಬಸನಗೌಡ ತುರವಿಹಾಳ ತಿರುಗೇಟು ನೀಡಿದ್ದಾರೆ.

ಜನರಿಗೆ ಮುಂಚಿತವಾಗಿ ಹಣ ಕೊಟ್ಟು ಅವರಿಂದ ಪಡೆಯುವ ರೀತಿಯಲ್ಲಿ ಕಾಂಗ್ರೆಸ್ ಗಿಮಿಕ್ ಮಾಡುತ್ತಿದೆ ಎಂದು ಆರೋಪಿಸಿದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್​ ಅವರಿಗೆ ತಿರುಗೇಟು ನೀಡಿದ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ, ಜನ ಭಾವನಾತ್ಮಕವಾಗಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಂದಿಸುತ್ತಿದ್ದಾರೆ. ದೇವರ ಮೇಲೆ ಆಣೆ ಮಾಡುತ್ತೇನೆ, ಜನರಿಗೆ ಮುಂಚೆ ಹಣ ಕೊಟ್ಟು ಪಾಲಿಟಿಕ್ಸ್ ಮಾಡುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಕ್ಷೇತ್ರದಲ್ಲಿ ಕಾಂಗ್ರೆಸ್ ದೌರ್ಜನ್ಯ ಮಾಡುತ್ತಿದೆ ಎಂಬ ಬಿ.ವೈ.ವಿಜಯೇಂದ್ರ ಹೇಳಿಕೆಗೆ, ಬಿಜೆಪಿ ಅಭ್ಯರ್ಥಿಯಾಗಿರುವ ಪ್ರತಾಪಗೌಡರೇ ಉತ್ತರಿಸಲಿ ಎಂದು ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ಪತ್ಯುತ್ತರ ನೀಡಿದ್ದಾರೆ.

YouTube video player

ಇದನ್ನೂ ಓದಿ: ಮಸ್ಕಿ ಕ್ಷೇತ್ರದ ಪ್ರಗತಿಗೆ ಉಪಚುನಾವಣೆಯೇ ಮುಹೂರ್ತವಾಗಿತ್ತೇ? ಬಿಎಸ್​ವೈಗೆ ಹೆಚ್​.ಡಿ.ಕುಮಾರಸ್ವಾಮಿ ತಿರುಗೇಟು

ನಾಮಪತ್ರ ಸಲ್ಲಿಸಿದ ಸತೀಶ್ ಜಾರಕಿಹೊಳಿ, ಮಸ್ಕಿ ಕಡೆಗೆ ಪ್ರಚಾರಕ್ಕೆ ತೆರಳಿದ ಕಾಂಗ್ರೆಸ್ ದಂಡು

Published On - 12:41 pm, Tue, 30 March 21

Follow Us