ಕಾಂಗ್ರೆಸ್ ಹಗರಣಗಳನ್ನು ಮುಂದಿನ ಅಧಿವೇಶನದಲ್ಲಿ ಬಯಲು ಮಾಡುತ್ತೇವೆ: ಬಿಎಸ್​​​ ಯಡಿಯೂರಪ್ಪ

ಕಾಂಗ್ರೆಸ್ ಹಗರಣಗಳನ್ನು ಮುಂದಿನ ಅಧಿವೇಶನದಲ್ಲಿ ಬಯಲು ಮಾಡುತ್ತೇವೆ ಎಂದು ರಾಯಚೂರು ತಾಲೂಕಿನ ಗಿಲ್ಲೆಸುಗೂರಿನಲ್ಲಿ ನಡೆದೆ ಜನ ಸಂಕಲ್ಪ ಯಾತ್ರೆಯಲ್ಲಿ ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ. ಎಸ್​​ ಯಡಿಯೂರಪ್ಪ ಹೇಳಿದ್ದಾರೆ.

ಕಾಂಗ್ರೆಸ್ ಹಗರಣಗಳನ್ನು ಮುಂದಿನ ಅಧಿವೇಶನದಲ್ಲಿ ಬಯಲು ಮಾಡುತ್ತೇವೆ: ಬಿಎಸ್​​​ ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ
Follow us
TV9 Web
| Updated By: ವಿವೇಕ ಬಿರಾದಾರ

Updated on: Oct 11, 2022 | 3:22 PM

ರಾಯಚೂರು: ಕಾಂಗ್ರೆಸ್ ಹಗರಣಗಳನ್ನು (Congress Scam) ಮುಂದಿನ ಅಧಿವೇಶನದಲ್ಲಿ ಬಯಲು ಮಾಡುತ್ತೇವೆ ಎಂದು ರಾಯಚೂರು (Raichur) ತಾಲೂಕಿನ ಗಿಲ್ಲೆಸುಗೂರಿನಲ್ಲಿ ನಡೆದೆ ಜನ ಸಂಕಲ್ಪ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ. ಎಸ್​​ ಯಡಿಯೂರಪ್ಪ (BS Yadiyurappa) ಹೇಳಿದ್ದಾರೆ. ತನಿಖೆ ಮಾಡಿಸಿ ನಿಮ್ಮನ್ನು ಎಲ್ಲಿ ನಿಲ್ಲಿಸಬೇಕೋ ಅಲ್ಲಿಗೆ ನಿಲ್ಲಿಸುತ್ತೇವೆ. ರಾಬರ್ಟ್​ ವಾದ್ರಾ ಮಾಡಿದ್ದ ಹಗರಣಗಳ ಪಟ್ಟಿ ಇದೆ. ನ್ಯಾಷನಲ್​ ಹೆರಾಲ್ಡ್​​​ ಹಗರಣ ಗೊತ್ತಿಲ್ಲವೇ? ಹಗರಣವನ್ನೇ ಮಾಡದ ಪ್ರಧಾನಿ ಮೋದಿ ಬಗ್ಗೆ ಮಾತನಾಡ್ತೀರಾ? 25 ಲಕ್ಷ ಮೌಲ್ಯದ ಹ್ಯೂಬ್ಲೆಟ್​ ವಾಚ್​ ಕೊಟ್ಟಿದ್ಯಾರು ಗೊತ್ತಿಲ್ವಾ? ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದರು.

ರಾಯಚೂರು ಜಿಲ್ಲೆಗೆ ಏಮ್ಸ್ ಕೊಡೊದಾಗಿ ಘೋಷಣೆ ಮಾಡುತ್ತೇವೆ. ಏಮ್ಸ್ ಕೊಟ್ಟರೆ, ಐದು ಕ್ಷೇತ್ರ ಗೆಲ್ಲಿಸಿ ಕೊಡತಿವಿ ಅಂತ ಹೇಳಿದ್ದಿರಾ. ಹಾಗೇನೆ ಇಂದೇ ರಾಯಚೂರಿಗೆ ಏಮ್ಸ್ ಘೋಷಣೆ ಮಾಡುತ್ತೇವೆ. ಸಿಎಂ ಬೊಮ್ಮಾಯಿ ಏಮ್ಸ್ ಘೋಷಣೆ ಮಾಡಲಿದ್ದಾರೆ. 150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಂಕಲ್ಪ ಯಾತ್ರೆ ವಿಜಯಯಾತ್ರೆಯಾಗಿ ಪರಿವರ್ತನೆ ಆಗುತ್ತೆ: ಸಿಎಂ ಬೊಮ್ಮಾಯಿ

ಸಂಕಲ್ಪ ಯಾತ್ರೆ ವಿಜಯಯಾತ್ರೆಯಾಗಿ ಪರಿವರ್ತನೆ ಆಗುತ್ತೆ. ಕಾಂಗ್ರೆಸ್ ನಾಯಕರ ಕನಸು ಕನಸಾಗಿಯೇ ಉಳಿಯಲಿದೆ. ನಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದರೆ ಜನ ನಿಮ್ಮನ್ನು ಬಿಡಲ್ಲ. ಕಾಂಗ್ರೆಸ್ಸಿಗರು ಈಗಿರುವ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನ ಮಾಡಲಿ. ರಾಯಚೂರು ಜಿಲ್ಲೆಯಲ್ಲಿ ಏಳಕ್ಕೆ 7 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ರಾಯಚೂರು ಜಿಲ್ಲೆಯಿಂದಲೇ ವಿಜಯ ಸಂಕಲ್ಪ ಶುರು ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

2023ಕ್ಕೆ ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳಿಸುವ ಸಂಕಲ್ಪ ಮಾಡಿದ್ದೇವೆ. ನಾವು ರೈತರು, ಬಡವರು, ವಿದ್ಯಾರ್ಥಿಗಳಿಗಾಗಿ ಯೋಜನೆ ಜಾರಿಗೆ ಮಾಡಿದ್ದೇವೆ. ನಮ್ಮ ಸರ್ಕಾರ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿದೆ. ರೈತರ ಮಕ್ಕಳಿಗೆ ಸ್ಕಾಲರ್​ಶಿಪ್​ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಬೊಮ್ಮಾಯಿ ಆರ್​​ಎಸ್​​ಎಸ್ ಕೈಗೊಂಬೆ ಅಂತಾ ವಿಪಕ್ಷನಾಯಕ ಸಿದ್ಧರಾಮಯ್ಯ ಆರೋಪ ಮಾಡಿರುವ ವಿಚಾರಕ್ಕೆ ಮಾತನಾಡಿದ ಅವರು ಆರ್​​ಎಸ್​ಎಸ್​​ ಇಡೀ ಭಾರತವನ್ನು ಒಗ್ಗೂಡಿಸುತ್ತಿದೆ. ಆರ್​​ಎಸ್​​ಎಸ್ ದೇಶದಲ್ಲಿ ದೀನದಲಿತರ ಸೇವೆ ಮಾಡುತ್ತಿದೆ. ಕಾಂಗ್ರೆಸ್​​ಗೆ ಆರ್​​ಎಸ್​​ಎಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಸಿದ್ದರಾಮಯ್ಯ ಸಮಾಜವಾದಿಯಿಂದ ಬಂದಿರುವವರು, ಕಾಂಗ್ರೆಸ್ ಸೇರಿದ ದಿನವೇ ಸಮಾಜವಾದಿ ಮನೆಯಲ್ಲಿ ಮಡಚಿಟ್ಟಿದ್ದೀರಿ ಎಂದು ವಾಗ್ದಾಳಿ ಮಾಡಿದರು.

ಸಿದ್ದರಾಮಯ್ಯ ಬಗ್ಗೆ ನನಗೆ ಬೇಸರವಾಗುತ್ತಿರುವುದು ಒಂದೇ ವಿಚಾರವಾಗಿ, ಅದು ಪಾದಯಾತ್ರೆ ವೇಳೆ ಸಣ್ಣ ಹುಡುಗ ಓಡು ಅಂದರೆ ನೀವು ಓಡುತ್ತೀರಾ. ಹಿರಿಯ ನಾಯಕರಿಗೆ ಇದೆಲ್ಲಾ ಸರಿ ಹೊಂದುವುದಿಲ್ಲ ಎಂದು ವಗ್ದಾಳಿ ಮಾಡಿದರು.

ಯಾವೊಬ್ಬ ಗಂಡಸೂ ಮೀಸಲಾತಿ ಹೆಚ್ಚಿಸಲು ಮುಂದಾಗಿಲ್ಲ: ಸಚಿವ ಶ್ರೀರಾಮುಲು

ಬಿ.ಎಸ್ ಯಡಿಯೂರಪ್ಪ ವಾಲ್ಮೀಕಿ ಸಮುದಾಯಕ್ಕೆ ಸಾಕಷ್ಟು ನೆರವು ನೀಡಿದ್ದಾರೆ. ಯಡಿಯೂರಪ್ಪ ಅವರು ವಾಲ್ಮೀಕಿ ಮಹಿರ್ಷಿ ಜಯಂತಿ ಜಾರಿ ಮಾಡಿದ್ದಾರೆ. ಬಿ.ಎಸ್ ಯಡಿಯೂರಪ್ಪ ವಾಲ್ಮೀಕಿ ಸಮುದಾಯ ಅಭಿವೃದ್ಧಿಗೆ ಹಣ ನೀಡಿದ್ದಾರೆ. ಎಸ್​ಸಿ, ಎಸ್​ಟಿ ಮೀಸಲಾತಿ ಹೆಚ್ಚಿಸಲು ಯಾರಿಗೂ ಆಗಲಿಲ್ಲ. ಯಾವೊಬ್ಬ ಗಂಡಸೂ ಮೀಸಲಾತಿ ಹೆಚ್ಚಿಸಲು ಮುಂದಾಗಿಲ್ಲ. ಆದರೆ ಬೊಮ್ಮಾಯಿ ಮೀಸಲಾತಿ ಹೆಚ್ಚಿಸಿ ತಾನೆಂಬುದು ತೋರಿಸಿದ್ದಾರೆ ಎಂದು ಹೇಳಿದ್ದಾರೆ

ತುಂಬಿದ ಕೊಡ ತುಳಕಲ್ಲ. ಆ ಮನುಷ್ಯನನ್ನ ನೋಡ್ರಿ, ಎಷ್ಟು ಒಳ್ಳೆಯ ವ್ಯಕ್ತಿ ನೋಡ್ರಿ. 150 ಸೀಟು ಗೆಲ್ಲಲಿ ಅಂತ ಜನ ಆಶಿರ್ವಾದ ಮಾಡಬೇಕು. ವಾಜಪೇಯಿ-ಅಡ್ವಾನಿ‌ ಜೋಡಿ, ಮೋದಿ-ಅಮೀತ್ ಶಾ‌ ಜೋಡಿಯಂತೆ ನಮ್ಮಲ್ಲಿ ಬಿಎಸ್ ವೈ-ಬೊಮ್ಮಾಯಿ‌ ಜೋಡಿಯಿದೆ. ಭೀಷ್ಮನ ಸ್ಥಾನದಲ್ಲಿ ಬಿಎಸ್​ವೈ ಇದ್ದಾರೆ. 40 ವರ್ಷದಗಳಿಂದ ಹೋರಾಟ ಮಾಡಿದ್ದಾರೆ. ಎರಡು ಸ್ಥಾನದಿಂದ ಈಗ, ಬಿಜೆಪಿ‌ ಅಧಿಕಾರ ವರೆಗೆ ಬಂದಿರುವುದಕ್ಕೆ ಬಿಎಸ್ ಯಡಿಯೂರಪ್ಪ ಕಾರಣ. ಸಿಎಂ ಬೊಮ್ಮಾಯಿಯನ್ನು ಹಾಡಿ ಹೊಗಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್