AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Raichur: ಕೃಷ್ಣ ನದಿಯಲ್ಲಿ ಸ್ನಾನ ಮಾಡಲು ಹೋಗಿ ಕೊಚ್ಚಿ ಹೋದ ಇಬ್ಬರು ಸಹೋದರರು

ಇಬ್ಬರೂ ಸೋದರರು ಇಂದು ಕುಟುಂಬಸ್ಥರ ಜತೆ ಕೃಷ್ಣಾ ನದಿಗೆ ಬಂದಿದ್ದರು. ಈ ವೇಳೆ ನದಿಯಲ್ಲಿ ಕೊಚ್ಚಿ ಹೋಗಿ ಸೋದರರಿಬ್ಬರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ದೇವದುರ್ಗ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Raichur: ಕೃಷ್ಣ ನದಿಯಲ್ಲಿ ಸ್ನಾನ ಮಾಡಲು ಹೋಗಿ ಕೊಚ್ಚಿ ಹೋದ ಇಬ್ಬರು ಸಹೋದರರು
ಕೃಷ್ಣ ನದಿಯಲ್ಲಿ ಸ್ನಾನ ಮಾಡಲು ಹೋಗಿ ಕೊಚ್ಚಿ ಹೋದ ಇಬ್ಬರು ಸಹೋದರರು
TV9 Web
| Edited By: |

Updated on:Sep 20, 2022 | 6:48 PM

Share

ರಾಯಚೂರು: ದೇವದುರ್ಗ ತಾಲೂಕಿನ ಕೊಪ್ಪುರು ಗ್ರಾಮದ ಬಳಿ ಕೃಷ್ಣ ನದಿಯಲ್ಲಿ ಇಬ್ಬರು ಸಹೋದರರು ಕೊಚ್ಚಿ ಹೋಗಿದ್ದಾರೆ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕೊಪ್ಪುರು ಗ್ರಾಮದ ರಜಾಕ್ ಸಾಬ್​(35) ಮತ್ತು ಆತನ ತಮ್ಮ ಮೌಲಾಸಾಬ್​(32) ಮೃತಪಟ್ಟವರು. ನದಿಯಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರೂ ಜಲಸಮಾಧಿಯಾಗಿದ್ದಾರೆ.

ಇಬ್ಬರೂ ಸೋದರರು ಇಂದು ಕುಟುಂಬಸ್ಥರ ಜತೆ ಕೃಷ್ಣಾ ನದಿಗೆ ಬಂದಿದ್ದರು. ಈ ವೇಳೆ ನದಿಯಲ್ಲಿ ಕೊಚ್ಚಿ ಹೋಗಿ ಸೋದರರಿಬ್ಬರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ದೇವದುರ್ಗ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತರಿಬ್ಬರ ಶೋಧ ಕಾರ್ಯವನ್ನು ಅಗ್ನಿಶಾಮಕ ಸಿಬ್ಬಂದಿ ಮುಂದುವರಿಸಿದ್ದಾರೆ.

ದೇವರಹಿಪ್ಪರಗಿ: ಬೈಕ್​ಗೆ ಕಾರು ಡಿಕ್ಕಿ, ಬೈಕ್ ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವು

ವಿಜಯಪುರ: ದೇವರಹಿಪ್ಪರಗಿ ತಾಲೂಕಿನ ಪಡಗಾನೂರ ಕ್ರಾಸ್​​ ಬಳಿ, ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಬೈಕ್​ಗೆ ಕಾರು ಡಿಕ್ಕಿಯಾಗಿ, ಇಬ್ಬರು ಸವಾರರು ದುರ್ಮರಣಕ್ಕೀಡಾಗಿದ್ದಾರೆ. ಬೈಕ್ ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಪಡಗಾನೂರು ತಾಂಡಾದ ಬಾಬು ಚೌವ್ಹಾನ್, ಅಶೋಕ ನಾಯಕ್ ಮೃತ ಯುವಕರು. ಘಟನೆ ಬಳಿಕ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ಮಾದನಾಯಕನಹಳ್ಳಿ ಪೊಲೀಸ್ರಿಂದ ಅಂತರರಾಜ್ಯ ಕಳ್ಳನ ಬಂಧನ

ನೆಲಮಂಗಲ: ಮನೆಗಳ್ಳತನ ಮತ್ತು ಗಮನ ಬೇರೆಡೆ ಸಳೆದು ಕಳ್ಳತನ ಮಾಡಿದ್ದ ಅಂತರರಾಜ್ಯ ಕಳ್ಳನೊಬ್ಬನನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗೌಡನಹಳ್ಳಿ ಮತ್ತು ಹುಸ್ಕೂರು ರಸ್ತೆಯಲ್ಲಿ ಕೃತ್ಯ ನಡೆದಿದೆ. ಪ್ರಕರಣ ದಾಲಿಸಿಕೊಂಡ ಸಿಪಿಐ ಮಂಜುನಾಥ್ ತಂಡದಿಂದ ಕಾರ್ಯಾಚರಣೆ ನಡೆದಿದೆ. ತಮಿಳುನಾಡು ಮೂಲದ ಅಭಿಷೇಕ್ ಬಂಧಿತ ಆರೋಪಿ. ಒಟ್ಟು 5 ಪ್ರಕರಣಗಳಲ್ಲಿ ಆರೋಪಿ ತನ್ನ ಕೈಚಳಕದಿಂದ 110 ಗ್ರಾಂ ಚಿನ್ನಾಭರಣ ಎಗರಿಸಿದ್ದ. ಚಿನ್ನಾಭರಣ, 5 ಲಕ್ಷ ನಗದು ಸೇರಿದಂತೆ ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಬಂಧಿತ ಆರೋಪಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಅಟ್ಟಲಾಗಿದೆ.

Published On - 5:41 pm, Tue, 20 September 22