ಶಿಕ್ಷಣ ತಜ್ಞ ಎಂದೇ ಖ್ಯಾತಿ ಪಡೆದಿದ್ದ ಮಾಜಿ ರಾಜ್ಯಸಭಾ ಸದಸ್ಯ ಅಬ್ದುಲ್ ಸಮದ್ ಸಿದ್ದೀಖಿ ವಿಧಿವಶ

| Updated By: ಆಯೇಷಾ ಬಾನು

Updated on: Nov 22, 2022 | 9:53 AM

ವಯೋ ಸಹಜ ಖಾಯಿಲೆ ಹಿನ್ನಲೆ ಹೈದ್ರಾಬಾದ್​ನಲ್ಲಿ ಚಿಕಿತ್ಸೆ ಪಡೆದಿದ್ದ ಸಿದ್ದೀಖಿ ಅವರು ರಾಯಚೂರು ನಗರದ ತಮ್ಮ ನಿವಾಸಕ್ಕೆ ಶಿಫ್ಟ್ ಆಗಿದ್ದರು. ನಿನ್ನೆ ತಡ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಶಿಕ್ಷಣ ತಜ್ಞ ಎಂದೇ ಖ್ಯಾತಿ ಪಡೆದಿದ್ದ ಮಾಜಿ ರಾಜ್ಯಸಭಾ ಸದಸ್ಯ ಅಬ್ದುಲ್ ಸಮದ್ ಸಿದ್ದೀಖಿ ವಿಧಿವಶ
ಅಬ್ದುಲ್ ಸಮದ್ ಸಿದ್ದೀಖಿ
Follow us on

ರಾಯಚೂರು: ವಯೋಸಹಜ ಕಾಯಿಲೆಯಿಂದ ಮಾಜಿ ರಾಜ್ಯಸಭಾ ಸದಸ್ಯ ಅಬ್ದುಲ್ ಸಮದ್ ಸಿದ್ದೀಖಿ(87)(Abdul Samad Siddiqui) ವಿಧಿವಶರಾಗಿದ್ದಾರೆ. ರಾಯಚೂರು ನಗರದ ತಮ್ಮ ನಿವಾಸದಲ್ಲಿ‌ ಅಬ್ದುಲ್ ಸಮದ್ ಸಿದ್ದೀಖಿ ಕೊನೆಯುಸಿರೆಳೆದಿದ್ದಾರೆ.

ಅಬ್ದುಲ್ ಸಮದ್ ಸಿದ್ದೀಖಿ ಅವರು ಜನತಾದಳದಿಂದ 1988ರಲ್ಲಿ ರಾಜ್ಯಸಭೆಗೆ ಆಯ್ಕೆ ಆಗಿದ್ದರು. ಅಲ್ಲಿಂದ 1994 ವರೆಗೆ ರಾಜ್ಯ ಸಭಾ ಸದಸ್ಯರಾಗಿ(Rajya Sabha) ಕಾರ್ಯ ನಿರ್ವಹಿಸಿದ್ದರು. ಹಿಂದುಳಿದ ರಾಯಚೂರು ಜಿಲ್ಲೆಯ ಮಕ್ಕಳಿಗೆ ವಿವಿಧ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಿದ್ದು ಇವರು ಶಿಕ್ಷಣ ತಜ್ಞ ಅಂತಲೂ ಖ್ಯಾತಿ ಪಡೆದಿದ್ದಾರೆ. ವಯೋ ಸಹಜ ಖಾಯಿಲೆ ಹಿನ್ನಲೆ ಹೈದ್ರಾಬಾದ್​ನಲ್ಲಿ ಚಿಕಿತ್ಸೆ ಪಡೆದಿದ್ದ ಸಿದ್ದೀಖಿ ಅವರು ರಾಯಚೂರು ನಗರದ ತಮ್ಮ ನಿವಾಸಕ್ಕೆ ಶಿಫ್ಟ್ ಆಗಿದ್ದರು. ನಿನ್ನೆ ತಡ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಕನ್ನಡಾಂಬೆ ಭುವನೇಶ್ವರಿ ದೇವಿಯ ಅಧಿಕೃತ ಚಿತ್ರ ಜಾರಿಗೆ ಸರ್ಕಾರ ಒಪ್ಪಿಗೆ

ಅಬ್ದುಲ್ ಸಮದ್ ಸಿದ್ದೀಖಿ ರಾಯಚೂರು ನಗರದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ನ್ಯೂ ಎಜುಕೇಶನ್ ಸೊಸೈಟಿ ಅಡಿಯಲ್ಲಿ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳನ್ನು ಪ್ರಾರಂಭಿಸಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಾರಣೀಭೂತರಾಗಿದ್ದರು. ಅಲ್ಲದೇ ರಾಯಚೂರಿನಲ್ಲಿ ಸಫೀಯಾ ಸಂಸ್ಥೆ ಮೂಲಕ ಮಹಿಳೆಯರಿಗೆ ಡಿ.ಎಡ್. ಕಾಲೇಜು ಸ್ಥಾಪಿಸಿದ್ದರು.

ಅಬ್ದುಲ್ ಸಮದ್ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪತ್ರಿಯರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಇಂದು ರಾಯಚೂರು ನಗರದ ಶೇಖಮಿಯಾ ಬಾಬಾ ಖಬರಸ್ಥಾನದಲ್ಲಿ ಸಿದ್ದೀಖಿ ಅಂತ್ಯಕ್ರಿಯೆ ನಡೆಯಲಿದೆ.‌

Published On - 9:53 am, Tue, 22 November 22