ಮಾವನ ಪಿಎಫ್​​ ಮೇಲೆ ಅಳಿಯನ ಕಣ್ಣು; ಧನದಾಹಕ್ಕೆ ಪತ್ನಿಯನ್ನೇ ಕೊಂದ ಕಿರಾತಕ ಪತಿ

ಆಕೆ ಕಷ್ಟಾನೋ‌-ಸುಖಾನೊ ಪತಿಯೇ ಪರದೈವ ಅಂತ ಜೀವನ ನಡೆಸ್ತಿದ್ದಾಕೆ. ಗಂಡ ಕೊಡಬಾರದ ಕಾಟ ಕೊಟ್ರು ತುಟಿ ಪಿಟಿಕ್ ಅಂತಿರ್ಲಿಲ್ಲ. ಆದ್ರೆ, ಈ ಕಿರಾತಕ ಮಾತ್ರ ಬುದ್ಧಿ ಕಲಿತಿರಲಿಲ್ಲ. ಪತ್ನಿ ತವರು ಮನೆಯಲ್ಲಿದ್ದ ಹಣದಾಸೆಗಾಗಿ, ಆಕೆ ಜೀವವನ್ನೇ ತೆಗೆದಿದ್ದಾನೆ.

ಮಾವನ ಪಿಎಫ್​​ ಮೇಲೆ ಅಳಿಯನ ಕಣ್ಣು; ಧನದಾಹಕ್ಕೆ ಪತ್ನಿಯನ್ನೇ ಕೊಂದ ಕಿರಾತಕ ಪತಿ
ಮಾವನ ಪಿಎಫ್​​ ಮೇಲೆ ಅಳಿಯನ ಕಣ್ಣು; ಧನದಾಹಕ್ಕೆ ಪತ್ನಿಯನ್ನೇ ಕೊಂದ ಕಿರಾತಕ ಪತಿ

ರಾಯಚೂರು: ಧನದಾಹ ಪತಿಯಿಂದ ಪತ್ನಿಯ ಕೊಲೆಯಾದ ಘಟನೆ ರಾಯಚೂರಿನಲ್ಲಿ ನಡೆದಿದೆ. ಅಸ್ಮಾ ಬಾನು‌ ಮೃತ ದುರ್ದೈವಿ. ರಾಯಚೂರಿನ ಸುಲ್ತಾನ್ ಪುರದ ಅಸ್ಮಾ ಬಾನು‌ 8 ವರ್ಷಗಳ ಹಿಂದೆ ಅಂದ್ರೂನ್ ಖಿಲ್ಲಾ ನಗರದ ಮೊಹಮ್ಮದ್ ಫಜಲುದ್ದಿನ್ ಅನ್ನ ಕೈಹಿಡಿದಿದ್ಳು. ಫಜುಲುದ್ದಿನ್ ಚಹಾಪುಡಿ ವ್ಯಾಪಾರ ಮಾಡ್ತಿದ್ದ. ದಂಪತಿಗೆ ಇಬ್ಬರು ಮಕ್ಕಳೂ ಆಗಿದ್ವು. ಎಲ್ಲಾ ಚನ್ನಾಗೇ ಹೋಗ್ತಿದೆ ಅನ್ನುವಾಗ, ಪಾಪಿ ಫಜುಲುದ್ದಿನ್ಗೆ ಧನದಾಹ ಶುರುವಾಗಿತ್ತು. ತವರಿನಿಂದ ಹಣತರುವಂತೆ ಅಸ್ಮಾಗೆ ನಿತ್ಯ ಕಿರುಕುಳ ಕೊಡ್ತಿದ್ದ. ಆದ್ರೆ, ಹೆತ್ತವರ ಕಷ್ಟ ನೋಡಿ ಅಸ್ಮಾ, ಉಸಿರು ಬಿಗಿ ಹಿಡಿದು ಜೀವನ ಮಾಡ್ತಿದ್ಳು. ಆದ್ರೀಗ, ಕ್ರೂರಿ ಆಕೆ ಉಸಿರನ್ನೇ ತೆಗೆದು ಬಿಟ್ಟಿದ್ದಾನೆ.

ಆಸ್ಮಾ ತಂದೆ ಹುಚ್ಚಪೀರ್ ಕೆಎಸ್ಆರ್ಟಿಸಿ ಕಂಡಕ್ಟರ್ ನೌಕರಿಯಿಂದ ನಿವೃತ್ತನಾಗಿದ್ರು. ಅವರಿಗೆ ಬಂದಿದ್ದ ಭವಿಷ್ಯ ನಿಧಿಯಲ್ಲಿ‌ ತನಗೂ ಪಾಲು ಬೇಕು ಎಂದು ಆಸ್ಮಾಳನ್ನು, ಫಜಲುದ್ದೀನ್ ಪೀಡಿಸ್ತಿದ್ದ. ಆದ್ರೆ, ಅಸ್ಮಾ ಒಪ್ಪದಿದ್ದಾಗ ಮೊನ್ನೆ ರಾತ್ರಿ ಕೊಂದೇ ಬಿಟ್ಟಿದ್ದಾನೆ. ನಂತರ, ಮನೆಗೆ ಬಂದಿದ್ದ ಪೊಲೀಸ್ರ ಎದುರು ನನಗೇನು ಗೊತ್ತೇ ಇಲ್ಲ ಅಂತ ಕಥೆ ಕಟ್ಟಿದ್ದ. ಪ್ರಜ್ಞೆ ತಪ್ಪಿ ಬಿದ್ದಿರೋದಾಗಿ ಸೀನ್ ಕ್ರಿಯೇಟ್ ಮಾಡಿದ್ದ. ಆದ್ರೆ, ಅಸ್ಮಾ ಕುತ್ತಿಗೆ ಭಾಗದಲ್ಲಿದ್ದ ಗಾಯದ ಗುರುತು ಕಂಡು ಪೊಲೀಸ್ರು, ಫಜುಲುದ್ದೀನ್ಗೆ ಬೆಂಡೆತ್ತಿದ್ರು. ಕೊನೆಗೆ ಪತ್ನಿಯನ್ನ ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಕೊಂದಿದ್ದನ್ನ ಒಪ್ಪಿಕೊಂಡಿದ್ದಾನೆ.

ರಾಯಚೂರು ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಪತಿ ಫಜಲುದ್ದಿನ್ ವಶಕ್ಕೆ ಪಡೆದಿದ್ದಾರೆ. ಏನೇ ಹೇಳಿ, ಪತಿ ಹೊಡೆದ್ರು, ಬೈದ್ರು ತಲೆ ಬಗ್ಗಿಸಿಕೊಂಡು ಅಸ್ಮಾ ಜೀವನ ಮಾಡ್ತಿದ್ಳು. ಆದ್ರೆ, ಪಾಪಿ ಫಜಲುದ್ದೀನ್ ಆಕೆ ಜೀವವನ್ನೇ ತೆಗೆದು ಜೈಲು ಪಾಲಾಗಿದ್ದಾನೆ. ಎರಡು ಮಕ್ಕಳು ಅನಾಥರಾಗಿವೆ.

ವರದಿ: ಭೀಮೇಶ್ ಪೂಜಾರ್, ಟಿವಿ9 ರಾಯಚೂರು.

ಇದನ್ನೂ ಓದಿ: ವಾರದಿಂದ ವಾರಕ್ಕೆ ತನ್ನ ಓಟ ಹೆಚ್ಚಿಸಿದ ಮಹಾಮಾರಿ; ಕೊರೊನಾಗೆ ಈ ಬಾರಿ ಮಕ್ಕಳೇ ಹೆಚ್ಚು ಟಾರ್ಗೆಟ್

Click on your DTH Provider to Add TV9 Kannada