ರಾಯಚೂರು: ಸೇತುವೆ ತಡೆಗೋಡೆಗೆ ಬಸ್ ಡಿಕ್ಕಿ; 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ರಾಯಚೂರು (Raichur) ಜಿಲ್ಲೆಯ ಮಾನ್ವಿ ತಾಲೂಕಿನ ನಂದಿಹಾಳ ಬಳಿ ಹಳ್ಳದ ಸೇತುವೆ ತಡೆಗೋಡೆಗೆ ಸರ್ಕಾರಿ ಬಸ್(Bus) ಡಿಕ್ಕಿಯಾಗಿ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾದ ಘಟನೆ ನಡೆದಿದೆ. ಕೂಡಲೇ ಗಾಯಾಳುಗಳಿಗೆ ಮಾನ್ವಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಯಚೂರು, ಆ.04: ಹಳ್ಳದ ಸೇತುವೆ ತಡೆಗೋಡೆಗೆ ಬಸ್(Bus) ಡಿಕ್ಕಿಯಾಗಿ ಹಲವರಿಗೆ ಗಾಯವಾದ ಘಟನೆ ರಾಯಚೂರು (Raichur) ಜಿಲ್ಲೆಯ ಮಾನ್ವಿ ತಾಲೂಕಿನ ನಂದಿಹಾಳ ಬಳಿ ನಡೆದಿದೆ. ಮಾನ್ವಿ- ಸಿಂಧನೂರು ಮಾರ್ಗದ ಬಸ್ ಇದಾಗಿದ್ದು, ಸ್ಟೇರಿಂಗ್ ರಾಡ್ ತುಂಡಾಗಿ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದ್ದು, ಸೇತುವೆ ತಡೆಗೋಡೆಗೆ ಡಿಕ್ಕಿಯಾಗಿ ಹಳ್ಳಕ್ಕೆ ಇಳಿದಿದೆ. ಇನ್ನು ಬಸ್ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿದೆ. ಕೂಡಲೇ ಗಾಯಾಳುಗಳಿಗೆ ಮಾನ್ವಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು
ವಿಜಯಪುರ: ಕಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಯರಗಲ್ ಕೆಡಿ ಗ್ರಾಮದ ಎನ್ 50 ರಲ್ಲಿ ನಡೆದಿದೆ. ಬೈಕ್ ಸವಾರ ಹನುಮಂತ ಹಿರೇಕುರುಬರ (43) ಮೃತ ರ್ದುದೈವಿ. ಅಮಾವಾಸ್ಯೆ ಹಿನ್ನಲೆ ಯಾತನೂರು ಗ್ರಾಮದ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕಾರಿನಲ್ಲಿ ಸ್ಟಂಟ್ ಮಾಡಿಕೊಂಡು ಹೋಗಿ ಸ್ಕೂಟರ್ ಡಿಕ್ಕಿ ಹೊಡೆದ ಯುವಕರು; ಮಹಿಳೆ ಸಾವು, ಮಗು ಸ್ಥಿತಿ ಗಂಭೀರ
ರೈತನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು
ಮೈಸೂರು: ನಂಜನಗೂಡು ತಾಲೂಕಿನ ಸಿಂಧುವಳ್ಳಿಯಲ್ಲಿ ಚಿರತೆ ದಾಳಿಯಿಂದ ರೈತ ಬಸವಣ್ಣ ಎಂಬುವವರಿಗೆ ಗಾಯವಾಗಿದ್ದು, ಜಮೀನಿನಲ್ಲಿ ಮೇವು ಕಟಾವು ಮಾಡಲು ಹೋಗಿದ್ದ ವೇಳೆ ಚಿರತೆ ಅಟ್ಯಾಕ್ ಮಾಡಿದೆ. ಗಾಯಾಳು ಬಸವಣ್ಣಗೆ ನಂಜನಗೂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೂಡಲೇ ಚಿರತೆ ಸೆರೆಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:19 pm, Sun, 4 August 24