ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ನೇಮಕ ಅನರ್ಹ -ಕಲಬುರಗಿ ಕೆಎಟಿ ಪೀಠ ಆದೇಶ

ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ಆಗಿ ನೇಮಕಗೊಂಡಿದ್ದ ನೂರ್ ಜಹಾರ್ ಖಾನಂ ಅವರ ನೇಮಕವನ್ನು ಕಲಬುರಗಿಯ ಆಡಳಿತ ನ್ಯಾಯಾಧಿಕರಣ ಪೀಠ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ನೇಮಕ ಅನರ್ಹ -ಕಲಬುರಗಿ ಕೆಎಟಿ ಪೀಠ ಆದೇಶ
ಕಲಬುರಗಿ ನ್ಯಾಯಾಲಯ
Image Credit source: The Hindu
TV9kannada Web Team

| Edited By: Vivek Biradar

Jul 07, 2022 | 9:52 PM

ರಾಯಚೂರು: ರಾಯಚೂರು (Raichur) ಜಿಲ್ಲಾ ಪಂಚಾಯತ್ ಸಿಇಒ (CEO) ಆಗಿ ನೇಮಕಗೊಂಡಿದ್ದ ನೂರ್ ಜಹಾರ್ ಖಾನಂ ಅವರ ನೇಮಕವನ್ನು ಕಲಬುರಗಿಯ (Kalaburagi) ಆಡಳಿತ ನ್ಯಾಯಾಧಿಕರಣ ಪೀಠ ರದ್ದುಗೊಳಿಸಿ ಆದೇಶ ಹೊರಡಿಸಿದೆ. ನೂರ್ ಜಹಾರ್ ಖಾನಂ ಕೆಎಎಸ್‌ (KAS) ಅಧಿಕಾರಿಯಾಗಿದ್ದರೂ ಅವರನ್ನು ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ಆಗಿ ನೇಮಕ ಮಾಡಲಾಗಿತ್ತು. ಐಎಎಸ್ (IAS) ಕೇಡರ್​​ನ ಜಿ.ಪಂ ಸಿಇಓ ಹುದ್ದೆಗೆ, ಕೆಎಎಸ್‌ ಅಧಿಕಾರಿಯನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ  ಜಿ.ಪಂ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪುರೆ ಕೆಎಟಿ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಕಲಬುರಗಿ ಕೆಎಟಿ ಪೀಠ, ಸಿಇಓ ಹುದ್ದೆಯಲ್ಲಿ ಇವರು ಮುಂದುವರೆಯಲು ಅರ್ಹತೆ ಹೊಂದಿಲ್ಲ. ನೇಮಕ ಕಾನೂನು ಬಾಹಿರವಾಗಿದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಲಬುರಗಿಯ ಕೆಎಟಿ ಪೀಠ ಆದೇಶ ಹೊರಡಿಸಿದೆ.

ನಿವೃತ್ತಿ ವಯಸ್ಸು 60ಕ್ಕೇರಿಸುವ ಸರ್ಕಾರದ ಆದೇಶ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್

ಧಾರವಾಡ: ಖಾಸಗಿ ಕೈಗಾರಿಕೆ ವಲಯದಲ್ಲಿರುವ ನೌಕರರ ವಯಸ್ಸನ್ನು 58ರಿಂದ 60ಕಕ್ಕೆ ಏರಿಸುವ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠ ಎತ್ತಿ ಹಿಡಿದಿದೆ.

ಮಾರ್ಚ್ 28, 2017ರ ಗಜೆಟ್ ಮಾಡಲಾದ ಕರ್ನಾಟಕ ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶಗಳ (ತಿದ್ದುಪಡಿ) ನಿಯಮಗಳ ಮಾದರಿ ಸ್ಥಾಯಿ ಆದೇಶಗಳು 2017ರ ಪ್ರಕಾರ ಸರ್ಕಾರ ನಿವೃತ್ತಿ ವಯಸ್ಸು ಏರಿಕೆ ಮಾಡಿದೆ. ಸರ್ಕಾರದ ಆದೇಶ ಪ್ರಶ್ನಿಸಿ ಗ್ರಾಸಿಂ ಇಂಡಸ್ಟ್ರೀಸ್ ಲಿಮಿಟೆಡ್​​ನ ಹರಿಹರ್ ಘಟಕ ಸಲ್ಲಿಸಿದ ಅರ್ಜಿಯನ್ನು ಮಂಗಳವಾರ ಆಲಿಸಿದ ನ್ಯಾಯಪೀಠವು ಪ್ರಮಾಣೀಕೃತ ಆದೇಶಗಳ ಕಲಂ 29ರ ಪ್ರಕಾರ ಕಂಪನಿಯ ನೌಕರರು 60 ವರುಷದವರೆಗೆ ಮುಂದುವರಿಯಬಹುದಾಗಿದೆ  ಎಂದು  ಹೇಳಿದೆ.

ಈ ಹಿಂದೆಯೂ ಗ್ರಾಸಿಂ ಇಂಡಸ್ಟ್ರೀಸ್ ಲಿಮಿಟೆಡ್ ಸಲ್ಲಿಸಿದ ಅರ್ಜಿಯನ್ನು ಏಕ ಸದಸ್ಯರ ಪೀಠ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಗ್ರಾಸಿಂ ಇಂಡಸ್ಟ್ರೀಸ್ ವಿಭಾಗೀಯ ಪೀಠದ ಮೊರೆ ಹೋಗಿದೆ. ವೈದ್ಯಕೀಯ ಪರೀಕ್ಷೆಗೊಳಡಿಸಿದಾಗ ಅವರು ಮರುಉದ್ಯೋಗ ಮಾಡಲು ಅರ್ಹರು ಅಲ್ಲ ಎಂದು ತೋರಿದಲ್ಲಿ ಅರ್ಜಿಯನ್ನು ವಜಾಗೊಳಿಸಿದ ದಿನಾಂಕವಾದ 2021 ಸೆಪ್ಟೆಂಬರ್ 17ರಂದು ಅಥವಾ ನಂತರ ನಿವೃತ್ತರಾದ ನೌಕರರಿಗೆ ಪೂರ್ತಿ ಸಂಬಳ ಮರುಪಾವತಿ ಮಾಡುವಂತೆ ವಿಭಾಗೀಯ ಪೀಠ ಮೇಲ್ಮನವಿದಾರರರಿಗೆ ನಿರ್ದೇಶಿಸಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada