ರಾಯಚೂರು ಅಕ್ರಮ ಮರಳುಗಾರಿಕೆಯ ಕಿಂಗ್ ಪಿನ್ ​ಬೋಸರಾಜು ಪುತ್ರ: ಜೆಡಿಎಸ್​ ಆರೋಪ

ರಾಯಚೂರು ಜಿಲ್ಲೆಯ ದೇವದುರ್ಗದ ಬಾಗೂರಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಇದರ ಕಿಂಗ್ ಪಿನ್ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಅವರ ಪುತ್ರ ಎಂದು ರಾಯಚೂರು ಜೆಡಿಎಸ್ ಜಿಲ್ಲಾಧ್ಯಕ್ಷ ವಿರೂಪಾಕ್ಷ ಗಂಭೀರ ಆರೋಪ ಮಾಡಿದ್ದಾರೆ.

ರಾಯಚೂರು ಅಕ್ರಮ ಮರಳುಗಾರಿಕೆಯ ಕಿಂಗ್ ಪಿನ್ ​ಬೋಸರಾಜು ಪುತ್ರ: ಜೆಡಿಎಸ್​ ಆರೋಪ
ಸಚಿವ ಎನ್​ಎಸ್​ ಬೋಸರಾಜು
Edited By: ವಿವೇಕ ಬಿರಾದಾರ

Updated on: Aug 08, 2023 | 3:45 PM

ರಾಯಚೂರು: ದೇವದುರ್ಗದ ಬಾಗೂರಿನಲ್ಲಿ ಅಕ್ರಮ ಮರಳುಗಾರಿಕೆ (Illegal Sand Mining) ನಡೆಯುತ್ತಿದ್ದು, ಇದರ ಕಿಂಗ್ ಪಿನ್ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು (NS Boseraju) ಅವರ ಪುತ್ರ ಎಂದು ರಾಯಚೂರು (Raichuru) ಜೆಡಿಎಸ್ (JDS) ಜಿಲ್ಲಾಧ್ಯಕ್ಷ ವಿರೂಪಾಕ್ಷ ಗಂಭೀರ ಆರೋಪ ಮಾಡಿದ್ದಾರೆ. ರಾಯಚೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸರ್ಕಾರದ ಬೊಕ್ಕಸ ತುಂಬಿಸಲು ಮರಳು ಮಾಫಿಯಾ ದಂಧೆ ಮಾಡುತ್ತಿದ್ದಾರೆ ಎಂದರು.

ಕೃಷ್ಣಾ ನದಿತೀರದ ಬಾಗೂರು ಗ್ರಾಮದ ಜನರು, ಅಲ್ಲಿ ಕೆಲಸ ಮಾಡುತ್ತಿರುವ ಹಿಟಾಜಿ, ಟ್ರ್ಯಾಕ್ಟರ್ ಮತ್ತು ಜೆಸಿಬಿ ಮಾಲೀಕರು ರವಿ ಬೋಸರಾಜ್ ಹೆಸರು ಹೇಳುತ್ತಿದ್ದಾರೆ. ಅಶೋಕ್ ಪೋತಗಲ್ ಎಂಬುವ ಹಿಂಬಾಲಕನ ಮೂಲಕ ದಂಧೆ ನಡೆಸುತ್ತಿದ್ದಾರೆ. ಸ್ಥಳೀಯ ದೇವದುರ್ಗ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಅವರ ಎಚ್ಚರಿಕೆಗಳಿಗೆ ಬಗ್ಗದೇ ದಂಧೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:  ಸಿಎಂ ಸಿದ್ದರಾಮಯ್ಯರಿಗೆ ಸ್ಪೆಷಲ್​ ಕುರಿ ಗಿಫ್ಟ್​ ಮಾಡಿದ ರಾಯಚೂರು ಅಭಿಮಾನಿ

ರಾಜಕಾರಣದಲ್ಲಿ ತೇಜೋವಧೆ ಮಾಡುವುದೇ ಇವರ ಕೆಲಸ: ಎನ್.ಎಸ್.ಬೋಸರಾಜು

ಅವರ ಲೀಡರ್ ಹೆಚ್.ಡಿ.ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಹಿಟ್ ಆ್ಯಂಡ್​ ರನ್ ಮಾಡುತ್ತಾರೆ. ಇವರು ಜಿಲ್ಲೆಯಲ್ಲಿ ಅದೇ ಕೆಲಸ ಮಾಡುತ್ತಾರೆ. ಯಾವುದೇ ಸರ್ಕಾರ ಇದ್ದರೂ ಕುಮಾರಸ್ವಾಮಿ ಹಿಟ್ ಆ್ಯಂಡ್ ರನ್ ಮಾಡುತ್ತಾರೆ. ಆರೋಪಕ್ಕೆ ಸಾಕ್ಷಿಯಿರುವುದಿಲ್ಲ. ಯಾರೇ ಏನೇ ಮಾಡಿದರೂ ಸಾಕ್ಷಿ ಬೇಕು, ದೂರು ದಾಖಲಾಗಬೇಕು. ಯಾರು ರಾಜಕಾರಣದಲ್ಲಿ ಇರುತ್ತಾರೆ ಅವರ ತೇಜೋವಧೆ ಮಾಡುವ ಕೆಲಸವನ್ನೇ ಕೆಲವರು ಮಾಡುತ್ತಿರುತ್ತಾರೆ. ಆರೋಪಕ್ಕೆ ಸಾಕ್ಷಿ ತೋರಿಸಲಿ ಎಂದು ಸಚಿವ ಎನ್.ಎಸ್.ಬೋಸರಾಜು ತಿರುಗೇಟು ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Bhemesh Poojar

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More
Follow Us