AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿಯೇ ನದಿಗೆ ತಳ್ಳಿದ್ದಾಳೆಂದು ಆರೋಪಿಸಿದ್ದ ಪತಿ ವಿರುದ್ಧ ಪೋಕ್ಸೋ ಕೇಸ್: ಜೈಲೂಟ ಫಿಕ್ಸ್!

ಬ್ರಿಡ್ಜ್ ಮೇಲಿನಿಂದ ಪತ್ನಿಯೇ ಪತಿಯನ್ನು ನದಿಗೆ ತಳ್ಳಿದ ಆರೋಪ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ರಾಯಚೂರು ಜಿಲ್ಲೆಯ ಗುರ್ಜಾಪುರ ಬ್ಯಾರೇಜ್ ಬಳಿ ಫೋಟೋ ತೆಗೆಯುವ ನೆಪದಲ್ಲಿ ಪತ್ನಿಯೇ ತನ್ನನ್ನು ನದಿಗೆ ತಳ್ಳಿದ್ದಾಳೆಂದ ಆರೋಪಿಸಿದ್ದ ಪತಿ ತಾತಪ್ಪಗೆ ಸಂಕಷ್ಟ ಎದುರಾಗಿದ್ದು, ಜೈಲು ಪಾಲಾಗುವ ಭೀತಿ ಎದುರಾಗಿದೆ. ತಾತಪ್ಪ ಬಾಲ್ಯವಿವಾಹವಾಗಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಕೇಸ್ ದಾಖಲಾಗಿದೆ.

ಪತ್ನಿಯೇ ನದಿಗೆ ತಳ್ಳಿದ್ದಾಳೆಂದು ಆರೋಪಿಸಿದ್ದ ಪತಿ ವಿರುದ್ಧ ಪೋಕ್ಸೋ ಕೇಸ್: ಜೈಲೂಟ ಫಿಕ್ಸ್!
ಭೀಮೇಶ್​​ ಪೂಜಾರ್
| Updated By: ರಮೇಶ್ ಬಿ. ಜವಳಗೇರಾ|

Updated on: Jul 27, 2025 | 12:03 PM

Share

ರಾಯಚೂರು, (ಜುಲೈ 27): ಜಿಲ್ಲೆಯ ಗುರ್ಜಾಪುರ ಬ್ಯಾರೇಜ್ ಬಳಿ ಫೋಟೋ ತೆಗೆಯುವ ನೆಪದಲ್ಲಿ ಪತ್ನಿಯೇ ತನ್ನನ್ನು ನದಿಗೆ ತಳ್ಳಿದ್ದಾಳೆಂದ ಆರೋಪಿಸಿದ್ದ ಪತಿ ತಾತಪ್ಪಗೆ ಸಂಕಷ್ಟ ಎದುರಾಗಿದ್ದು, ಜೈಲು ಪಾಲಾಗುವ ಭೀತಿ ಎದುರಾಗಿದೆ. ಅಪ್ರಾಪ್ತೆಯನ್ನು ವಿವಾಹವಾಗಿದ್ದ ಹಿನ್ನೆಲೆ ಬಾಲ್ಯವಿವಾಹ ನಿಷೇಧ ಕಾಯಿದೆ ಅಡಿ ಪ್ರಕರಣದಲ್ಲಿ ಸಿಲುಕಿದ್ದ ಪತಿ ತಾತಪ್ಪ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ 10 ಮಂದಿ ವಿರುದ್ಧ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯಿದೆ ಅಡಿ ಪ್ರಕರಣ (pocso case) ದಾಖಲಾಗಿದೆ. ಯಾವ ಕ್ಷಣದಲ್ಲಾದರೂ ಆರೋಪಿ ತಾತಪ್ಪ ಬಂಧನವಾವಾಗುವ ಸಾಧ್ಯತೆಗಳಿವೆ.

ಸಾವನ್ನೇ ಗೆದ್ದಿದ್ದಾತನೀಗೀಗ ಅಪ್ರಾಪ್ತ ಪತ್ನಿ ಹೇಳಿಕೆಯೇ ಜೈಲೂಟದ ಮುಹೂರ್ತ ಇಟ್ಟಿದೆ.  ಇತ್ತೀಚೆಗೆ ರಾಯಚೂರು ತಾಲ್ಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಮೇಲಿಂದ ಪತಿ ತಾತಪ್ಪನನ್ನ ತಳ್ಳಿ ಪತ್ನಿ ಕೊಲೆಗೆ ಯತ್ನಿಸಿದ್ದಳು ಎನ್ನುವ ಆರೋಪ ಪ್ರಕರಣ ನಿತ್ಯ ಟ್ವಿಸ್ಟ್ ಮೇಲೆ ಟ್ವಿಸ್​ ಪಡೀತಿತ್ತು..ಕೊನೆಗೆ ತಾತಪ್ಪನ ಪತ್ನಿ ಅಪ್ರಾಪ್ತೆ ಎನ್ನುವ ವಿಷಯ ಸಂಚಲನಕ್ಕೆ ಕಾರಣವಾಗಿತ್ತು.ಈ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗದ ಸೂಚನೆ ಮೆರೆಗೆ ರಾಯಚೂರಿನ ಮಹಿಳಾ ಠಾಣೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರಡಿ ಮಾತ್ರ ಕೇಸ್ ದಾಖಲಾಗಿತ್ತು.ಆದ್ರೆ ಪೋಕ್ಸೋ ಕಾಯ್ದೆ-2012 ದಾಖಲಾಗದ ಹಿನ್ನೆಲೆ ರಾಯಚೂರು ಮಹಿಳಾ ಠಾಣೆ ಪೊಲೀಸರು ವಿರುದ್ಧ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಗರಂ ಆಗಿತ್ತು.ಈ ಬಗ್ಗೆ ಖುದ್ದು ಐಜಿಗೆ ಮಕ್ಕಳ ಆಯೋಗ ದೂರು ನೀಡುತ್ತಿದ್ದಂತೆಯೇ ಇಡೀ ಪ್ರಕರಣಕ್ಕೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.ಅಷ್ಟೇ ಅಲ್ಲ,ತಾತಪ್ಪನಿಗೆ ಜೈಲೂಟದ ದಾರಿ ತೋರಿಸಿದೆ.

ಇದನ್ನೂ ಓದಿ: ಪತ್ನಿಯೇ ನದಿಗೆ ತಳ್ಳಿದ್ದಾಳೆಂದು ಆರೋಪಿಸಿದ್ದ ಪತಿ ತಾತಪ್ಪನಿಗೆ ಸಂಕಷ್ಟ..!

ಮತ್ತೊಂದೆಡೆ ತಾತಪ್ಪನ ಹೆಂಡ್ತಿ ಬಾಲ್ಯ ವಿವಾಹದ ಬಗ್ಗೆ ಇಂಚಿಂಚು ಮಾಹಿತಿಯನ್ನ ಬಾಯ್ಬಿಟ್ಟಿದ್ದಾಳೆ. ಪೊಲೀಸರ ಎದುರು ಅಳಲನ್ನ ತೋಡಿಕೊಂಡಿರುವ ಅಪ್ರಾಪ್ತೆ, ಬಾಲ್ಯ ವಿವಾಹ,ವಿವಾಹದ ಬಳಿಕ ತನ್ನ ಸಾಂಸಾರಿಕ ಜೀವನದ ಬಗ್ಗೆ ಹೇಳಿಕೆ ದಾಖಲಿಸಿದ್ದಾಳೆ.ಅಪ್ರಾಪ್ತೆ ಅಂತ ಗೊತ್ತಿದ್ದರೂ ಉಳಿದ ಆರೋಪಿಗಳು ಎ-1 ಆರೋಪಿ ತಾತಪ್ಪನ ಜೊತೆ ಮದುವೆ ಮಾಡಿಸಿದ್​ದಾರೆ.ಬಳಿಕ ಮದುವೆಯಾದ 11ನೇ ದಿನಕ್ಕೆ ಫಸ್ಟ್ ನೈಟ್ ಕೂಡ ಮಾಡಿಸಿರುವುದಾಗಿ ಅಪ್ರಾಪ್ತೆ ಹೇಳಿಕೆ ದಾಖಲಿಸಿದ್ದಾಳೆ.ಇದೇ ಹೇಳಿಕೆ ಆಧಾರದಲ್ಲಿ ರಾಯಚೂರು ಮಹಿಳಾ ಠಾಣೆ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಬಾಲ್ಯ ವಿವಾಹ ನಿಷೇಧ ಕಾಯ್ದೆ ಜೊತೆ ಪೋಕ್ಸೋ ಕಾಯ್ದೆ-2012ರಡಿ ಪತಿ ತಾತಪ್ಪ ಸೇರಿ ಆತನ ಕುಟುಂಬದ 10 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಪೋಕ್ಸೋ ಕೇಸ್ ದಾಖಲಾಗಿರುವ ಹಿನ್ನೆಲೆ ಯಾವ ಕ್ಷಣದಲ್ಲಾದರೂ ಆರೋಪಿ ತಾತಪ್ಪ ಬಂಧನವಾಗೋ ಸಾಧ್ಯತೆ ಇದೆ.

ಒಂದು ವೇಳೆ ಕೃಷ್ಣಾ ನದಿ ಬ್ರಿಡ್ಜ್ ಮೇಲೆ ಪತಿ-ಪತ್ನಿ ಗಲಾಟೆ ನಡೆಯದೇ ಇದ್ರೆ ಈ ಬಾಲ್ಯ ವಿವಾಹ ಪ್ರಕರಣ ಬೆಳಕಿಗೆ ಬರುತ್ತಲೇ ಇರಲಿಲ್ಲ. ಇಂತಹ ಅನೇಕ ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಾರದೇ ಮುಚ್ಚಿ ಹೋಗುತ್ತಿವೆ. ಅದರಲ್ಲೂ ರಾಯಚೂರು,ಯಾದಗಿರಿಯಂತಹ ಹಿಂದುಳಿದ ಜಿಲ್ಲೆಗಳಲ್ಲಿ ಈಗಲೂ ನಡೆಯುತ್ತಿರುವ ಇಂತಹ ಆಚರಣೆಗಳಿಗೆ ಅಧಿಕಾರಿಗಳು ಮಟ್ಟಹಾಕಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ