AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು: ಫಸ್ಟ್ ನೈಟ್ ವಿಡಿಯೋ ಮಾಡಿಟ್ಟುಕೊಂಡು ಸರ್ಕಾರಿ ಅಧಿಕಾರಿಯಿಂದ ಪತ್ನಿಗೆ ಬ್ಲ್ಯಾಕ್​ಮೇಲ್

ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ಕೊಡುವುದು, ಮನೆಯಲ್ಲಿ ಹಿಂಸೆ, ದೌರ್ಜನ್ಯ ಎಸಗಿದ ಬಗ್ಗೆ ಆಗಾಗ ವರದಿಯಾಗುತ್ತಿರುತ್ತವೆ. ಆದರೆ ರಾಯಚೂರಿನ ಮಾನ್ವಿಯಲ್ಲೊಬ್ಬ ಸರ್ಕಾರಿ ಅಧಿಕಾರಿ, ಮೊದಲ ರಾತ್ರಿಯ ವಿಡಿಯೋ ರೆಕಾರ್ಡ್ ಮಾಡಿ ಇಟ್ಟುಕೊಂಡು ಪತ್ನಿಯನ್ನೇ ಬ್ಲ್ಯಾಕ್​ಮೇಲ್ ಮಾಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದ್ದು, ಪ್ರಕರಣವೂ ದಾಖಲಾಗಿದೆ.

ರಾಯಚೂರು: ಫಸ್ಟ್ ನೈಟ್ ವಿಡಿಯೋ ಮಾಡಿಟ್ಟುಕೊಂಡು ಸರ್ಕಾರಿ ಅಧಿಕಾರಿಯಿಂದ ಪತ್ನಿಗೆ ಬ್ಲ್ಯಾಕ್​ಮೇಲ್
ಮಾನ್ವಿ ಪೊಲೀಸ್ ಠಾಣೆ
ಭೀಮೇಶ್​​ ಪೂಜಾರ್
| Edited By: |

Updated on: Oct 16, 2024 | 12:15 PM

Share

ರಾಯಚೂರು, ಅಕ್ಟೋಬರ್ 16: ಮೊದಲ ರಾತ್ರಿಯ ವಿಡಿಯೋ ಮಾಡಿ ಇಟ್ಟುಕೊಂಡು ಪತ್ನಿಯನ್ನೇ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ಆರೋಪ ರಾಯಚೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಯೊಬ್ಬರ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಇದೀಗ ರಾಯಚೂರು ಜಿಲ್ಲೆ ಮಾನ್ವಿ ಮೂಲದ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಫಸ್ಟ್ ನೈಟ್ ವಿಡಿಯೋ ರೆಕಾರ್ಡ್ ಮಾಡಿ ಇಟ್ಟುಕೊಂಡಿರುವ ಪತಿ, ತನ್ನ ವಿರುದ್ಧ ಮಾತನಾಡಿದರೆ ಖಾಸಗಿ ಕ್ಷಣದ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ. ಮಾನ್ವಿ ವಿಭಾಗದ ಜೆಸ್ಕಾಂನಲ್ಲಿ ಮೇಲ್ವಿಚಾರಕ ಹುದ್ದೆಯಲ್ಲಿರುವ ಗುರುರಾಜ್ ಎಂಬವರ ವಿರುದ್ಧ ದೂರು ದಾಖಲಾಗಿದೆ.

ಮ್ಯಾಟ್ರಿಮೋನಿಯಲ್ಲಿ ಪರಿಚಯ, ಮದುವೆ

ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದ ಗುರುರಾಜ್​ನನ್ನು ನಂಬಿ ಮದುವೆಯಾಗಿದ್ದಾಗಿ ಸಂತ್ರಸ್ತೆ ಹೇಳಿಕೊಂಡಿದ್ದಾರೆ. ಗುರುರಾಜ್ ತನ್ನ ಚಾಲಕನನ್ನು ಬಳಸಿಕೊಂಡು ಸಾಕಷ್ಟು ಜನರಿಗೆ ಪತ್ನಿಯ ಜತೆಗಿನ ಲೈಂಗಿಕ ಕ್ರಿಯೆಯ ವಿಡಿಯೋ ತೋರಿಸಿದ್ದಾರೆ ಎಂದೂ ಆರೋಪಿಸಲಾಗಿದೆ. ಕೆಲವು ಮಂದಿ ಬೇರೆ ಹೆಣ್ಣುಮಕ್ಕಳಿಗೂ ಇದೇ ರೀತಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಹೆಂಡತಿಯನ್ನೇ ಬೇರೆಯವರ ಬಳಿ ಕಳುಹಿಸಲು ಮುಂದಾಗಿದ್ದ ಭೂಪ

ತಮಗೆ ಯಾರ ಬಳಿ ಕೆಲಸ ಆಗತ್ತದೆಯೋ ಅಂಥವರ ಬಳಿ ಹೋಗು ಎಂದು ಗುರುರಾಜ್ ಪತ್ನಿಗೆ ಟಾರ್ಚರ್ ಕೊಟ್ಟಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯರಿಗೆ ಅಶ್ಲೀಲವಾಗಿ ವಿಡಿಯೋ ಕಾಲ್ ಮಾಡಿರುವ ಸಾಕ್ಷಿಗಳಿವೆ ಎಂದೂ ಸಂತ್ರಸ್ತೆ ಆರೋಪಿಸಿದ್ದಾರೆ. ಜತೆಗೆ, ಈಗಾಗಲೇ ಪತಿ ಗುರುರಾಜ್ ನಾಲ್ಕು ಮದುವೆ ಆಗಿದ್ದಾರೆ. ತಾನಗೆ ಕೋಟಿಗಟ್ಟಲೇ ಲಾಭ ಬರತ್ತದೆ ಎಂದು ನಂಬಿಸಿ ಮದುವೆಯಾಗಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.

ಇದನ್ನೂ ಓದಿ: ಬಟ್ಟೆ ತೊಳೆಯುವ ವೇಳೆ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಕೊಚ್ಚಿ ಹೋದ ತಾಯಿ-ಮಗಳು

ಸಾಕಷ್ಟು ಬಾರಿ ನನ್ನ ಮೇಲೆ ದಾಳಿ ಮಾಡಿದ್ದಾರೆ. ನನಗೆ ರಕ್ಷಣೆ ಕೊಡಿ, ಪತಿ ಗುರುರಾಜ್ ವಿರುದ್ಧ ಕ್ರಮಕೈಗೊಳ್ಳಿ ಎಂದು ಮಾನ್ವಿ ಠಾಣೆ ಪೊಲೀಸರಿಗೆ ಮಹಿಳೆ ಮನವಿ ಮಾಡಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ