ರಾಯಚೂರು, ಫೆಬ್ರವರಿ 16: ಜಿಲ್ಲೆಯ ಮಾನ್ವಿ ತಾಲ್ಲೂಕಿನ ಭೋಗಾವತಿ ಗ್ರಾಮ ಹಾಗೂ ಸುತ್ತಲಿನ 226 ರೈತರ ಸುಮಾರು 2 ಕೋಟಿ ರೂ. ಬೆಳೆ ವಿಮೆ ಹಣವನ್ನು ಗುಳುಂ ಮಾಡಲಾಗಿದೆ. ರೈತರು (farmers) ಮಾತ್ರವಲ್ಲದೇ ಸಚಿವ ಬೋಸರಾಜ್ ಪುತ್ರಿ ವಾಣಿಗೆ ಸೇರಿದ ಎರಡು ಪ್ರತ್ಯೇಕ ಬೆಳೆ ವಿಮೆ ಹಣವನ್ನು ವಂಚಿಸಿದ್ದಾರೆ. ಸಚಿವರ ಪುತ್ರಿ ಬದಲಾಗಿ ಶರಣಗೌಡ ದೊಡ್ಡಬಸನಗೌಡ ಖಾತೆಗೆ ಹಣ ಜಮೆ ಮಾಡಲಾಗಿದೆ. ಮಾನ್ವಿ ಠಾಣೆಯಲ್ಲಿ ಒಟ್ಟು 22 ಜನರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಸಚಿವ ಎನ್.ಎಸ್. ಬೋಸರಾಜು ಪುತ್ರಿ ಎನ್. ವಾಣಿ ಹೆಸರಿನ 7 ಎಕರೆ 10 ಗುಂಟೆ ಜಮೀನಿನ ಭತ್ತದ ಬೆಳೆಗೆ ಬಂದ ಒಂದು ಲಕ್ಷದ ಒಂದು ಸಾವಿರದ 180ರೂ. ಪರಿಹಾರ ಮೊತ್ತವನ್ನು ವಾಣಿ ಬದಲಾಗಿ ಶರಣಗೌಡ ದೊಡ್ಡ ಬಸನಗೌಡ ಪೊಲೀಸ್ ಪಾಟೀಲ್ ಖಾತೆಗೆ ಜಮೆ ಮಾಡಲಾಗಿದೆ.
ವಾಣಿ ಅವರ ಮತ್ತೊಂದು ಜಮೀನಿನ ಪರಿಹಾರ ಹಣದಲ್ಲೂ ಗೋಲ್ ಮಾಲ್ ಮಾಡಲಾಗಿದ್ದು, ವಾಣಿ ಅವರ ಬದಲು ಲಕ್ಷ್ಮೀದೇವಿ ಖಾತೆಗೆ 1 ಲಕ್ಷಕ್ಕೂ ಅಧಿಕ ಹಣ ಜಮೆ ಮಾಡಲಾಗಿದೆ. 2022ನೇ ಸಾಲಿನ 1 ಕೋಟಿ 10 ಲಕ್ಷ 81 ಸಾವಿರದ 822 ರೂ. ಪರಿಹಾರ ಹಣ ಜಮೆ ಮಾಡಲಾಗಿದೆ.
ವಿಜಯಪುರ: ಜಿಲ್ಲೆಯ ದ್ರಾಕ್ಷಿ ತವರೂರು ಎಂದು ಪ್ರಖ್ಯಾತಿಗೆ ಪಾತ್ರವಾದ ಜಿಲ್ಲೆಯಾಗಿದೆ. ಉತ್ತಮ ಗುಣಮಟ್ಟದ ದ್ರಾಕ್ಷಿ ಇಲ್ಲಿ ಬೆಳೆಯಾಗುತ್ತಿದೆ. ದೇಶ ವಿದೇಶಗಳಲ್ಲಿಯೂ ಸಹ ವಿಜಯಪುರ ಜಿಲ್ಲೆಯ ದ್ರಾಕ್ಷಿಗೆ ಬೇಡಿಕೆಯಿದೆ. ಆದರೆ ದ್ರಾಕ್ಷಿ ಬೆಳೆಗಾರರಿಗೆ ದ್ರಾಕ್ಷಿ ಸಮಸ್ಯೆಯ ಬೆಳೆಯಾಗಿದೆ. ನಿರ್ವಹಣಾ ವೆಚ್ಚ. ಆಧಿಕ ಕೂಲಿ ಖರ್ಚು ಹಸಿ ದ್ರಾಕ್ಷಿ ಹಾಗೂ ಒಣ ದ್ರಾಕ್ಷಿಗೆ ಸರಿಯಾದ ಬೆಲೆ ಸಿಗದೇ ಬೆಳೆಗಾರರರು ಸಾಲದ ಕೂಪದಲ್ಲಿ ಸಿಲುಕಿದ್ದಾರೆ.
ಇದನ್ನೂ ಓದಿ: ರಾಯಚೂರು: 226 ರೈತರ ಎರಡು ಕೋಟಿ ಬೆಳೆ ವಿಮೆ ಗುಳುಂ! ಕೃತ್ಯದಲ್ಲಿ ಪ್ರಭಾವಿಗಳು ಭಾಗಿ
ಈ ವರ್ಷದ ಭೀಕರ ಬರಗಾಲಕ್ಕೆ ದ್ರಾಕ್ಷಿಯನ್ನು ಉಳಿಸಿಕೊಳ್ಳಲು ಬೆಳೆಗಾರರಿಗೆ ಆಗುತ್ತಿಲ್ಲ. ಅರದಲ್ಲೂ ಇಂಡಿ, ಚಡಚಣ, ದೇವರಹಿಪ್ಪರಗಿ ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಹೀಗಾಗಿ ಕೊಳವೆ ಬಾವಿಗಳು ಬತ್ತಿ ಹೋಗಿವೆ. ವರ್ಷವಿಡೀ ಮಳೆಯ ಸುಳಿವಿಲ್ಲ. ಕೆರೆಕಟ್ಟೆಗಳು ಹಳ್ಳಕೊಳ್ಳಗಳು ಬರಿದಾಗಿವೆ. ಕೆರೆಗಳಿಗೆ ಕೃಷ್ಣಾನದಿಯಿಂದ ನೀರು ಭರಿಸಲೂ ಸಹ ನದಿಯಲ್ಲಿ ನೀರು ಕಡಿಮೆಯಾಗುತ್ತಾ ಹೋಗಿದೆ. ಹೀಗಾಗಿ ಜಿಲ್ಲೆಯ ಇಂಡಿ, ಚಡಚಣ, ದೇವರಹಿಪ್ಪರಗಿ ತಾಲೂಕುಗಳಲ್ಲಿ ದ್ರಾಕ್ಷಿ ಬೆಳೆಯನ್ನುಯ ಕತ್ತರಿಸಿ ಹಾಕಲಾಗುತ್ತಿದೆ.
ಇದನ್ನೂ ಓದಿ: ರೈತರಿಗೆ ಪರಿಹಾರ ನೀಡದ ಅಧಿಕಾರಿಗಳು: ರಾಯಚೂರು ಸಹಾಯಕ ಆಯುಕ್ತರ ಕಚೇರಿ ವಸ್ತುಗಳು ಜಪ್ತಿ
ಒಂದು ಎಕರೆ ದ್ರಾಕ್ಷಿ ಬೆಳೆ ಫಸಲಿಗೆ ಬರುವವರೆಗೆ ಸುಮಾರು 3 ರಿಂದ 5 ಲಕ್ಷ ರೂ. ಖರ್ಚು ಮಾಡಲಾಗುತ್ತದೆ. ನಂತರ ಫಸಲು ಬರಲು ಆರಂಭಿಸುವ ಮೊದಲು ಒಂದು ಎಕರೆಗೆ ವರ್ಷಕ್ಕೆ 2 ರಿಂದ 3 ಲಕ್ಷ ರೂಪಾಯಿ ಖರ್ಚು ಇದೆ. ಇಷ್ಟೆಲ್ಲಾ ಖರ್ಚು ಮಾಡಿ ಬೆಳೆದಿರೋ ದ್ರಾಕ್ಷಿಗೆ ನೀರುಣಿಸಲಾಗದ ಕಾರಣ ಒಣಗುತ್ತಿದೆ. ದ್ರಾಕ್ಷಿ ಬೆಳೆ ಒಂದು ಬಾರಿ ಒಣಗಿದರೆ ಅದು ಮತ್ತೇ ಚಿಗುರುವುದಿಲ್ಲ. ಅನಿವಾರ್ಯವಾಗಿ ಕಡಿದು ಹಾಕಬೇಕಾಗುತ್ತದೆ. ಕಾರಣ ಇಂಡಿ, ಚಡಚಚಣ ಹಾಗೂ ದೇವರಹಿಪ್ಪರಗಿ ತಾಲೂಕಿನ ಭಾಗದಲ್ಲಿ 600 ರಿಂದ 1000 ಹೆಕ್ಟೇರ್ ದ್ರಾಕ್ಷಿ ಬೆಳೆಯನ್ನು ಕಡಿದು ಹಾಕಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:05 pm, Fri, 16 February 24