ರೈತರಿಗೆ ಪರಿಹಾರ ನೀಡದ ಅಧಿಕಾರಿಗಳು: ರಾಯಚೂರು ಸಹಾಯಕ ಆಯುಕ್ತರ ಕಚೇರಿ ವಸ್ತುಗಳು ಜಪ್ತಿ
ದದ್ದಲ್ ಏತ ನೀರಾವರಿ ಯೋಜನೆ ಹಾಗೂ ರಸ್ತೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡದಿರುವುದರಿಂದ ನ್ಯಾಯಾಲಯ ಆದೇಶ ಹಿನ್ನೆಲೆ ರಾಯಚೂರು ಸಹಾಯಕ ಆಯುಕ್ತರ ಕಚೇರಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕಚೇರಿ ಪೀಠೋಪಕರಣ, ಕಂಪ್ಯೂಟರ್ ಜಪ್ತಿ ಮಾಡಲಾಗಿದೆ. ರೈತರಿಗೆ 50 ಲಕ್ಷ ರೂ. ಅಧಿಕ ಪರಿಹಾರ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ.
ರಾಯಚೂರು, ಜನವರಿ 30: ದದ್ದಲ್ ಏತ ನೀರಾವರಿ ಯೋಜನೆ ಹಾಗೂ ರಸ್ತೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡದಿರುವುದರಿಂದ ನ್ಯಾಯಾಲಯ ಆದೇಶ ಹಿನ್ನೆಲೆ ರಾಯಚೂರು ಸಹಾಯಕ ಆಯುಕ್ತರ ಕಚೇರಿ ವಸ್ತುಗಳನ್ನು ಜಪ್ತಿ (seized) ಮಾಡಲಾಗಿದೆ. ಕಚೇರಿ ಪೀಠೋಪಕರಣ, ಕಂಪ್ಯೂಟರ್ ಜಪ್ತಿ ಮಾಡಲಾಗಿದೆ. ರಾಯಚೂರು ಹಾಗೂ ಮಾನ್ವಿ ತಾಲೂಕಿನ ರೈತರಿಂದ 2008ರಲ್ಲಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ದದ್ದಲ್, ಸುಂಕೇಶ್ವರಹಾಳ, ಜೆ.ಮಲ್ಲಾಪುರ ಸೇರಿದಂತೆ ವಿವಿಧ ಗ್ರಾಮಗಳ ರೈತರ ಜಮೀನು ಪಡೆದುಕೊಳ್ಳಲಾಗಿತ್ತು. ರೈತರಿಗೆ 50 ಲಕ್ಷ ರೂ. ಅಧಿಕ ಪರಿಹಾರ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ.
ಐದು ಬಾರಿ ಕಚೇರಿ ಸಾಮಗ್ರಿ ಜಪ್ತಿಗೆ ಆದೇಶ ಮಾಡಿದರೂ ಎಸಿ ಕಚೇರಿ ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿದ್ದರು. ಆದರೆ ಸಹಾಯಕ ಆಯುಕ್ತರ ವಿರೋಧದ ನಡುವೆಯೇ ಸಂತ್ರಸ್ತರ ಪರ ವಕೀಲರು ಹಾಗೂ ರೈತರಿಂದ ಇಂದು ಎಸಿ ಕಚೇರಿಯ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ; Sri Raghavendra Swamy Mutt: 33 ದಿನಗಳಲ್ಲೇ ರಾಯರ ಮಠಕ್ಕೆ ಕೋಟಿ ಕೋಟಿ ಕಾಣಿಕೆ
ಈ ವೇಳೆ ಸಿಟ್ಟಿನಲ್ಲಿ ಸಹಾಯಕ ಆಯುಕ್ತೆ ಮೆಹಬೂಬಿ ಕಚೇರಿಯಿಂದ ಹೊರ ನಡೆದಿದ್ದಾರೆ. ಸಹಾಯಕ ಆಯುಕ್ತರ ಕಾರು ಜಪ್ತಿಗೂ ರೈತರು ಮುಂದಾಗಿದ್ದರು. ನಂತರ ಕಾರ್ ಜಪ್ತಿ ಬಿಟ್ಟು ಕಚೇರಿ ವಸ್ತುಗಳನ್ನು ಮಾತ್ರ ಜಪ್ತಿ ಮಾಡಿದ್ದಾರೆ.
ಪೀಠೋಪಕರಣ ಜಪ್ತಿ
ಜಿಲ್ಲೆಯ ಸಿಂಧನೂರು ಪಟ್ಟಣದ ನೀರಾವರಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲೇ 3 ನೀರಾವರಿ ಇಲಾಖೆಯು ರೈತರ ಭೂಸ್ವಾಧೀನ ಪರಿಹಾರ ನೀಡದ ಹಿನ್ನೆಲೆ ಇತ್ತೀಚೆಗೆ ಲಿಂಗಸುಗೂರು ಕೋರ್ಟ್ ಆದೇಶದಂತೆ ಸಿಂಧನೂರು ನೀರಾವರಿ ಇಲಾಖೆ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಲಾಗಿತ್ತು.
ಇದನ್ನೂ ಓದಿ: ನರೇಗಾ ಯೋಜನೆಯಲ್ಲಿ ಅಕ್ರಮ ಕೇಸ್: ದೇವದುರ್ಗ ತಾಲೂಕಿನ 32 ಪಿಡಿಒಗಳ ಅಮಾನತು
ನ್ಯಾಯಾಲಯದ ಆದೇಶದಂತೆ ವಕೀಲರಾದ ಶಶಿಕಾಂತ್, ಗಿರೀಶ್ ಈಚನಾಳ ನೇತೃತ್ವದಲ್ಲಿ ನೀರಾವರಿ ಕಚೇರಿಯ 2 ಸಿಪಿಯು, 4 ಮಾನಿಟರ್, 37 ಕುರ್ಚಿ, ಕೀ ಬೋರ್ಡ್, ಮೌಸ್, ಕಚೇರಿಯ ಎಲ್ಲಾ ಪೀಠೋಪಕರಣಯನ್ನು ಜಪ್ತಿ ಮಾಡಲಾಗಿತ್ತು.
30 ವರ್ಷಗಳ ಹಿಂದೆ ರೈತರಿಂದ ಪಿಕಪ್ ಡ್ಯಾಮ್ಗಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ ನೀರಾವರಿ ಇಲಾಖೆ ಸಂತ್ರಸ್ತ ರೈತರಿಗೆ ಈವರೆಗೂ ಪರಿಹಾರ ನೀಡಿರಲಿಲ್ಲ. ಹೀಗಾಗಿ ಶ್ರೀನಿವಾಸ್ ಮತ್ತು ಶಕುಂತಲಾ ಎಂಬ ರೈತರು ಕೋರ್ಟ್ ಮೊರೆ ಹೋಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.