ದೇವದುರ್ಗದಲ್ಲಿ ಕೋಟ್ಯಂತರ ರೂ​​​ ನರೇಗಾ ಅಕ್ರಮ, ಉಸ್ತುವಾರಿ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದೇನು?

ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಈ ಬಗ್ಗೆ ಪ್ರತಿಯಿಸಿದ್ದಾರೆ - ಅಕ್ರಮದ ಫೈನಲ್ ರಿಪೋರ್ಟ್ ಕೂಡ ಸರ್ಕಾರದ ಮಟ್ಟದಲ್ಲಿ ಪರಿಶೀಲನಾ ಹಂತದಲ್ಲಿದೆ. ಅದು ಕ್ಲಿಯರ್ ಆಗುತ್ತಿದ್ದಂತೆಯೇ ಪಿಡಿಓಗಳು ಹಾಗೂ ಅದರಲ್ಲಿ ಶಾಮೀಲಾದ ಉನ್ನತಮಟ್ಟದ ಅಧಿಕಾರಿಗಳ ವಿರುದ್ಧವೂ ಕ್ರಮಕೈಗೊಳ್ಳಲಾಗುತ್ತೆ ಎಂದಿದ್ದಾರೆ.

ದೇವದುರ್ಗದಲ್ಲಿ ಕೋಟ್ಯಂತರ ರೂ​​​ ನರೇಗಾ ಅಕ್ರಮ, ಉಸ್ತುವಾರಿ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದೇನು?
ನರೇಗಾ ಅಕ್ರಮ: ಉಸ್ತುವಾರಿ ಸಚಿವ ಶರಣ ಪಾಟೀಲ್ ಹೇಳಿದ್ದೇನು?
Follow us
ಭೀಮೇಶ್​​ ಪೂಜಾರ್
| Updated By: ಸಾಧು ಶ್ರೀನಾಥ್​

Updated on: Jan 31, 2024 | 11:01 AM

ಅದು ಸರ್ಕಾರದ ಯೋಜನೆಯ ಕೋಟಿ ಕೋಟಿ ಹಣ ಭ್ರಷ್ಟಾಚಾರ ಪ್ರಕರಣ. ಬಡವರ ದುಡ್ಡು ನುಂಗಿ ನೀರು ಕುಡಿದಿದ್ದೋರಿಗೆ ಕ್ರಿಮಿನಲ್ ಕೇಸ್ ಉರುಳು ಸುತ್ತಿಕೊಂಡಿದ್ದು, ಭ್ರಷ್ಟರಿಗೆ ನಡುಕ ಶುರುವಾಗಿದೆ. ಹೌದು.. ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನಲ್ಲಿ ಇಡೀ ರಾಜ್ಯದಲ್ಲೇ ನಡೆಯಲಾರದಂತ ನರೇಗಾ ಯೋಜನೆಯ ಬೃಹತ್ ಹಗರಣ ನಡೆದಿದೆ.. ದೇವದುರ್ಗ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ‌ ಸುಮಾರು 32 ಪಿಡಿಓಗಳನ್ನ ರಾಯಚೂರು ಜಿಲ್ಲಾ ಪಂಚಾಯತ ಸಿಇಓ ಪಾಂಡ್ವೆ ರಾಹುಲ್ ತುಕಾರಾಮ್ ಅಮಾನತ್ತುಗೊಳಿಸಿದ್ದಾರೆ. ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿಯ ಮಧ್ಯಂತರ ವರದಿ ಆಧಾರದಲ್ಲಿ ಕ್ರಮಕೈಗೊಳ್ಳುವಂತೆ ಸರ್ಕಾರ ಸೂಚಿಸಿತ್ತು ಇದರ ಬೆನ್ನಲ್ಲೇ ಅಮಾನತ್ತಾದ ಪಿಡಿಓಗಳಿಗೆ ಕ್ರಿಮಿನಲ್ ಕೇಸ್ ಉರುಲು ಸುತ್ತುಕೊಂಡಿದೆ. ಯಾವ ಕ್ಷಣದಲ್ಲಿ ಬೇಕಾದ್ರೂ ಪಿಡಿಓಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗೊ ಸಾಧ್ಯತೆಯಿದೆ.

ವಾಓ-2; ಹೌದು‌..ದೇವದುರ್ಗ ತಾಲ್ಲೂಕು ಪಂಚಾಯತ ವ್ಯಾಪ್ತಿಯ 33 ಗ್ರಾ. ಪಂಚಾಯಿತಿಗಳಲ್ಲಿ ಒಟ್ಟು 5385 ಕಾಮಗಾರಿಗಳಲ್ಲಿ ಭಾರೀ ಅಕ್ರಮ ನಡೆದಿತ್ತು..ಆ ಪೈಕಿ 32 ಗ್ರಾಮ ಪಂಚಾಯತಿಗಳ ಕಾಮಗಾರಿಗಳ ಸಾಮಾಗ್ರಿಗಳನ್ನು ಒಂದೇ ಸಂಸ್ಥೆಯಲ್ಲಿ ಖರೀದಿಸಲಾಗಿತ್ತು. ಒಟ್ಟು 102.32 ಕೋಟಿ ರೂ. ಅನ್ನ ಮಾರುತೇಶ್ವರ ಎಂಟರ್ ಪ್ರೈಸಸ್ ಅನ್ನೋ ಒಂದೇ ಸಂಸ್ಥೆಗೆ ಪಾವತಿಸಿರೊ ಸತ್ಯ ಬಯಲಾಗಿತ್ತು. ಕಡತಗಳನ್ನು ನಿರ್ವಹಿಸದೇ 32.51 ಕೋಟಿ ರೂ.ಪಾವತಿ, ಅಂದಾಜು ಮೊತ್ತಕ್ಕಿಂತ ಹೆಚ್ಚುವರಿಯಾಗಿ 11.64 ಕೋಟಿ ಪಾವತಿ ಮಾಡಿರುವುದು ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ನರೇಗಾ ಯೋಜನೆಯಲ್ಲಿ ಅಕ್ರಮ; ಕಾಮಗಾರಿಯನ್ನೇ ನಡೆಸದೆ ಹಣ ಗುಳುಂ ಮಾಡಿದ ಗ್ರಾಪಂ ಅಧಿಕಾರಿಗಳು !

ಸರ್ಕಾರಕ್ಕೆ 5.10 ಕೋಟಿ ತೆರಿಗೆ ವಂಚಿಸಲಾಗಿತ್ತು. ನಕಲಿ ಜಾಬ್ ಕಾರ್ಡ್ ಸೃಷ್ಟಿಸಿ,ಫಲಾನುಭವಿಗಳಿಗೆ ಹಣ ಹಾಕದೇ ಸಾಮಾಗ್ರಿ ಪೂರೈಕೆದಾರರಿಗೆ ಹಣ ಸಂದಾಯಿಸಿದ್ದಲ್ಲದೇ, ಶೇಕಡಾ 95 ರಷ್ಟು ಕಾಮಗಾರಿಗಳಿಗೆ ನಾಮಫಲಕ ಅಳವಡಿಸದೇ ಪ್ರತಿ ನಾಮಫಲಕಕ್ಕೆ 5000 ರೂ.ಪಾವತಿಸಲಾಗಿತ್ತು..ಹೀಗೆ ವಿವಿಧ ವಿಧಾನಗಳ ಮೂಲಕ 49 ಕೋಟಿ 27 ಲಕ್ಷ ಹಣ ದುರುಪಯೋಗವಾಗಿರೋದನ್ನ ಬಯಲಾಗಿತ್ತು..

ಸದ್ಯ ಇವೆಲ್ಲಾ ಅಕ್ರಮಗಳ ಬೆನ್ನಲ್ಲೇ ತನಿಖೆ ಚುರುಕುಗೊಂಡಿದ್ದು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಪ್ರತಿಯಿಸಿದ್ದಾರೆ. ಅಕ್ರಮದ ಫೈನಲ್ ರಿಪೋರ್ಟ್ ಕೂಡ ಸರ್ಕಾರದ ಮಟ್ಟದಲ್ಲಿ ಪರಿಶೀಲನಾ ಹಂತದಲ್ಲಿದೆ..ಅದು ಕ್ಲಿಯರ್ ಆಗುತ್ತಿದ್ದಂತೆಯೇ ಪಿಡಿಓಗಳು ಹಾಗೂ ಅಧರಲ್ಲಿ ಶಾಮೀಲಾದ ಉನ್ನತ ಮಟ್ಟದ ಅಧಿಕಾರಿಗಳ ವಿರುದ್ಧವೂ ಕ್ರಮಕೈಗೊಳ್ಳಲಾಗುತ್ತೆ ಎಂದಿದ್ದಾರೆ. ಅದನೆ ಇರ್ಲಿ ಸರ್ಕಾರ ಮುಲಾಜಿಲ್ಲದೇ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು ದುರುಪಯೋಗ ಪಡಿಸಿಕೊಳ್ಳಲಾದ ಹಣ ವಸೂಲು ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ