- Kannada News Photo gallery More Than 3 Crore money collected from Sri Raghavendra Swamy Mutt raichur news
Sri Raghavendra Swamy Mutt: 33 ದಿನಗಳಲ್ಲೇ ರಾಯರ ಮಠಕ್ಕೆ ಕೋಟಿ ಕೋಟಿ ಕಾಣಿಕೆ
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿ ತಾಲೂಕಿನ ತುಂಗಭದ್ರಾ ನದಿಯ ದಡದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಕೇವಲ 33 ದಿನಗಳಲ್ಲಿ ಕೋಟಿ ಕೋಟಿ ಆದಾಯ ಹರಿದು ಬಂದಿದೆ. ಮಂತ್ರಾಲಯದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಮಠದ ನೂರಾರು ಸಿಬ್ಬಂದಿಯಿಂದ ದೇವರ ಹುಂಡಿ ಎಣಿಕೆ ಕಾರ್ಯ ನಡೆಯಿತು.
Updated on: Jan 30, 2024 | 11:11 AM

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿ ತಾಲೂಕಿನ ತುಂಗಭದ್ರಾ ನದಿಯ ದಡದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಕೇವಲ 33 ದಿನಗಳಲ್ಲಿ ಕೋಟಿ ಕೋಟಿ ಆದಾಯ ಹರಿದು ಬಂದಿದೆ.

ರಾಯಚೂರಿನ ಮಂತ್ರಾಲಯದ ರಾಯರ ಮಠದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದೆ. ರಾಯರ ಮಠದಲ್ಲಿ 33 ದಿನದಲ್ಲಿ 3 ಕೋಟಿ 83 ಲಕ್ಷದ 70 ಸಾವಿರ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.

ಸಂಕ್ರಾಂತಿ ಹಬ್ಬದ ಹಿನ್ನೆಲೆ ಈ ಬಾರಿ ಹೆಚ್ಚಿನ ಪ್ರಮಾಣದ ಕಾಣೆಕೆ ಸಂಗ್ರಹವಾಗಿದೆ. ಡಾ.ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಎಣಿಕೆ ಕಾರ್ಯ ನಡೆಯಿತು. ರಾಯರ ಮಠಕ್ಕೆ ಕೋಟಿ ಕೋಟಿ ಆದಾಯ ಹರಿದು ಬಂದಿದೆ.

ಮಂತ್ರಾಲಯದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಮಠದ ನೂರಾರು ಸಿಬ್ಬಂದಿಯಿಂದ ದೇವರ ಹುಂಡಿ ಎಣಿಕೆ ಕಾರ್ಯ ನಡೆಯಿತು. ಸಿಸಿಟಿವಿ ಕ್ಯಾಮರಾ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ನಡೆಯಿತು.

ಶ್ರೀರಾಘವೇಂದ್ರ ಸ್ವಾಮಿ ಮಠವು ರಾಯರ ಮಠವೆಂದೇ ಪ್ರಸಿದ್ದಿಪಡೆದಿದೆ. ಈ ಮಠವನ್ನು ಹಿಂದೆ ಕುಂಭಕೋಣಂ ಮಠ ಅಥವಾ ವಿಜಯೇಂದ್ರ ಮಠ, ದಕ್ಷಿಣಾದಿ ಕವೀಂದ್ರ ಮಠ ಅಥವಾ ದಕ್ಷಿಣಾದಿ ಮಠ ಎಂದು ಕರೆಯಲಾಗುತ್ತಿತ್ತು.

ರಾಯರೆಂದೇ ಕರೆಯಲ್ಪಡುವ ರಾಘವೇಂದ್ರ ಸ್ವಾಮಿಗಳ ವೃಂದಾವನ ಈ ಮಠದಲ್ಲಿದೆ. ಹಿಂದೂ ವಿದ್ವಾಂಸರು, ದೇವತಾ ಮನುಷ್ಯರು ಮತ್ತು ತತ್ವಜ್ಞಾನಿಗಳಾಗಿದ್ದರು. ರಾಘವೇಂದ್ರ ಸ್ವಾಮಿಗಳು 1595 - 1671 ರ ನಡುವೆ ಅನೇಕ ಪವಾಡಗಳನ್ನು ಮಾಡಿದರು.



