ಚಿನ್ನಾಭರಣ ಹಾಕೊಂಡು ಓಡಾಡಿದ್ರೆ ದಂಡ: ಪೊಲೀಸರ ಸೋಗಿನಲ್ಲಿ ಸುಲಿಗೆ

ಪೊಲೀಸರಂತೆ ವೇಷ ಧರಿಸಿ ಮಹಿಳೆಯರ ಚಿನ್ನದ ಆಭರಣಗಳನ್ನು ಕದಿಯುತ್ತಿದ್ದ ಅಲಿ ಮತ್ತು ಅಬ್ಬಾಸ್ ಎಂಬ ಇಬ್ಬರು ಆರೋಪಿಗಳನ್ನು ರಾಯಚೂರಿನ ಪಶ್ಚಿಮ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಬಳಿ ಕಳ್ಳತನ ಮಾಡಿದ್ದ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಯಚೂರಿನ ಪಶ್ಚಿಮ ಪೊಲೀಸ್​ ಠಾಣೆ ಪ್ರಕರಣ ದಾಖಲಾಗಿದೆ.

ಚಿನ್ನಾಭರಣ ಹಾಕೊಂಡು ಓಡಾಡಿದ್ರೆ ದಂಡ: ಪೊಲೀಸರ ಸೋಗಿನಲ್ಲಿ ಸುಲಿಗೆ
ರಾಯಚೂರು ಪಶ್ಚಿಮ ಪೊಲೀಸ್​ ಠಾಣೆ
Edited By:

Updated on: Jun 14, 2025 | 4:08 PM

ರಾಯಚೂರು, ಜೂನ್​ 14: ಮೈಮೇಲೆ ಚಿನ್ನಾಭರಣ ಹಾಕಿಕೊಂಡು ಓಡಾಡಿದರೆ ದಂಡ ಹಾಕುತ್ತೇವೆ ಅಂತ ಪೊಲೀಸರ ಹೆಸರಿನಲ್ಲಿ ಹೆಣ್ಣುಮಕ್ಕಳಿಗೆ ಹೆದರಿಸಿ, ಅವರ ಆಭರಣಗಳನ್ನು ಕದಿಯುತ್ತಿದ್ದ ಆರೋಪಿಗಳನ್ನು ರಾಯಚೂರಿನ (Raichur) ಪಶ್ಚಿಮ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ. ಅಲಿ ಮತ್ತು ಅಬ್ಬಾಸ್ ಬಂಧಿತರು.

ರಾಯಚೂರು ನಗರದಲ್ಲಿ ಇತ್ತೀಚೆಗೆ ವೃದ್ಧೆ ಪದ್ಮಾ ಎಂಬವರು ರಸ್ತೆಯಲ್ಲಿ ಹೋಗುವಾಗ ಆರೋಪಿಗಳು ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಪದ್ಮಾ ಅವರು ಒಳ ರಸ್ತೆಯಲ್ಲಿ ಹೋಗುತ್ತಿದ್ದಾಗ, ಅವರ ಬಳಿ ಬಂದ ಆರೋಪುಗಳು ನಾವು ಪೊಲೀಸರು, ಈ ರೀತಿ ಮೈಮೇಲೆ ಒಡವೆಗಳನ್ನು ಹಾಕಿಕೊಂಡು ರಸ್ತೆಯಲ್ಲಿ ಓಡಾಡಿದರೆ ನಿಮಗೆ ಹಿರಿಯ ಅಧಿಕಾರಿಗಳು ಎರಡು ಸಾವಿರ ದಂಡ ಹಾಕುತ್ತಾರೆ. ಹೀಗಾಗಿ, ನೀವು ಚಿನ್ನಾಭರಣವನ್ನು ತೆಗೆದುಟ್ಟುಕೊಳ್ಳಿ ಎಂದು ಹೇಳಿದ್ದಾರೆ. ಆಗ ಪದ್ಮಾ ಅವರು ತಮ್ಮ ಕೊರಳಲ್ಲಿದ್ದ 2 ಲಕ್ಷ ರೂ. ಮೌಲ್ಯದ 20 ಗ್ರಾಂ ಚಿನ್ನದ ಸರವನ್ನು ಬಿಚ್ಚುತ್ತಿದ್ದಂತೆ ಆರೋಪಿಗಳು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಹಾಡಹಗಲೇ ಆರೋಪಿಗಳಾದ ಅಬ್ಬಾಸ್ ಹಾಗೂ ಅಲಿ ಇಬ್ಬರೂ ಚಿನ್ನದ ಸರ ಸುಲಿಗೆ ಮಾಡಿ ಬೈಕ್​ನಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ರಾಯಚೂರಿನ ಪಶ್ಚಿಮ ಠಾಣೆ ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಅಲರ್ಟ್ ಆದ, ಅಧಿಕಾರಿಗಳು ವಿಶೇಷ ತಂಡ ರಚಿಸಿಕೊಂಡು ಫಿಲ್ಡ್​ಗೆ ಇಳಿದಿದರು.

ಇದನ್ನೂ ಓದಿ
ಚಾಲಕನ ಹುಚ್ಚು ಸಾಹಸ: ಹಳ್ಳದಲ್ಲಿ ಸಿಲುಕಿದ ಜನರಿದ್ದ ಟ್ರ್ಯಾಕ್ಟರ್
ತುಂಬಿ ಹರಿಯುತ್ತಿರುವ ಗೊನ್ವಾರ ಗ್ರಾಮ ಹೊರವಲಯದಲ್ಲಿರುವ ಹೊಳೆ
ಆರ್​ಸಿಬಿ ಫೈನಲ್​ಗೇರಿದ ಖುಷಿಯಲ್ಲಿ ಪೆಟ್ರೋಲ್ ಚೀಲ ಸಿಡಿಸಿದ 8 ಯುವಕರ ಬಂಧನ
ರಜೆ ಮೇಲೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ವೈದ್ಯ

ಆರೋಪಿಗಳಿಗಾಗಿ ದೇವದುರ್ಗ ತಾಲೂಕಿನ ಗಬ್ಬೂರು ಠಾಣಾ ವ್ಯಾಪ್ತಿಯ ಹೆದ್ದಾರಿಯಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿಕೊಂಡು ಆರೊಪಿಗಳಿಗೆ ತಪಾಸಣೆ ನಡೆಸುತ್ತಿದ್ದರು. ನಾಕಾ ಬಂದಿಯಲ್ಲಿ ಪೊಲೀಸರ ಕೈಗೆ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು ಈ ಹಿಂದೆ ಕೂಡ ಪುಣೆಯಲ್ಲೂ ಇದೆರೀತಿ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಸುಲಿಗೆ ಮಾಡಿದ್ದು ಬೆಳಕಿಗೆ ಬಂದಿದೆ. ಸದ್ಯ ಇಬ್ಬರು ಆರೊಪಿಗಳನ್ನು ಬಂಧಿಸಿರುವ ಪೊಲೀಸರು ಸುಲಿಗೆ ಮಾಡಿದ್ದ ಚಿನ್ನದ ಸರ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ರಾಯಚೂರು: ಕಲುಷಿತ ನೀರು ಸೇವಿಸಿ 30 ಜನರು ಅಸ್ವಸ್ಥ

ಈ ಘಟನೆ ಮಾಸುವ ಮುನ್ನವೇ ಸಿಂಧನೂರು ಪಟ್ಟಣದಲ್ಲಿ ಇದೇ ಮಾದರಿಯಲ್ಲಿ ಒಂಟಿ ಮಹಿಳೆಯ ಚಿನ್ನದ ಸರಗಳ್ಳತ ಮಾಡಲಾಗಿದೆ. ಇದೇ ಜೂನ್ 11 ರಂದು ಕೃಷ್ಣವೇಣಿ ಎಂಬವರು ಒಬ್ಬಂಟಿಯಾಗಿ ಹೋಗುತ್ತಿದ್ದಾಗ ಅವರ ಎದುರಿಗೆ ಬಂದಿದ್ದ ಸರಗಳ್ಳರು ಅವರ ಬಳಿ ಕುತ್ತಿಗೆಯಲ್ಲಿದ್ದ 30 ಗ್ರಾಂ ಚಿನ್ನದ ಸರ ಎಗರಿಸಿ ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ಸಿಂಧನೂರು ಟೌನ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ