Raichur News: ಜೀವದ ಹಂಗು ತೊರೆದು ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳು: ಸೇತುವೆ ಇಲ್ಲದೇ ವಿದ್ಯಾರ್ಥಿಗಳ ಪರದಾಟ
ರಾತ್ರಿ ಊಟ ಸೇವಿಸಿದ್ದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿರುವಂತಹ ಘಟನೆ ಹಳಿಯಾಳದ ಪರಿಶಿಷ್ಟ ವರ್ಗ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ನಡೆದಿದೆ.

ರಾಯಚೂರು: ಹಳ್ಳ ದಾಟಿ ಶಾಲೆಗೆ ಹೋಗಲು ವಿದ್ಯಾರ್ಥಿಗಳು (Students) ಪರದಾಡುತ್ತಿರುವಂತಹ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ದೇವರಗುಡಿ ಗ್ರಾಮದಲ್ಲಿ ನಡೆದಿದೆ. ಪ್ಯಾಂಟ್ ಬಿಚ್ಚಿ ಕೈಯಲ್ಲಿ ಹಿಡಿದುಕೊಂಡು ಮಕ್ಕಳು ಹಳ್ಳ ದಾಟುವಂತಹ ಪರಿಸ್ಥತಿ ನಿರ್ಮಾಣವಾಗಿದೆ. ಜಿಲ್ಲೆಯ ದೇವರಗುಡಿ ಗ್ರಾಮದಿಂದ ಪಗಡದಿನ್ನಿ ಗ್ರಾಮದ ಶಾಲೆಗೆ ಹೈಸ್ಕೂಲ್ ವಿದ್ಯಾರ್ಥಿಗಳು ಹೋಗುತ್ತಿದ್ದು, 1-7 ವರೆಗೆ ದೇವರಗುಡಿಯಲ್ಲೇ ಪ್ರಾಥಮಿಕವರೆಗಿದೆ. 8-10 ಹೈಸ್ಕೂಲ್ಗಾಗಿ ಪಗಡದಿನ್ನಿ ಗ್ರಾಮಕ್ಕೆ ವಿದ್ಯಾರ್ಥಿಗಳು ಹೋಗುತ್ತಾರೆ. ದೇವರಗುಡಿ, ಮಲ್ಲಾಪುರ ಕ್ಯಾಂಪ್, ದುಗ್ಗಮ್ಮನ ಗುಂಡಾ ಸೇರಿ ನಾಲ್ಕೈದು ಹಳ್ಳಿಗಳ ಮಕ್ಕಳ ಸ್ಥಿತಿ ಅಯೋಮಯವಾಗಿದ್ದು, ಸೇತುವೆ, ರಸ್ತೆ ಇಲ್ಲದ ಹಿನ್ನೆಲೆ ಪ್ಯಾಂಟ್ ಕಳಚಿ ಅರೆಬೆತ್ತಲೆಯಾಗಿ ಮಕ್ಕಳು ಹಳ್ಳವನ್ನು ದಾಟುತ್ತಾರೆ. ಜೊತೆಗೆ ಜೀವ ಪಣಕ್ಕಿಟ್ಟು ಶಾಲೆಗೆ ತೆರಳಬೇಕಾದ ದುಸ್ಥಿತಿ ನಿರ್ಮಾಣವಾಗಿದ್ದು, ಸೂಕ್ತ ರಸ್ತೆ, ಸೇತುವೆ ಇಲ್ಲದ ಕಾರಣ ಹಳ್ಳ ದಾಟಿಕೊಂಡು ಹೋಗೊ ಅನಿವಾರ್ಯತೆ ಉಂಟಾಗಿದೆ. ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳುವಂತೆ ದೇವರಗುಡಿ, ಸೇರಿ ಸುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹಾಸ್ಟೆಲ್ನಲ್ಲಿ ಊಟ ಸೇವಿಸಿದ್ದ ವಿದ್ಯಾರ್ಥಿಗಳಿಗೆ ವಾಂತಿ-ಭೇದಿ
ಕಾರವಾರ: ರಾತ್ರಿ ಊಟ ಸೇವಿಸಿದ್ದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿರುವಂತಹ ಘಟನೆ ಹಳಿಯಾಳದ ಪರಿಶಿಷ್ಟ ವರ್ಗ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ನಡೆದಿದೆ. ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ವಾಂತಿ-ಭೇದಿ ಉಂಟಾಗಿದ್ದು, ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿ, ಚಿಕಿತ್ಸೆ ನೀಡಲಾಗಿದೆ. ಹಾಸ್ಟೆಲ್ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.