
ರಾಯಚೂರು, ಡಿಸೆಂಬರ್ 01: ಲಾರಿ ಹರಿದು ರಸ್ತೆ (Accident) ಬದಿ ನಿಂತಿದ್ದ ತಂದೆ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿರುವಂತಹ (death) ಘಟನೆ ರಾಯಚೂರು ಹೊರವಲಯದ ಯರಮರಸ್ ಬೈಪಾಸ್ನಲ್ಲಿ ನಡೆದಿದೆ. ತಂದೆ ನಾಗಪ್ಪ(65), ಪುತ್ರ ರಮೇಶ್(46) ಮೃತರು. ರಸ್ತೆ ಬದಿ ಮೊಬೈಲ್‌ನಲ್ಲಿ ಮಾತನಾಡುತ್ತ ನಿಂತಿದ್ದ ವೇಳೆ ದುರಂತ ಸಂಭವಿಸಿದೆ. ಏಕಾಏಕಿ ತಂದೆ, ಮಗನ ಲಾರಿ ಹರಿದಿದ್ದರಿಂದ ಮೃತದೇಹಗಳು ಛಿದ್ರವಾಗಿದೆ. ರಾಯಚೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನು ಮತ್ತೊಂದು ಪ್ರಕರಣದಲ್ಲಿ ಹುಲ್ಲಿನ ಟ್ರಾಕ್ಟರ್ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದ ಉಪನ್ಯಾಸಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಕಲಮಂಗಿ ಬಳಿ ನವೆಂಬರ್ 24ರಂದು ಘಟನೆ ನಡೆದಿತ್ತು.
ಇದನ್ನೂ ಓದಿ: ರಸ್ತೆಗುಂಡಿ ತಪ್ಪಿಸಲು ಹೋಗಿ ಆನೇಕಲ್ ಬಳಿ ಕೆರೆಗೆ ಬಿದ್ದ ಲಾರಿ: ಮುಂದಾಗಿದ್ದು ದುರಂತ
ಅಕ್ಕಮಹಾದೇವಿ (36) ಮೃತ ಖಾಸಗಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ. ಘಟನೆ ನಡೆದ ದಿನ ಸಂಬಂಧಿಕರ ವಿವಾಹ ಸಮಾರಂಭಕ್ಕೆ ಹೋಗಿ ವಾಪಸ್ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ರಾತ್ರಿ ವೇಳೆ ಹುಲ್ಲಿನ ಮೇವು ಸಾಗಾಟ ಮಾಡುತ್ತಿದ್ದ ಟ್ರಾಕ್ಟರ್ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ: ಬೆಳಗ್ಗೆ ನಮಾಜ್ಗೆ ಬಂದವನ ಅಟ್ಟಾಡಿಸಿ ಚುಚ್ಚಿ ಚುಚ್ಚಿ ಕೊಂದ ದುಷ್ಕರ್ಮಿಗಳು: ಸಿಸಿಟಿವಿ ವಿಡಿಯೋ ನೋಡಿ ಬೆಚ್ಚಿಬಿದ್ದ ಮೈಸೂರು ಜನ
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಉಪನ್ಯಾಸಕಿಗೆ ಕಳೆದ ಒಂದು ವಾರದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೃತರ ಪತಿ ವೀರಭದ್ರ, ಇಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ. ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ಬದಿಯ ಕಾಂಕ್ರೀಟ್ ಕಟ್ಟೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿರುವಂತಹ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಉಡೆಗೋಳ ಬಳಿ ನಡೆದಿದೆ. ಶಿವಕುಮಾರ್(17), ಶ್ರೀಕಾಂತ್(18) ಮೃತರು. ಕೆಂಚನಗುಡ್ಡ ಗ್ರಾಮದಿಂದ ಮಣ್ಣೂರಿಗೆ ಹೊರಟಿದ್ದರು. ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.