ಹನುಮನ ಪೂಜೆಗೆಂದು ನದಿಗೆ ನೀರು ತರಲು ಹೋದ ಯುವಕರು ಅಪಘಾತದಲ್ಲಿ ಸಾವು
ಇಂದು ಹನುಮ ಜಯಂತಿ. ಹೀಗಾಗಿ ಹನುಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲು ಕೃಷ್ಣಾ ನದಿಯಿಂದ ಬಿಂದಿಗೆಯಲ್ಲಿ ನೀರು ತರಲು ಯುವಕರು ಹೋಗುತ್ತಿದ್ದರು. ಈ ವೇಳೆ ಬೊಲೆರೊ ವಾಹನ ಡಿಕ್ಕೆ ಹೊಡೆದ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಹೆಗಸನಹಳ್ಳಿ ಗ್ರಾಮದ ಬಳಿ ನಡೆದಿದೆ.
ರಾಯಚೂರು, ಏಪಿಲ್ 23: ಹನುಮನ (Lord Hanuman) ಪೂಜೆಗಾಗಿ ಕೃಷ್ಣಾ ನದಿಯಿಂದ (Krishna River) ನೀರು ತರಲು ಹೊರಟಿದ್ದವರ ಮೇಲೆ ಬೊಲೆರೊ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದಾರೆ. ರಾಯಚೂರು (Raichur) ತಾಲೂಕಿನ ಹೆಗಸನಹಳ್ಳಿ ಬಳಿ ಘಟನೆ ನಡೆದಿದೆ. ಹೆಗಸನಹಳ್ಳಿ ಗ್ರಾಮದ ಅಯ್ಯನಗೌಡ (28), ಮಹೇಶ್ (24), ಉದಯ್ ಕುಮಾರ್ (28) ಮೃತ ದುರ್ದೈವಿಗಳು. ಭೂಷಣ್ ಸೇರಿದಂತೆ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇಂದು (ಏ.23) ಹುನುಮ ಜಯಂತಿ, ಹೀಗಾಗಿ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಕ್ಕೆ, ಪಕ್ಕದ ಕೃಷ್ಣಾ ನದಿಯಿಂದ ಬಿಂದಿಗೆಯಲ್ಲಿ ನೀರು ತರಲು ಯುವಕರು ಹೋಗುತ್ತಿದ್ದರು.
ಈ ವೇಳೆ ಕೋಳಿ ಸಾಗಿಸುತ್ತಿದ್ದ ಬೊಲೆರೊ ವಾಹನ ಡಿಕ್ಕಿಯಾದ ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಸ್ಥಳದಲ್ಲೇ ವಾಹನ ಬಿಟ್ಟು ಚಾಲಕ ಮಧುಸೂದನ್ ಗೌಡ ಪರಾರಿಯಾಗಲು ಯತ್ನಿಸಿದನು. ಬೆನ್ನಟ್ಟಿದ್ದ ಗ್ರಾಮಸ್ಥರು ಚಾಲಕನನ್ನು ಹಿಡಿದಿದ್ದಾರೆ. ಬಳಿಕ ಚಾಲಕ ಮಧುಸೂದನ್ ಗೌಡನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಹೆಚ್ಚಾದ ಅಪಘಾತ ಪ್ರಕರಣಗಳು; ಕೇವಲ ಮೂರು ದಿನದಲ್ಲಿ 25 ಸಾವು
ಕೋಳೆ ಸಾಗಿಸುತ್ತಿದ್ದ ಬೊಲೆರೊ ವಾಹನ ತೆಲಂಗಾಣ ನೋಂದಣಿಯಾಗಿದೆ. ಪೊಲೀಸರು ಬೊಲೆರೊ ವಾಹನವನ್ನು ಜಪ್ತಿ ಮಾಡಿದ್ದಾರೆ. ಶಕ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೆಳಗಾವಿಯಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು
ಬೆಳಗಾವಿ: ಬೈಲಹೊಂಗಲ ತಾಲೂಕಿನ ಹನುಮನಹಟ್ಟಿ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ರೈತ ಮೃತಪಟ್ಟಿದ್ದಾನೆ. ಕೆಂಚಪ್ಪ ಕಾವಲದ (32) ಮೃತ ರೈತ. ನೇಸರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ