Raichur News: ಕೃಷ್ಣಾ ನದಿ ತೀರದಲ್ಲಿ ಬೀಡುಬಿಟ್ಟ 20ಕ್ಕೂ ಹೆಚ್ಚು ಮೊಸಳೆಗಳ ಹಿಂಡು: ಆತಂಕಕ್ಕೊಳಗಾದ ಜನರು
ರಾಯಚೂರು ತಾಲ್ಲೂಕಿನ ಆತ್ಕೂರು ಗ್ರಾಮದ ಕೃಷ್ಣಾ ನದಿ ತೀರದಲ್ಲಿ 20ಕ್ಕೂ ಹೆಚ್ಚು ಮೊಸಳೆಗಳ ದಂಡು ಒಂದೇ ಕಡೆ ಬೀಡುಬಿಟ್ಟಿವೆ. ಆ ವಿಡಿಯೋ ವೈರಲ್ ಆಗಿತ್ತು. ಈಗ ಆ ಪ್ರದೇಶದಲ್ಲಿ ಓಡಾಡದಂತೆ ಸೂಚಿಸಲಾಗಿದೆ.
ರಾಯಚೂರು, ಜುಲೈ 27: ಮಳೆ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆ ಮೊಸಳೆ (crocodiles) ಗಳ ದಂಡೇ ದಡದತ್ತ ದೌಡಾಯಿಸುತ್ತಿವೆ. ನದಿ ದಡದಲ್ಲಿ ಕೃಷಿ ಮಾಡುವ ರೈತರು, ತೆಪ್ಪದಲ್ಲಿ ಓಡಾಡುವ ಮಕ್ಕಳು, ವೃದ್ಧರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಇದೇ ಭಯದ ಬೆನ್ನಲ್ಲೇ ಈಗ ಆ ಊರಲ್ಲಿ 20 ಮೊಸಳೆಗಳ ಹಿಂಡೆ ಬೀಡುಬಿಟ್ಟಿದೆ.
ರಾಜ್ಯದೆಲ್ಲೆಡೆ ಮಳೆ ಅಬ್ಬರಿಸಿ ಬೊಬ್ಬರಿಯುತ್ತಿದೆ. ಇತ್ತ ಇಷ್ಟು ದಿನ ಸೈಲೆಂಟ್ ಆಗಿದ್ದ ಮಳೆರಾಯ ಈಗ ರಾಯಚೂರು ಜಿಲ್ಲೆಯಲ್ಲೂ ಅಬ್ಬರಿಸಲು ಶುರು ಮಾಡಿದ್ದಾನೆ. ಮತ್ತೊಂದು ಕಡೆ ಮಾಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ಬಾಗಲಕೋಠೆಯ ಆಲಮಟ್ಟಿ ಜಲಾಶಯಕ್ಕೆ ನೀರು ಹರಿಬಿಡಲಾಗಿತ್ತು. ಇದರ ಬೆನ್ನಲ್ಲೇ ಈಗ ಅಲ್ಲಿಂದ ಯಾದಗಿರಿಯ ಬಸವಸಾಗರ ಜಲಾಶಯಕ್ಕೆ ನೀರು ಬಿಡಲಾಗಿದೆ.
ಇದನ್ನೂ ಓದಿ: ರಾಯಚೂರಿನಲ್ಲಿ ಭೀಕರ ಅಪಘಾತ: ಜಾಗ್ವಾರ್ ಕಾರು ಗುದ್ದಿದ ರಭಸಕ್ಕೆ 15 ಅಡಿ ದೂರ ಹಾರಿ ಬಿದ್ದ ವಿದ್ಯಾರ್ಥಿನಿ, ವಿಡಿಯೋ ಇಲ್ಲಿದೆ
ನಿನ್ನೆಯಿಂದ ಈಗ ಬಸವಸಾಗರ ಜಲಾಶಯದಿಂದ ಹೆಚ್ಚುವರಿ ನೀರು ಬಿಡಲಾಗಿದ್ದು, ಜಿಲ್ಲೆಯ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲ್ಲೂಕಿನ ವ್ಯಾಪ್ತಿ ಅಲರ್ಟ್ ಮಾಡಲಾಗಿದೆ. ಕೃಷ್ಣಾ ನದಿ ತಿರದ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಸಿಲು ಸೂಚಿಸಲಾಗಿದೆ. ಈ ಮಧ್ಯೆ ರಾಯಚೂರು ತಾಲ್ಲೂಕಿನ ಆತ್ಕೂರು ಗ್ರಾಮದ ಕೃಷ್ಣಾ ನದಿ ತೀರದಲ್ಲಿ 20ಕ್ಕೂ ಹೆಚ್ಚು ಮೊಸಳೆಗಳ ದಂಡು ಒಂದೇ ಕಡೆ ಬಂದು ಕೂತಿವೆ. ಆ ವಿಡಿಯೋ ವೈರಲ್ ಆಗಿತ್ತು.
ಈಗ ಆ ಪ್ರದೇಶದಲ್ಲಿ ಓಡಾಡದಂತೆ ಸೂಚಿಸಲಾಗಿದೆ. ಆತ್ಕೂರು ಬಳಿಯ ಕುರುಕವಕಲಾ ನಡುಗಡ್ಡೆ ಪ್ರದೇಶಕ್ಕೆ ಬ್ರಿಡ್ಜ್ ಇಲ್ಲದಿರುವುದರಿಂದ ಸಾಕಷ್ಟು ಸಮಸ್ಯೆ ಉಂಟಾಗಿದೆ ಎನ್ನಲಾಗುತ್ತಿದೆ.
ಕೃಷ್ಣಾ ನದಿ ತೀರದಲ್ಲಿ ಹರಿವು ಹೆಚ್ಚಾಗುತ್ತಿರುವುದರಿಂದ ಮೊಸಳೆಗಳು ಆಹಾರಕ್ಕಾಗಿ ನದಿ ದಡದತ್ತ ಬರುತ್ತಿವೆ. ರಾಯಚೂರು ತಾಲ್ಲೂಕಿನ ಆತ್ಕೂರು, ಕುರುವಕಲ ಸೇರಿ ನಾಲ್ಕೈದು ಹಳ್ಳಿಗಳ ಜನರ ಸ್ಥಿತಿ ಮಳೆ ಬಂದಾಗ ಅಯೋಮಯವಾಗುತ್ತೆ. ಒಂದೊಂದು ಕಡೆ ಒಂದು ಅಥವಾ ಎರಡು ಮೊಸಳೆಗಳಿದ್ರೆ, ಮತ್ತೊಂದು ಕಡೆ ಹತ್ತಾರು ಮೊಸಳೆಗಳ ದಂಡೆ ಬೀಡು ಬಿಟ್ಟಿರತ್ತೆ.
ಇದನ್ನೂ ಓದಿ: Raichur: ಗೃಹ ಲಕ್ಷ್ಮೀ ಯೋಜನೆ ಅರ್ಜಿಗೆ ಜನರಿಂದ ಹಣ ವಸೂಲಿ, 3 ಸೈಬರ್ ಸೆಂಟರ್ಗಳ ವಿರುದ್ಧ ಎಫ್ಐಆರ್ ದಾಖಲು
ಹೀಗೆ ನದಿ ತೀರದಲ್ಲಿರುವ ಮೊಸಳೆಗಳು ಆಹಾರವನ್ನರಸಿ ಮೇಯಲು ಬರುವ ಜಾನುವಾರುಗಳ ಮೇಲೆ ಅಟ್ಯಾಕ್ ಮಾಡುತ್ತಿವೆಯಂತೆ. ಈ ಭಾಗದಲ್ಲಿ ನದಿ ತೀರದಲ್ಲಿ ಜಮೀನು ಹೊಂದಿರುವ ರೈತರು ವ್ಯವಸಾಯಕ್ಕಾಗಿ ಇದೇ ಕೃಷ್ಣಾ ನದಿ ತೀರಕ್ಕೆ ಬರಬೇಕು. ಒಮ್ಮೆಮ್ಮೆ ಇಂಥ ರೈತರ ಮೇಲೆಯೇ ದಾಳಿ ನಡೆಸಿವೆಯಂತೆ. ಮತ್ತೊಂದು ಕಡೆ ಒಂದು ಬದಿಯಿಂದ ಮತ್ತೊಂದು ಬದಿ ತೆಪ್ಪಗಳಲ್ಲಿ ತೆರಳುವ ಜನರ ಮೇಲೂ ಮೊಸಳೆಗಳು ದಾಳಿ ನಡೆಸುವ ಸಾಧ್ಯತೆ ಇದೆಯಂತೆ. ನಿತ್ಯ ಜೀವ ಭಯದಲ್ಲೇ ಓಡಾಡುತ್ತಿದ್ದೇವೆ ಅಂತಾರೆ ಸ್ಥಳೀಯರು.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಭಾಗದ ಜನರ ಕಷ್ಟ ಆಲಿಸಬೇಕಿದೆ. ಇಲ್ಲದಿದ್ದರೆ, ಮಕ್ಕಳು, ವೃದ್ಧರು ಸೇರಿ ಇಲ್ಲಿನ ಜನ ಕಷ್ಟದಲ್ಲಿಯೇ ಜೀವನ ಕಳೆಯೋ ದುಸ್ಥಿತಿ ಜೀವಂತವಾಗಿಯೇ ಇರತ್ತೆ. ಒಂದೊಮ್ಮೆ ತೆಪ್ಪದ ಸಂಚಾರದ ವೇಳೆ ಮೊಸಳೆಗಳು ದಾಳಿ ನಡೆಸಿ ಹೆಚ್ಚು ಕಡಿಮೆ ಆದರೆ ಆ ಜೀವಗಳಿಗೆ ಯಾರೂ ಹೊಣೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:55 pm, Thu, 27 July 23



